
ಜನವರಿ, ಮಾರ್ಚ್ 15: ಏಳನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಮುಗಿದಿದೆ. ಎಂಟನೇ ವೇತನ ಆಯೋಗ ಜಾರಿಗೆ ಬರುತ್ತಿದೆ. ಎಂಟನೇ ವೇತನ ಆಯೋಗವು ಕೋಟ್ಯಂತರ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸಂಬಳ, ಪಿಂಚಣಿ, ಭತ್ಯೆಗಳನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದೆ. ಅಧಿಸೂಚನೆಯಾಗಿ 18 ತಿಂಗಳೊಳಗೆ ಆಯೋಗವು ತನ್ನ ಈ ಜವಾಬ್ದಾರಿಯನ್ನು ಮುಗಿಸಬೇಕಾಗಿದೆ. ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆಗೆ ಸಂಬಂಧಿಸಿದ ಉದ್ಯೋಗಿಗಳು, ಪಿಂಚಣಿದಾರರು, ಉದ್ಯೋಗಿಗಳ ಒಕ್ಕೂಟಗಳು ಅಭ್ಯರ್ಥಿಗಳಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. 2026 ರ ಏಪ್ರಿಲ್ 30 ರವರೆಗೂ ಆನ್‌ಲೈನ್ ಪೋರ್ಟಲ್‌ನಲ್ಲಿ ಈ ಸಲಹೆಗಳನ್ನು ಕಳುಹಿಸುವ ಅವಕಾಶ ಇರುತ್ತದೆ.
ಎಂಟನೇ ವೇತನ ಆಯೋಗದ ಕಾರ್ಯಾಚರಣೆ ನಿಯಮ ಅಥವಾ ಟರ್ಮ್ಸ್ ಆಫ್ ರೆಫರೆನ್ಸ್ 2025 ರ ನವೆಂಬರ್ 3 ರಂದು ಪ್ರಕಟಿಸಲಾಗಿದೆ. ಈದಾಗಿ 18 ತಿಂಗಳು ಎಂದರೆ 2027ರ ಏಪ್ರಿಲ್-ಮೇ ತಿಂಗಳೊಳಗೆ ಆಯೋಗವು ವೇತನ ನಿಗದಿಗೆ ಅಂತಿಮ ಸೂತ್ರಗಳನ್ನು ಶಿಫಾರಸು ಮಾಡಲು.
ಇದನ್ನೂ ಓದಿ: ಪ್ಲೇಸ್ಟೋರ್‌ನಲ್ಲಿ ಚಾಟ್‌ಜಿಪಿಟಿ, ಫ್ಲಿಪ್‌ಕಾರ್ಟ್ ಅನ್ನು ಮೀರಿಸಿದ ಎಲ್ಪಿಜಿ ಬುಕಿಂಗ್ ಆಯಪ್
ದೇಶದಲ್ಲಿ ಸದ್ಯ ಸಕ್ರಿಯವಾಗಿರುವ 50 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿದ್ದಾರೆ. 69 ಲಕ್ಷ ಪಿಂಚಣಿದಾರರಿದ್ದಾರೆ. ವೈದ್ಯರ ಸಂಖ್ಯೆ ಒಟ್ಟು 1.2 ಕೋಟಿ ಆಗಬಹುದು.
ಎಂಟನೇ ವೇತನ ಆಯೋಗವು ಎಷ್ಟು ವೇತನಕ್ಕೆ ಶಿಫಾರಸು ಮಾಡಬಹುದು?
ಎಂಟನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ ಮಾಡಬಹುದಾದ ವೇತನ ಏರಿಕೆ ಶೇ. 20-35ರಷ್ಟು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ವೇತನ ಪರಿಷ್ಕರಣೆಯಲ್ಲಿ ಮುಖ್ಯ ಭಾಗವಾಗಿರುವುದು ಫಿಟ್ಮೆಂಟ್ ಫ್ಯಾಕ್ಟರ್. ಇದು 2.4 ರಿಂದ 3.0 ಶ್ರೇಣಿಯಲ್ಲಿ ಇರಬಹುದು. ಮೂಲವೇತನ ಪರಿಷ್ಕರಣೆಗೆ ಆಧಾರವಾಗುವ ಈ ಫಿಟ್ಮೆಂಟ್ ಫ್ಯಾಕ್ಟರ್ ಹಲವು ಆರ್ಥಿಕ ಅಂಶಗಳನ್ನು ಆಧರಿಸಿದೆ.
ಇದನ್ನೂ ಓದಿ: ಸರ್ಕಾರದಿಂದ ಎಲ್ ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ
ಮುಂದಿನ 12-18 ತಿಂಗಳಿನಲ್ಲಿ ಹಣದುಬ್ಬರ ಎಷ್ಟಿರಬಹುದು ಎಂಬಿತ್ಯಾದಿ ಆರ್ಥಿಕ ಅಂಶಗಳು ಎಂಟನೇ ವೇತನ ಆಯೋಗದ ಶಿಫಾರಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಬಾರಿ ಸಾಮಾನ್ಯವಾಗಿ ಸುಮಾರು ಶೇ. 20-35ರಷ್ಟಿರಬಹುದು. 7ನೇ ವೇತನ ಆಯೋಗದಿಂದ ಶೇ. 23-25ರಷ್ಟು ಸಂಬಳ ಇದೆ. ಅದಕ್ಕೂ ಹಿಂದಿನ 6ನೇ ವೇತನ ಆಯೋಗವು ಶೇ. 40ರಷ್ಟು ವೇತನ ಹೆಚ್ಚಳಕ್ಕೆ ಶಿಫರಸು ಮಾಡಿತ್ತು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ