
ಮಂಡ್ಯ, ಮಾರ್ಚ್ 15: ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮುನಿಸು ಮುಂದುವರಿದಿದೆ. ಇತ್ತೀಚೆಗೆ ನಡೆದ ‘ಖೇಲೋ ಇಂಡಿಯಾ ವೈಬ್ರೆಂಟ್ ಮಂಡ್ಯ’ ಕಾರ್ಯಕ್ರಮವು ಮೈತ್ರಿ ಪಕ್ಷಗಳ ನಡುವಿನ ಬಿರುಕನ್ನು ಮತ್ತಷ್ಟು ಎತ್ತಿ ತೋರಿಸಿದೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಫ್ಲೆಕ್ಸ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ರಾಜ್ಯ ಬಿಜೆಪಿ ನಾಯಕರ ಯಾವುದೇ ಫೋಟೋಗಳನ್ನು ಹಾಕಿರಲಿಲ್ಲ.
ಈ ನಡೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜೆಡಿಎಸ್ ನ ರಾಜ್ಯ ಬಿಜೆಪಿ ನಾಯಕರ ತಮ್ಮ ಫ್ಲೆಕ್ಸ್ ಗಳಿಂದಾಗಿ, ಮೈತ್ರಿಯ ನಡುವೆ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಜೆಡಿಎಸ್ ನಾಯಕರ ಈ ನಡೆಯಿಂದ ಮಂಡ್ಯದ ಬಿಜೆಪಿ ಸಹ ಜೆಡಿಎಸ್ ನಾಯಕರ ವಿರುದ್ಧ ಮುನಿಸುಗೊಂಡಿದ್ದಾರೆ. ಈ ಘಟನೆಯು ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.