
ಟೀಮ್ ಇಂಡಿಯಾದ ಆರಂಭಿಕ ಜೋಡಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಮತ್ತೆ ಜೊತೆಯಾಗಿದ್ದಾರೆ. ಆದರೆ ಈ ಬಾರಿ ಮೈದಾನದಲ್ಲಿ ಅಲ್ಲ. ಬದಲಾಗಿ ಖಾಸಗಿ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನಡೆಸಲಾದ ಚಿಟ್ ಚಾಟ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಅಭಿಷೇಕ್ ಶರ್ಮಾ ಕುರಿತು ಪಡುತ್ತಿರುವ ‘ಹೊಟ್ಟೆಕಿಚ್ಚ’ ಅನ್ನು ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ.
ಮಾರ್ಚ್ 2026 ರಲ್ಲಿ ನಡೆದ ಇಂಡಿಯಾ ಟುಡೇ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಒಳಗಿನ ಕೆಲವು ತಮಾಷೆ ಮತ್ತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಭಿಷೇಕ್ ಶರ್ಮಾ ವಿರುದ್ಧ ‘ಹೊಟ್ಟೆಕಿಚ್ಚು’ ಕೂಡ ಒಂದು.
ಟೀಮ್ ಇಂಡಿಯಾ ಎಲ್ಲಿಗೆ ಹೋದರೂ ಬಸ್ ಸುತ್ತುವರಿಯುವ ಅಭಿಮಾನಿಗಳು ಕೇವಲ “ಅಭಿಷೇಕ್, ಅಭಿಷೇಕ್” ಎಂದು ಕೂಗಿದರು. ಇದನ್ನು ನೋಡಿ ಉಳಿದ ಆಟಗಾರರು “ಅಭಿಮಾನಿಗಳಿಗೆ ನಾವು ಕಾಣಿಸುವುದೇ ಇಲ್ಲವೇ?” ಎಂದು ತಮಾಷೆ ಮಾಡುತ್ತಿದ್ದರು.
ಅಷ್ಟೇ ಅಲ್ಲದೆ ಅಭಿಷೇಕ್ ಶರ್ಮಾಗೆ ಸಿಗುತ್ತಿರುವ ಜನಪ್ರಿಯತೆಯನ್ನು ನೋಡಿ ಆಟಗಾರರು ತಮಾಷೆಯಾಗಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆ. “ನಾವೆಲ್ಲಾ ಇಲ್ಲಿ ಇಲ್ವಾ? ಅಭಿಷೇಕ್ ಮಾತ್ರ ಕಾಣಿಸುತ್ತಿದ್ದಾನಾ?” ಎಂದು ಕಿಚಾಯಿಸುತ್ತಿದ್ದರು ಸಂಜು ಸ್ಯಾಮ್ಸನ್ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಅಭಿಷೇಕ್ ಶರ್ಮಾ ಪ್ರಸ್ತುತ ತಂಡದ ಸೂಪರ್ ಸ್ಟಾರ್. ಅಭಿಮಾನಿಗಳಿಂದ ಅವರಿಗೆ ಅತಿಯಾದ ಪ್ರೀತಿ ಮತ್ತು ಪ್ರಚಾರ ಸಿಗುತ್ತಿದೆ. ಇದು ಬೇರೆ ಆಟಗಾರರಿಗೂ ಸಿಗಲಿ. ಹೀಗಾಗಿ ನೀನು ಬೇಗ ಮದುವೆಯಾಗು ಎಂದು ಸಂಜು ಸ್ಯಾಮ್ಸನ್ ಅಭಿಷೇಕ್ ಅವರ ಕಾಲೆಳೆದಿದ್ದಾರೆ.
ಇನ್ನು ಟಿ20 ಪಂದ್ಯದ ಫೈನಲ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿ 98 ರನ್‌ಗಳ ಸ್ಫೋಟಕ ಆರಂಭಿಕ ಜೊತೆಯಾಟವಾಡಿ ಭಾರತದ ಗೆಲುವಿಗೆ ಪ್ರಮುಖ ಕಾರಣ. ಈ ಉಡುಗೊರೆ ಸಂಜು 46 ರಲ್ಲಿ 89 ರನ್ ಬಾರಿಸಿ ಮಿಂಚಿದ್ದರು. ಅತ್ತ ಅಭಿಷೇಕ್ ಶರ್ಮಾ 21 ಬಾರಿ 52 ರನ್ ಬಾರಿಸಿದ್ದರು.
ಹೀಗಾಗಿ ಈ ಜೋಡಿಯನ್ನು “ಐಸ್ ಅಂಡ್ ಫೈರ್” ಎಂದು ಕರೆಯಬಹುದು. ಆದರೆ ಐಸ್ ಅಂಡ್ ಫೈರ್ ಬದಲಿಗೆ ಸಂಜು ಸ್ಯಾಮ್ಸನ್ ಮಾತ್ರ “ಫೈರ್ ಅಂಡ್ ಫೈರ್” (ಬೆಂಕಿ ಮತ್ತು ಬೆಂಕಿ) ಎಂದು ಬಣ್ಣಿಸಿದ್ದಾರೆ. ಈ ಮೂಲಕ ಅಭಿ-ಸಂಜು ಜೋಡಿಗೆ ಸಂಜು ಸ್ಯಾಮ್ಸನ್ ಬೆಂಕಿ ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಸದ್ಯ ಇಬ್ಬರು ದಾಂಡಿಗರು ವಿಶ್ರಾಂತಿಯಲ್ಲಿದ್ದಾರೆ, ಶೀಘ್ರದಲ್ಲೇ ಐಪಿಎಲ್‌ಗಾಗಿ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇನ್ನು ಅಭಿಷೇಕ್ ಶರ್ಮಾ ಸನ್ ರೈಸರ್ಸ್ ಹೈದರಾಬಾದ್ ತಂಡದ ಕ್ಯಾಂಪ್‌ಗೆ ಸೇರಲು ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಟ್ಟುಕೊಂಡಿದ್ದಾರೆ.