ಬೆಂಗಳೂರಿನ ಇಂದಿರಾನಗರದ ಹಾಸ್ಟೆಲ್‌ನಲ್ಲಿ ವಾಸವಿದ್ದ ಯುವತಿಗೆ, ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಮಾರ್ಚ್ 11 ರಂದು ಯುವತಿ ಮತ್ತು ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು, ಈ ಸಂಬಂಧ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಇಂದಿರಾ ನಗರದ ಹಾಸ್ಟೆಲ್ ನಲ್ಲಿ ವಾಸವಾಗಿರುವ ಯುವತಿಗೆ ಯುವಕನೋರ್ವ ಕಿರುಕುಳ ನೀಡಿರುವ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿರುವ ಆರೋಪ ಯುವಕನ ವಿರುದ್ಧ ಕೇಳಿ ಬಂದಿದೆ.

ಕೇರಳ ಮೂಲದ ಲಿಸ್ಸಾ (28) (ಹೆಸರು ಬದಲಾಯಿಸಲಾಗಿದೆ) ಇಂದಿರಾನಗರದ ಹಾಸ್ಟೆಲ್‌ನಲ್ಲಿದ್ದು, ಯುವಕ ಮನು ಶರ್ಮಾ ವಿರುದ್ದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರ್ಚ್ 11ರಂದು ಹಾಸ್ಟೆಲ್‌ನ ಗೇಮಿಂಗ್ ಝೋನ್‌ಗೆ ಬಂದು ಮನುಶರ್ಮಾ ಗಲಾಟೆ ಮಾಡಿದ್ದಾನೆ. ಅಸಭ್ಯ ಪದಗಳಿಂದ ನಿಂದಿಸಿದ್ದಾನೆ ಲಿಸ್ಸಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮನು ಶರ್ಮಾ ಎಂಬಾತ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದಾನೆ. ಲಿಸ್ಸಾ ಪ್ರೀತಿಯನ್ನು ನಿರಾಕರಿಸಿದಾಗ ಆಕೆಯ ಗೆಳತಿ ರೂಪದರ್ಶಿ (ಹೆಸರು ಬದಲಾಯಿಸಲಾಗಿದೆ) ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾನೆ.

ಮಾರ್ಚ್ 11ರ ರಾತ್ರಿ 8.50 ರಿಂದ 9.50ರ ವೇಳೆಗೆ ಹಾಸ್ಟೆಲ್ ಆವರಣದಲ್ಲಿ ಮನು ಶರ್ಮಾ ಜೋರಾಗಿ ಕಿರುಚಾಡುತ್ತಾ ಗಲಾಟೆ ಮಾಡಿದ್ದಾನೆ. ಲಿಸ್ಸಾ ಮತ್ತು ರೂಪದರ್ಶಿ ಅವರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ನಂತರ ಇಬ್ಬರ ಮೇಲೆಯೂ ಹಲ್ಲೆ ನಡೆಸಲು ಮನು ಶರ್ಮಾ ಮುಂದಾಗಿದ್ದಾನೆ.

ಇದನ್ನೂ ಓದಿ: ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್ ಹಾಕಿ ಪ್ರಾಣ ಬಿಟ್ಟ ಮಹಿಳೆ

ಮನು ಶರ್ಮಾ ಸಹ ಲಿಸ್ಸಾ ವಾಸವಾಗಿರುವ ಹಾಸ್ಟೆಲ್‌ನಲ್ಲಿದ್ದಾನೆ. ಪ್ರೀತಿ ನಿರಾಕರಣೆ ಹಿನ್ನೆಲೆ ಗಲಾಟೆ ಮಾಡಿದ್ದು, ಈ ಎಲ್ಲಾ ದೃಶ್ಯಗಳು ಹಾಸ್ಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಿಸ್ಸಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಂಕುಳಲ್ಲಿ ಮಗು, ಕೈಯಲ್ಲಿ ಕಲ್ಲಿನ ಚಿಪ್ಪು; ತುತ್ತಿನ ಚೀಲ ತುಂಬಿಸಿಕೊಳ್ಳುವ ತಾಯಿ ಕಂಠಕ್ಕೆ ಮನಸೋತ ಜನ್ರು!

Source link
Bengaluru: ರಿಲೇಶನ್‌ಶಿಪ್ ಬೆಳೆಸುವಂತೆ ಯುವತಿಗೆ ಕಿರುಕುಳ; ಹಾಸ್ಟೆಲ್‌ನಲ್ಲಿ ಯುವಕನ ಗಲಾಟೆ