Headlines

‘ಟಿ20 ವಿಶ್ವಕಪ್ ಗೆಲುವು ಬರೀ ಆರಂಭವಷ್ಟೇ’: ಇದು ಟೀಂ ಇಂಡಿಯಾ ಯುಗವೆಂದು ಗುಡುಗಿದ ರೋಹಿತ್ ಶರ್ಮಾ | Rohit Sharma Confident India Winning Momentum Will Continue In World Cricket Kvn

‘ಟಿ20 ವಿಶ್ವಕಪ್ ಗೆಲುವು ಬರೀ ಆರಂಭವಷ್ಟೇ’: ಇದು ಟೀಂ ಇಂಡಿಯಾ ಯುಗವೆಂದು ಗುಡುಗಿದ ರೋಹಿತ್ ಶರ್ಮಾ | Rohit Sharma Confident India Winning Momentum Will Continue In World Cricket Kvn



‘ಟಿ20 ವಿಶ್ವಕಪ್ ಗೆಲುವು ಬರೀ ಆರಂಭವಷ್ಟೇ’: ಇದು ಟೀಂ ಇಂಡಿಯಾ ಯುಗವೆಂದು ಗುಡುಗಿದ ರೋಹಿತ್ ಶರ್ಮಾ | Rohit Sharma Confident India Winning Momentum Will Continue In World Cricket Kvn

ಟೀಂ ಇಂಡಿಯಾದ ಗೆಲುವಿನ ಓಟ ಮುಂದಿನ ವರ್ಷಗಳಲ್ಲಿಯೂ ಮುಂದುವರಿಯಲಿದೆ ಎಂದು ಮಾಜಿ ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುರುಷ ಮತ್ತು ಮಹಿಳಾ ತಂಡಗಳು ಇತ್ತೀಚೆಗೆ ಗೆದ್ದಿರುವ ವಿಶ್ವಕಪ್‌ಗಳು ಈ ಪ್ರಾಬಲ್ಯದ ಆರಂಭವಷ್ಟೇ ಎಂದಿದ್ದಾರೆ.

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದಿನ ವರ್ಷಗಳಲ್ಲೂ ಮುಂದುವರಿಯಲಿದೆ ಎಂದು ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ಮುಂಬೈನಲ್ಲಿ ನಡೆದ ಟಿ20 ಮುಂಬೈ ಲೀಗ್‌ನ ನಾಲ್ಕನೇ ಸೀಸನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುರುಷ ಮತ್ತು ಮಹಿಳಾ ತಂಡಗಳು ವಿಶ್ವ ಮಟ್ಟದಲ್ಲಿ ಕಿರೀಟಗಳನ್ನು ಗೆಲ್ಲುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಟಿ20 ವಿಶ್ವಕಪ್ ಗೆಲುವು ಸುದೀರ್ಘ ಪ್ರಾಬಲ್ಯದ ಆರಂಭ ಎಂದು ರೋಹಿತ್ ಬಣ್ಣಿಸಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ನಮ್ಮ ತಂಡಗಳು ಸಾಧನೆ ಮಾಡ್ತಿರೋದನ್ನ ನೋಡಿದ್ರೆ ತುಂಬಾ ಖುಷಿ, ಹೆಮ್ಮೆ ಆಗುತ್ತೆ. ಬರೀ ಪುರುಷರ ತಂಡ ಮಾತ್ರವಲ್ಲ, ಮುಂಬೈನಲ್ಲಿ ನಮ್ಮ ಮಹಿಳಾ ತಂಡ ಏಕದಿನ ವಿಶ್ವಕಪ್ ಎತ್ತಿ ಹಿಡಿದಿದ್ದು ಕೂಡ ಅದ್ಭುತ ಕ್ಷಣವಾಗಿತ್ತು. ಈಗ ಟಿ20 ವಿಶ್ವಕಪ್‌ನಲ್ಲಿ ಪುರುಷರ ತಂಡದ ಪ್ರದರ್ಶನ ಕೂಡ ಅಸಾಧಾರಣವಾಗಿತ್ತು,” ಎಂದು ರೋಹಿತ್ ಹೇಳಿದರು.

ಗೆಲುವಿನ ಓಟವನ್ನು ಮುಂದುವರಿಸುವ ಮಹತ್ವದ ಬಗ್ಗೆಯೂ ರೋಹಿತ್ ನೆನಪಿಸಿದರು. “ಈ ಟಿ20 ವಿಶ್ವಕಪ್ ಗೆಲುವು ಒಂದು ಆರಂಭವಷ್ಟೇ ಅಂತ ನಾನು ನಂಬಿದ್ದೇನೆ. ಇನ್ನು ಮುಂದೆ ನಾವು ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಕ್ರಿಕೆಟ್‌ನಲ್ಲಿ ಮೊಮೆಂಟಮ್ ಅನ್ನೋದು ಬಹಳ ಮುಖ್ಯ. ಸದ್ಯ ನಮ್ಮ ಪುರುಷ ಮತ್ತು ಮಹಿಳಾ ತಂಡಗಳಿಗೆ ಆ ಆತ್ಮವಿಶ್ವಾಸ ಇದೆ. ಇದನ್ನೇ ಮುಂದಕ್ಕೂ ಕೊಂಡೊಯ್ಯುತ್ತೇವೆಂಬ ಭರವಸೆ ನನಗಿದೆ,” ಎಂದು ಮಾಜಿ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ

2024ರ ಜೂನ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆಲ್ಲುವುದರೊಂದಿಗೆ ಭಾರತದ ಈ ಗೆಲುವಿನ ಯಾತ್ರೆ ಶುರುವಾಗಿತ್ತು. ಇದಾದ ನಂತರ, 2025ರ ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನೂ ಭಾರತ ತನ್ನದಾಗಿಸಿಕೊಂಡಿತು. ಬಳಿಕ ತವರಿನಲ್ಲೇ ಟಿ20 ವಿಶ್ವಕಪ್ ಉಳಿಸಿಕೊಂಡ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆಯನ್ನೂ ಭಾರತ ತಂಡ ಮಾಡಿತು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಈ ದಾಖಲೆ ನಿರ್ಮಾಣವಾಯಿತು. ಇನ್ನು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಯುಷ್ ಮಾತ್ರೇ ನಾಯಕತ್ವದ ಪುರುಷರ ತಂಡ ಜಿಂಬಾಬ್ವೆಯಲ್ಲಿ ಮತ್ತು ನಿಕಿ ಪ್ರಸಾದ್ ನಾಯಕತ್ವದ ಮಹಿಳಾ ತಂಡ ಮಲೇಷ್ಯಾದಲ್ಲಿ ವಿಶ್ವಕಿರೀಟಕ್ಕೆ ಮುತ್ತಿಕ್ಕಿದವು.

ಭಾರತದ ಮುಂದಿನ ಗುರಿ

ಜೂನ್ 12ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್ ಭಾರತದ ಮುಂದಿರುವ ಪ್ರಮುಖ ಗುರಿಯಾಗಿದೆ. ಗ್ರೂಪ್ 1ರಲ್ಲಿ ಭಾರತ ತಂಡವು ಪಾಕಿಸ್ತಾನ, ನೆದರ್ಲೆಂಡ್ಸ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಜೊತೆ ಸ್ಪರ್ಧಿಸಲಿದೆ.



Source link

Leave a Reply

Your email address will not be published. Required fields are marked *