Nawazuddin Siddiqui: ‘ಬಾಲಿವುಡ್‌ನಲ್ಲಿ ಸುಳ್ಳು ಸಿನಿಮಾಗಳದ್ದೇ ಹಾವಳಿ’ ಎಂದ ನಟ ನವಾಜುದ್ದೀನ್ ಸಿದ್ದಿಕಿ; ಸೋಷಿಯಲ್ ಮೀಡಿಯಾದಲ್ಲಿ ಅಲ್ಲೋಲಕಲ್ಲೋಲ! | Nawazuddin Siddiqui Slams Fake Bollywood Films Sparking Dhurandhar Debate

Nawazuddin Siddiqui: ‘ಬಾಲಿವುಡ್‌ನಲ್ಲಿ ಸುಳ್ಳು ಸಿನಿಮಾಗಳದ್ದೇ ಹಾವಳಿ’ ಎಂದ ನಟ ನವಾಜುದ್ದೀನ್ ಸಿದ್ದಿಕಿ; ಸೋಷಿಯಲ್ ಮೀಡಿಯಾದಲ್ಲಿ ಅಲ್ಲೋಲಕಲ್ಲೋಲ! | Nawazuddin Siddiqui Slams Fake Bollywood Films Sparking Dhurandhar Debate



Nawazuddin Siddiqui: ‘ಬಾಲಿವುಡ್‌ನಲ್ಲಿ ಸುಳ್ಳು ಸಿನಿಮಾಗಳದ್ದೇ ಹಾವಳಿ’ ಎಂದ ನಟ ನವಾಜುದ್ದೀನ್ ಸಿದ್ದಿಕಿ; ಸೋಷಿಯಲ್ ಮೀಡಿಯಾದಲ್ಲಿ ಅಲ್ಲೋಲಕಲ್ಲೋಲ! | Nawazuddin Siddiqui Slams Fake Bollywood Films Sparking Dhurandhar Debate

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಇತ್ತೀಚೆಗೆ ಹಿಂದಿ ಚಿತ್ರರಂಗದ ಬಗ್ಗೆ ಒಂದು ದೊಡ್ಡ ಹೇಳಿಕೆ ನೀಡಿದ್ದಾರೆ. ಸದ್ಯ ಇಂಡಸ್ಟ್ರಿಯಲ್ಲಿ ‘ಸುಳ್ಳು ಮತ್ತು ಫೇಕ್’ ಸಿನಿಮಾಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಅವರ ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಹೊಸ ವಿವಾದ ಹುಟ್ಟುಹಾಕಿದ್ರಾ ನವಾಜುದ್ದೀನ್ ಸಿದ್ಧಿಕಿ?

ನಟ ನವಾಜುದ್ದೀನ್ ಸಿದ್ದಿಕಿ ಇತ್ತೀಚೆಗೆ ಎನ್‌ಡಿಟಿವಿಯ ‘ಕ್ರಿಯೇಟರ್ಸ್ ಮಂಚ್ ಸೀಸನ್ 2’ ಕಾರ್ಯಕ್ರಮದಲ್ಲಿ ಬಾಲಿವುಡ್ ಸಿನಿಮಾಗಳ ಸದ್ಯದ ಸ್ಥಿತಿಯ ಬಗ್ಗೆ ನೇರವಾಗಿಯೇ ಪ್ರಶ್ನೆ ಎತ್ತಿದ್ದಾರೆ. ಈಗಿನ ಕಾಲದಲ್ಲಿ ಬರೀ “ಫೇಕ್” ಮತ್ತು “ಸುಳ್ಳು” ಸಿನಿಮಾಗಳನ್ನೇ ಮಾಡಲಾಗುತ್ತಿದೆ, ಆದರೆ ಸತ್ಯ ಅನ್ನೋದೇ ಎಲ್ಲಕ್ಕಿಂತ ಮುಖ್ಯ ಅಂತ ಅವರು ಹೇಳಿದ್ದಾರೆ. ಜಗತ್ತಿನಲ್ಲಿ ಏನು ನಡೀತಿದೆ, ಯಾವ ರೀತಿ ಕಥೆಗಳನ್ನು ಕಟ್ಟಲಾಗುತ್ತಿದೆ ಅನ್ನೋದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ ನವಾಜ್. ಅವರು ಯಾವುದೇ ನಿರ್ದಿಷ್ಟ ಸಿನಿಮಾದ ಹೆಸರು ಹೇಳಿಲ್ಲ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು, ಇದು ‘ಧುರಂಧರ್: ದಿ ರಿವೆಂಜ್’ ಮತ್ತು ‘ದಿ ಕೇರಳ ಸ್ಟೋರಿ’ಯಂತಹ ಚಿತ್ರಗಳಿಗೆ ಕೊಟ್ಟ ಟಾಂಗ್ ಅಂತ ಚರ್ಚೆ ಶುರು ಮಾಡಿದ್ದಾರೆ.

‘ಫೇಕ್ ಫಿಲ್ಮ್ಸ್’ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಟಾಂಗ್

ಎನ್‌ಡಿಟಿವಿಯ ‘ಕ್ರಿಯೇಟರ್ಸ್ ಮಂಚ್ ಸೀಸನ್ 2’ ಕಾರ್ಯಕ್ರಮದಲ್ಲಿ, ಜಗತ್ತಿನಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ ಮತ್ತು ಸಿನಿಮಾಗಳ ಜವಾಬ್ದಾರಿ ಬಗ್ಗೆ ನವಾಜುದ್ದೀನ್‌ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟ, “ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಅಗತ್ಯವಿಲ್ಲ. ಸತ್ಯ ಅನ್ನೋದು ಬಹಳ ಮುಖ್ಯ. ಇವತ್ತಿನ ದಿನದಲ್ಲಿ ಪ್ರತಿಯೊಬ್ಬರಿಗೂ ಸತ್ಯ ಗೊತ್ತಿದೆ. ಈಗ ಯಾವ ಥರದ ಸಿನಿಮಾಗಳು ಬರ್ತಿವೆ, ಅದರ ಹಿಂದಿನ ಸತ್ಯ ಏನು ಅಂತ ನಿಮಗೂ ಗೊತ್ತು, ಆದರೆ ನೀವು ಹೇಳಲ್ಲ” ಎಂದರು.

ನಮ್ಮಲ್ಲಿ ಸುಳ್ಳು ಸಿನಿಮಾಗಳು ಬರ್ತಿವೆ: ನವಾಜುದ್ದೀನ್

ಕಥೆ-ಆಧಾರಿತ (ನ್ಯಾರೇಟಿವ್) ಸಿನಿಮಾಗಳ ಬಗ್ಗೆ ಕೇಳಿದಾಗ, ನವಾಜುದ್ದೀನ್ ಸಿದ್ದಿಕಿ, “ಇಲ್ಲ, ನಮ್ಮಲ್ಲಿ ಸುಳ್ಳು ಸಿನಿಮಾಗಳನ್ನು ಮಾಡಲಾಗುತ್ತಿದೆ. ಫೇಕ್ ಸಿನಿಮಾಗಳು ಬರ್ತಿವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಜಗತ್ತಿನಲ್ಲಿ ಏನು ನಡೀತಿದೆ, ನಿಜವಾದ ಸತ್ಯ ಏನು ಅನ್ನೋದು ಎಲ್ಲರಿಗೂ ಗೊತ್ತು” ಎಂದು ಸ್ಪಷ್ಟವಾಗಿ ಹೇಳಿದರು.

Reporter: Are directors making narrative-based movies?

Nawaz: We all know propaganda movies are being made, most of them are fake, even you know it’s fake & narratives are being set. Don’t make me open my mouth

Nawaz gives a tight slap to movies like Kerala Story 2 & Dhurandhar. pic.twitter.com/oCgZNJILWc

— Nehr_who? (@Nher_who) March 14, 2026

ನವಾಜುದ್ದೀನ್ ಕಾಮೆಂಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ನವಾಜುದ್ದೀನ್ ಸಿದ್ದಿಕಿ ಯಾವುದೇ ಚಿತ್ರದ ಹೆಸರು ಹೇಳದಿದ್ದರೂ, ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ಉಲ್ಕಾ ಗುಪ್ತಾ ನಟನೆಯ ‘ಕೇರಳ ಸ್ಟೋರಿ 2’ ಚಿತ್ರಗಳನ್ನು ಗುರಿಯಾಗಿಸಿ ಅವರು ಈ ಮಾತು ಹೇಳಿದ್ದಾರೆಂದು ಜನರು ಊಹಿಸುತ್ತಿದ್ದಾರೆ. ಉದಾಹರಣೆಗೆ, ಒಬ್ಬ ಬಳಕೆದಾರ, “ನವಾಜ್, ‘ಕೇರಳ ಸ್ಟೋರಿ 2’ ಮತ್ತು ‘ಧುರಂಧರ್’ ಚಿತ್ರಗಳಿಗೆ ಸರಿಯಾಗಿಯೇ ಚಾಟಿ ಬೀಸಿದ್ದಾರೆ” ಎಂದು ಬರೆದಿದ್ದಾರೆ. 

ಇನ್ನೊಬ್ಬರು, “ಧುರಂಧರ್ ಮತ್ತು ಆದಿತ್ಯ ಧರ್ ಇಬ್ಬರನ್ನೂ ಟಾರ್ಗೆಟ್ ಮಾಡಿದ್ದಾರೆ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, “ಈತನೂ ಒಂದು ನಿರ್ದಿಷ್ಟ ಸಮುದಾಯದ ಪ್ರಾಣಿ. ಜನರು ಅಮೀರ್, ಸಲ್ಮಾನ್, ಶಾರುಖ್ ಅವರನ್ನೇ ಬಿಟ್ಟಿಲ್ಲ, ಇವನ್ಯಾವ ಸೀಮೆ? ಇಂಥವರನ್ನು ಬರೀ ಮಾತಲ್ಲಿ ಬಹಿಷ್ಕರಿಸೋದಲ್ಲ, ಪೂರ್ತಿಯಾಗಿ ದೂರವಿಡಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. 

“ಹಾಗಿದ್ರೆ ನೀವೇ ಒಂದು ನಾನ್-ಪ್ರೊಪಗಾಂಡ ಸಿನಿಮಾ ಮಾಡಿ. ಅದು ಅಷ್ಟೇನು ಕಷ್ಟವಲ್ಲ” ಎಂದು ಒಬ್ಬರು ಬರೆದಿದ್ದಾರೆ. “ಸ್ವಲ್ಪ ಪಾಕಿಸ್ತಾನ ಅಥವಾ ಮುಸ್ಲಿಮರ ಕಥೆ ಹೇಳಿದ್ರೆ ಸಾಕು, ಅದು ಪ್ರೊಪಗಾಂಡ ಸಿನಿಮಾ ಆಗಿಬಿಡುತ್ತೆ. ಅದೇ ಹಿಂದೂಗಳ ನಂಬಿಕೆ ಮೇಲೆ ‘ಓ ಮೈ ಗಾಡ್’, ‘ಪಿಕೆ’ ಥರದ ಸಿನಿಮಾ ಬಂದ್ರೆ ಯಾರಿಗೂ ಸಮಸ್ಯೆ ಆಗಲ್ಲ. ಈ ನಾಟಕದವರೆಲ್ಲ ಡಬಲ್ ಗೇಮ್ ಆಡ್ತಾರೆ” ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.





Source link

Leave a Reply

Your email address will not be published. Required fields are marked *