Headlines

Virat Kohli Hairstyleಐಪಿಎಲ್ ಟೂರ್ನಿಗಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ, ಟ್ರೋಫಿ ಗೆಲುವಿಗೂ ಇದೆ ನಂಟು | Rcb Virat Kohli Unveils New Hairstyle Ahead Of Ipl 2026 Season Haircut Goes Viral

Virat Kohli Hairstyleಐಪಿಎಲ್ ಟೂರ್ನಿಗಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ, ಟ್ರೋಫಿ ಗೆಲುವಿಗೂ ಇದೆ ನಂಟು | Rcb Virat Kohli Unveils New Hairstyle Ahead Of Ipl 2026 Season Haircut Goes Viral



Virat Kohli Hairstyleಐಪಿಎಲ್ ಟೂರ್ನಿಗಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ, ಟ್ರೋಫಿ ಗೆಲುವಿಗೂ ಇದೆ ನಂಟು | Rcb Virat Kohli Unveils New Hairstyle Ahead Of Ipl 2026 Season Haircut Goes Viral

ಐಪಿಎಲ್ ಟೂರ್ನಿಗಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ, ಟ್ರೋಫಿ ಗೆಲುವಿಗೂ ಇದೆ ನಂಟು, ಕೊಹ್ಲಿ ಹೇರ್‌ಸ್ಟೈಲ್ ಬದಲಿಸಿ ಕಣಕ್ಕಿಳಿದಾಗ ಟ್ರೋಫಿ ಒಲಿದಿದೆ. ಇದೀಗ 2026ರ ಐಪಿಎಲ್ ಟ್ರೋಫಿ ಗೆಲುವಿನ ಸೂಚನೆ ಕೊಹ್ಲಿ ನೀಡಿದ್ರಾ?

ಬೆಂಗಳೂರು (ಮಾ.15) ಐಪಿಎಲ್ 2026 ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ. ಹಾಲಿ ಚಾಂಪಿಯನ್ ಆರ್‌ಸಿಬಿ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಹೋರಾಟ ನಡೆಸಲಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ಟ್ರೈನಿಂಗ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಗಾಗಿ ತಮ್ಮ ಹೇರ್‌ಸ್ಟೈಲ್ ಬದಲಿಸಿದ್ದಾರೆ. ಹೊಸ ಹೇರ್ ಸ್ಟೈಲ್‌ನಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಕಣಕ್ಕಿಳಿಯುತ್ತಿದ್ದಾರೆ.

ಟ್ರೆಂಡಿ ಲುಕ್‌ನಲ್ಲಿ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿಗೆ ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಪ್ ರೇಜರ್ ಫೇಡ್ ಶೈಲಿಯ ಕಟ್ಟಿಂಗ್ ಮಾಡಿಸಿಕೊಂಡಿದ್ದಾರೆ. ಟಾಪ್‌ನಲ್ಲಿ ಹೇರ್ ಬಿಟ್ಟಿದ್ದಾರೆ. ಇದರ ಜೊತೆಗೆ ತಮ್ಮ ಬಿಯರ್ಡ್‌ ಶೇಪ್ ಮಾಡಿಸಿದ್ದಾರೆ. ಕೆಂಟೆಪರರಿ ಲುಕ್‌ನಲ್ಲಿ ಟ್ರೆಂಡಿಯಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಹೊಸ ಹೇರ್‌ಸ್ಟೈಲ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಆರ್‌ಸಿಬಿ ಅಭಿಮಾನಿಗಳು ಇದೇ ಹೇರ್‌ಸ್ಟೈಲ್ ಮೊರೆ ಹೋಗಿದ್ದಾರೆ.

2025ರ ಐಪಿಎಲ್ ಟೂರ್ನಿಗೂ ಹೊಸ ಹೇರ್‌ಸ್ಟೈಲ್

2025ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಸಿಗ್ನೇಚರ್ ಸ್ಟೈಲ್ ಹೇರ್‌ಸ್ಟೈಲ್‌ನಿಂದ ಕೊಂಚ ಭಿನ್ನವಾಗಿ ಕಟ್ಟಿಂಗ್ ಮಾಡಿಸಿದ್ದರು. ಸೈಡ್ ಫೇಡ್ ಹಾಗೂ ಸಿಗ್ನೇಚರ್ ಕ್ವಿಫ್ ಸ್ಟೈಲ್‌ನಲ್ಲಿ ಹೇರ್ ಸ್ಟೈಲ್ ಮಾಡಿದ್ದರು. ಇನ್ನು ಬಿಯರ್ಡ್ ಕೊಂಚ ಟ್ರಿಮ್ ಮಾಡಿ ಆನ್ ಫೀಲ್ಡ್ ಹಾಗೂ ಆಪ್ ದಿ ಫೀಲ್ಡ್‌ನಲ್ಲೂ ಹೆಚ್ಚು ಸ್ಟೈಲೀಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ 2025ರಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹಲವು ಸರಣಿಗಳಲ್ಲಿ ವಿರಾಟ್ ಕೊಹ್ಲಿ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಬಾರಿ ಟೀಂ ಇಂಡಿಯಾ ಟೂರ್ನಿ ಗೆದ್ದುಕೊಂಡಿದೆ. ಇದೀಗ 2026ರ ಐಪಿಎಲ್ ಟೂರ್ನಿಗೆ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳವ ಮೂಲಕ ಈ ಬಾರಿಯೂ ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡಲಿದ್ದಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2025ರಲ್ಲಿ ಗೆಲುವಿನ ವರೆಗೆ ಸಂಭ್ರಮ, ಬಳಿಕ ದುರಂತ

2025ರಲ್ಲಿ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನದ ಮೂಲಕ ಟ್ರೋಫಿ ಗೆದ್ದಿತ್ತು. ಆರ್‌ಸಿಬಿ ಸಂಭ್ರಮ ಟ್ರೋಫಿ ಗೆಲುವಿನ ವರೆಗೆ ಎಲ್ಲವೂ ಉತ್ತಮವಾಗಿತ್ತು. ಯಾವಾಗ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಣೆ ಆರಂಭಗೊಂಡಿತೋ, ಅಲ್ಲಿಂದ ಆರ್‌ಸಿಬಿ ಗೆಲುವಿನ ಸಂಭ್ರಮ ಇಲ್ಲದಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿತ್ತು. 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ಬೆಂಗಳೂರಿನಿಂದ ದೂರ ಸರಿಯಲು ಆರ್‌ಸಿಬಿ ನಿರ್ಧರಿಸಿತ್ತು. ಆದರೆ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿ ಆರ್‌ಸಿಬಿ ಹಾಗೂ ಕರ್ನಾಟಕ ಸರ್ಕಾರದ ಜೊತೆ ಸತತ ಮಾತುಕತೆ ನಡೆಸಿ ಮತ್ತೆ ಬೆಂಗಳೂರಿನಲ್ಲೇ ಪಂದ್ಯ ಆಯೋಜನೆಗೆ ನರೆವಾಗಿದೆ.



Source link

Leave a Reply

Your email address will not be published. Required fields are marked *