
ಬೆಂಗಳೂರು, ಮಾರ್ಚ್ 15: ಅವರದ್ದು ಕರ್ನಾಟಕದ ಗಡಿ ಭಾಗ. ಪಾವಗಡ ಮೂಲದ ಯುವತಿಗೆ ಅದೇ ಯುವಕನೊಂದಿಗೆ ಮದುವೆಯಾಯಿತು. ಇನ್ನೇನು ಚೆನ್ನಾಗಿ ಇರ್ತಾರೆ ಎನ್ನುವಷ್ಟರಲ್ಲೇ ವಿವಾಹಿತ ಮಹಿಳೆ ಹೆಣವಾಗಿದ್ದಾಳೆ (ಸಾವು). ವರಿಸಿದವನೇ ಕೊಂದಿದ್ದಾನೆ ಎನ್ನವು ಆರೋಪ ಕೇಳಿಬರ್ತಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಬೆಂಗಳೂರಿನ ಯಲಹಂಕ ನ್ಯೂಟೌನ್ ನ ಬೃಂದಾವನ ಲೇಔಟ್ ನಲ್ಲಿ ವಾಸವಿದ್ದ 24 ವರ್ಷದ ಶೃತಿ ಇಂದು ಹೆಣವಾಗಿ ಬಿದ್ದಿದ್ದಾಳೆ. ಕಳೆದ 2024ರ ಡಿಸೆಂಬರ್‌ನಲ್ಲಿ ಪವನ್ ಕಲ್ಯಾಣ್ ಎಂಬಾತನ ಜೊತೆ ಶೃತಿ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಆರೋಪಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಶೃತಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಿಯನ್ನು ಸಲ್ಲಿಸಲಾಯಿತು. ಈ ವಿಚಾರಕ್ಕೆ ಜಗಳವೂ ಆಗಿದೆ. ಈ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೂ ಕಿರುಕುಳ ನಿಂತಿರಲಿಲ್ಲ. ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶೃತಿಯ ಶವ ಇದೆ.
ಅಳಿಯನ ವಿರುದ್ಧ ಶೃತಿ ವಿರುದ್ಧ ಆಕ್ರೋಶ
ಇದು ಆತ್ಮಹತ್ಯೆಯಲ್ಲ, ಪತಿಯೇ ಕುತ್ತಿಗೆ ಬಿಗಿದು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾನೆ ಅನ್ನೋದು ಶೃತಿ ಪೋಷಕರ ಆಕ್ರೋಶ. ಸದ್ಯ ಯಲಹಂಕ ನ್ಯೂಟೌನ್, ಮೃತ ಕೊಲೆ ಕುಟುಂಬ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಪತಿ ಪವನ್ ಕಲ್ಯಾಣ್ ಅವರನ್ನು ಬಂಧಿಸಿದ್ದಾರೆ.
ಇದೆಲ್ಲಾ ನಡೆದ ಬಳಿಕ ಇಂದು ಆಸ್ಪತ್ರೆಯ ಮುಂಭಾಗದಲ್ಲಿ ಶೃತಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ರಸ್ತೆಯ ಮೇಲೆ ಬಿದ್ದು ಹೊರಳಾಡುತ್ತಾ, “ನಮ್ಮ ಮಕ್ಕಳನ್ನು ಕೊಂದವರಿಗೆ ಶಿಕ್ಷೆಯಾಗಲಿ, ನಮಗೆ ನ್ಯಾಯ ಬೇಕು” ಎಂದು ಗೋಳಾಡಿದ್ದಾರೆ. ಹೆತ್ತವರ ಆಕ್ರಂದನ ಎಂತವರಿಗೂ ಕಣ್ಣೀರು ತರಿಸುತ್ತದೆ. ಸದ್ಯಕ್ಕೆ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಿದೆ. ಆದರೆ ವರದಕ್ಷಿಣೆ ಎಂಬ ಪಿಡುಗಿಗೆ ಮತ್ತೊಂದು ಜೀವವನ್ನು ಬಲಿ ಪಡೆದಿರುವುದು ಮಾತ್ರ ದುರದೃಷ್ಟಕರ
ಇದನ್ನೂ ಓದಿ: ವೈಯರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡಿದ್ದ ಪ್ರಿಯಕರ!
ಮದುವೆ ಮಾಡಿಕೊಂಡಿರುವವರು ಒಟ್ಟಿಗೆ ಬದುಕಿ, ಇಲ್ಲವಾದರೆ ಬೇರೆಯಾಗಿ ಬದುಕಿ. ಇಲ್ಲಿ ಮುಖ್ಯವಾಗಿ ಬದುಕುವುದೇ ವಿನಃ ಕೊಲ್ಲುವುದಲ್ಲ. ಜೊತೆಗೆ ಸಾಯುವುದು ಅಲ್ಲ. ಸದ್ಯ ಶೃತಿ ಪ್ರಕರಣದಲ್ಲಿ ಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.