How to cook non-sticky rice: ಅನ್ನ ಮಾಡುವುದು ಸುಲಭ ಎಂದು ನಾವು ಅಂದುಕೊಳ್ಳುತ್ತೇವೆ, ಆದರೆ ಸರಿಯಾದ ವಿಧಾನ ತಿಳಿಯದಿದ್ದರೆ ಅದು ರುಚಿ ಕಳೆದುಕೊಳ್ಳಬಹುದು. ಅದೇ ಅಕ್ಕಿ ಬೇಯಿಸುವಾಗ ಕೇವಲ ಒಂದೇ ಒಂದು ಚಮಚ ಇದೊಂದು ಪದಾರ್ಥ ಸೇರಿಸಿದರೆ ನಿಮ್ಮ ಅಡುಗೆಯ ರುಚಿ ಹೆಚ್ಚುತ್ತೆ.

ಭಾರತೀಯ ಮನೆಗಳಲ್ಲಿ ಅನ್ನವು ಆಹಾರದ ಪ್ರಮುಖ ಭಾಗವಾಗಿದೆ. ಆದರೆ ಅನೇಕರಿಗೆ ಅನ್ನ ಮಾಡುವಾಗ ಅದು ಒಂದಕ್ಕೊಂದು ಅಂಟಿಕೊಳ್ಳುವುದು ಅಥವಾ ಸರಿಯಾಗಿ ಬೇಯದೆ ಇರುವ ಸಮಸ್ಯೆ ಎದುರಾಗುತ್ತದೆ. ಉತ್ತಮ ಗುಣಮಟ್ಟದ ಅಕ್ಕಿ ಇದ್ದರೂ ಸಹ ಅನ್ನ ಮುದ್ದೆಯಾಗುವುದು ಸಾಮಾನ್ಯ. ಅನ್ನವನ್ನು ಉದುರು ಉದುರಾಗಿ (Fluffy Rice) ಮಾಡುವ ಸುಲಭ ವಿಧಾನ ಇಲ್ಲಿದೆ.

ಅಕ್ಕಿಯಲ್ಲಿ ಸ್ಟಾರ್ಚ್ (Starch) ಅಂಶವಿರುತ್ತದೆ. ಅಕ್ಕಿ ಬೇಯುವಾಗ ಈ ಸ್ಟಾರ್ಚ್ ಹೊರಬಂದು ಅಕ್ಕಿಯ ಕಾಳುಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡುತ್ತದೆ. ನೀರಿನ ಪ್ರಮಾಣ ಕಡಿಮೆಯಾದರೂ ಅಥವಾ ಉರಿ ಜಾಸ್ತಿಯಾದರೂ ಅಕ್ಕಿಯ ಕಾಳುಗಳು ಒಡೆದು ಅನ್ನದ ಟೆಕ್ಸ್ಚರ್ ಹಾಳಾಗುತ್ತದೆ.

ಅಕ್ಕಿ ಬೇಯಿಸುವಾಗ ನೀರಿಗೆ ಒಂದು ಚಮಚ ಅಡುಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿದರೆ ಅನ್ನದ ಕಾಳುಗಳು ಒಂದಕ್ಕೊಂದು ಅಂಟದೆ ಪ್ರತ್ಯೇಕವಾಗಿರುತ್ತವೆ.

ಎಣ್ಣೆಯ ಬದಲಾಗಿ ಅರ್ಧ ಚಮಚ ನಿಂಬೆ ರಸವನ್ನು ಕೂಡ ಬಳಸಬಹುದು. ನಿಂಬೆ ರಸದ ಆಮ್ಲೀಯತೆಯು ಸ್ಟಾರ್ಚ್ ಅನ್ನು ಸಮತೋಲನಗೊಳಿಸುತ್ತದೆ, ಇದರಿಂದ ಅನ್ನವು ಬೆಳ್ಳಗೆ ಮತ್ತು ಉದುರು ಉದುರಾಗಿ ಬರುತ್ತದೆ.
View this post on Instagram
A post shared by Ruqaiyyah Ahmad ||UGC creator|| content creator (@chef_ruh)

ನೀರಿನ ಪ್ರಮಾಣ ಕಡಿಮೆಯಾದರೆ ಅನ್ನ ಬೇಗ ಅಂಟಿಕೊಳ್ಳುತ್ತದೆ.ಚಮಚದಿಂದ ಪದೇ ಪದೇ ತಿರುಗಿಸಿದರೆ ಅಕ್ಕಿಯ ಕಾಳುಗಳು ಒಡೆದು ಹೋಗಬಹುದು.ಅಕ್ಕಿ ಅತಿಯಾಗಿ ಬೆಂದರೆ ಅನ್ನ ಮೆತ್ತಗಾಗಿ ಅಂಟಿಕೊಳ್ಳುತ್ತದೆ.ಅನ್ನವಾದ ತಕ್ಷಣ ಬಿಗಿಯಾಗಿ ಮುಚ್ಚಿಟ್ಟರೆ ಹಬೆಯ ಕಾರಣದಿಂದ ಅನ್ನ ತೇವವಾಗಿ ಮುದ್ದೆಯಾಗಬಹುದು.

ಅಕ್ಕಿಯನ್ನು ಮೊದಲು ಎರಡು-ಮೂರಿ ಬಾರಿ ಚೆನ್ನಾಗಿ ತೊಳೆದು ಸ್ಟಾರ್ಚ್ ಅನ್ನು ತೆಗೆಯಿರಿ.ಸಾಧ್ಯವಾದರೆ ಮೂವತ್ತು ನಿಮಿಷಗಳ ಕಾಲ ಅಕ್ಕಿಯನ್ನು ನೆನೆಸಿಡಿ, ಇದರಿಂದ ಅನ್ನವು ಉದ್ದವಾಗಿ ಮತ್ತು ಮೃದುವಾಗಿ ಬರುತ್ತದೆ.ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ, ಅದಕ್ಕೆ ಎಣ್ಣೆ ಅಥವಾ ಲಿಂಬೆ ರಸ ಸೇರಿಸಿ.ಅಕ್ಕಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ.ಅಕ್ಕಿ ಸುಮಾರು 90% ಬೆಂದ ನಂತರ ಹೆಚ್ಚುವರಿ ನೀರನ್ನು ಬಸಿದು ತೆಗೆಯಿರಿ (ಗಂಜಿ ಸೋಸುವುದು).ತಟ್ಟೆ ಮುಚ್ಚಿ 5 ನಿಮಿಷಗಳ ಕಾಲ ಹಬೆಯಲ್ಲೇ (ಧಮ್) ಬಿಡಿ.

Source link