ಕನ್ನಡ ಚಿತ್ರರಂಗದ ಖ್ಯಾತ ನಟಿ ನಿಮಿಕಾ ರತ್ನಾಕರ್ ಅವರು ಕ್ರೀಡೆಯಲ್ಲೂ ಆಸಕ್ತಿ ತೋರಿದ್ದಾರೆ. ಖ್ಯಾತ ಕ್ರಿಕೆಟರ್ಗಳ ಜೊತೆ ಅವರಿಗೆ ಸ್ನೇಹ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸ ಫೋಟೋಗಳು ಲಭ್ಯವಿವೆ.
ಕ್ರಿಕೆಟರ್ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ನಿಮಿಕಾ ರತ್ನಾಕರ್ ಕೂಡ ಕುಟುಂಬ ಸಮೇತರಾಗಿ ಹಾಜರಿ ಹಾಕಿದ್ದರು.
ಈ ಸಮಾರಂಭಕ್ಕೆ ಶ್ರೇಯಸ್ ಅಯ್ಯರ್ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಮತ್ತು ನಿಮಿಕಾ ಅಚಾನಕ್ಕಾಗಿ ಭೇಟಿಯಾಗಿ ಸಂಭ್ರಮಿಸಿದ್ದಾರೆ. ಫೋಟೋ ಹಂಚಿಕೊಂಡು ಅವರು ಖುಷಿಪಟ್ಟಿದ್ದಾರೆ.
ನಿಮಿಕಾ ಕ್ರಿಕೆಟ್ ಪ್ರೇಮಿಯೂ ಹೌದು. ಕಳೆದ ಬಾರಿ ಆರ್ಸಿಬಿ ಫೈನಲ್ ಪಂದ್ಯ ನಡೆದಾಗ ಅಹಮದಾಬಾದ್ಗೆ ತೆರಳಿ ಗೆಲುವಿನ ಖುಷಿಯಲ್ಲಿ ಭಾಗವಹಿಸಿದ್ದರು. ಯಾವುದೇ ಕ್ರಿಕೆಟ್ ಜೊತೆಯಲ್ಲಿ ಅವರಿಗೆ ನಂಟು ಇದೆ.
ಮಂಗಳೂರಿನ ಬೆಡಗಿ ನಿಮಿಕಾ ರತ್ನಾಕರ್ ಅವರು ಚಿತ್ರರಂಗದಲ್ಲಿ ಆಯಕ್ಟೀವ್ ಆಗಿದ್ದಾರೆ. ನಟಿಯಾಗಿ ಖ್ಯಾತಿ ಪಡೆದಿರುವ ಅವರು ಸಿನಿಮಾದಲ್ಲಿಯೇ ಹಲವು ವಿಷಯಗಳಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಂಡಿದ್ದಾರೆ.




