RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್


RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

2026 ರ ಐಪಿಎಲ್ (IPL 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಲಿ ಆರ್ ಸಿಬಿ (RCB) ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಸೀಸನ್ ಪ್ರಾರಂಭವಾಗುವ ಮೊದಲೇ ಆರ್ಸಿಬಿ ವೇಗಿ ಯಶ್ ದಯಾಳ್ (ಯಶ್ ದಯಾಳ್) ಗುಟ್ಟಾಗಿ ವೈವಾವಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವಾಸ್ತವವಾಗಿ ಯಶ್ ದಯಾಳ್ ಹುಡುಗಿಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಯಾವಾಗ ಬೇಕಾದರೂ ಬಂಧಿಸಿ ಜೈಲಿಗಟ್ಟಬಹುದು. ಹೀಗಿರುವಾಗ ಯಶ್ ದಯಾಳ್ ರಹಸ್ಯವಾಗಿ ಮದುವೆಯಾಗಿ ಎಲ್ಲರಿಗೂ ಶಾಕ್ ಹೇಳಿದ್ದಾರೆ.

ಗುಟ್ಟಾಗಿ ನಡೆದ ದಯಾಳ್ ಮದುವೆ

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ. ಯಶ್ ದಯಾಳ್ ಅವರ ವಿವಾಹ ಫೆಬ್ರವರಿ 4 ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆರವೇರಿದ್ದು, ಇದೀಗ ಅದರ ಫೋಟೋಗಳು ವೈರಲ್ ಆಗಿವೆ. ಮದುವೆಯನ್ನು ತುಂಬಾ ರಹಸ್ಯವಾಗಿಡ, ಎರಡೂ ಕುಟುಂಬಗಳ ಸದಸ್ಯರು ಮಾತ್ರ ಎಂದು ವರದಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ ಯಶ್ ದಯಾಳ್ ತಮ್ಮ ಸ್ನೇಹಿತರನ್ನಾಗಲಿ ಅಥವಾ ಯಾವುದೇ ಕ್ರಿಕೆಟಿಗರನ್ನಾಗಲಿ ತಮ್ಮ ಮದುವೆಗೆ ಆಹ್ವಾನಿಸಿಲ್ಲ. ಯಶ್ ದಯಾಳ್, ವ್ಲಾಗರ್ ಶ್ವೇತಾ ಪುಂಡಿರ್ ಅವರನ್ನು ವರಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಯಶ್ ದಯಾಳ್ ಅವರ ವೃತ್ತಿಜೀವನದ ವಿಚಾರಕ್ಕೆ ಬರುವುದಾದರೆ.. ಐಪಿಎಲ್‌ನಲ್ಲಿ ಆರ್ಸಿಬಿ ತಂಡದ ಪರ ಆಡುತ್ತಿರುವ ದಯಾಳ್, ತಂಡದ ಪ್ರಮುಖ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆದಾಗ್ಯೂ ಈ ಆವೃತ್ತಿಯಲ್ಲಿ ಅವರು ತಂಡದ ಪರ ಆಡುತ್ತಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ. ಏಕೆಂದರೆ ಕಳೆದ ವರ್ಷ ಯುವತಿಯೊಬ್ಬಳು ದಯಾಳ್ ವಿರುದ್ಧ ದೌರ್ಜನ್ಯದ ಆರೋಪ ಹೊರಿಸಿ ನ್ಯಾಯಾಲಯದ ಮೆಲೇರಿದ್ದರು. ಆ ಪ್ರಕರಣ ಪ್ರಸ್ತುತ ವಿಚಾರಣೆಯಲ್ಲಿದೆ. ದಯಾಳ್ ಅವರ ವಿರುದ್ಧ ಕೇಳಿ ಬಂದ ಈ ಆರೋಪದಿಂದಾಗಿ ಆರ್ಸಿಬಿ ಕೂಡ ಮುಜುಗರಕ್ಕೀಡಾಗಬೇಕಾಯಿತು. ಹೀಗಾಗಿ ಅಪರಾಧದ ಆರೋಪ ಹೊತ್ತಿರುವವರನ್ನು ಆರ್ಸಿಬಿ ಆಡಿಸುತ್ತಾ ಕಾದುನೋಡಬೇಕಿದೆ.

ಜಾಮೀನು ಅರ್ಜಿ ವಜಾ; ಆರ್ಸಿಬಿ ವೇಗಿ ಯಶ್ ದಯಾಳ್ಗೆ ಬಂಧನ ಭೀತಿ

ದಯಾಳ್ ವಿರುದ್ಧ ಅತ್ಯಾಚಾರದ ಆರೋಪ

ಕಳೆದ ವರ್ಷ ಆರ್ಸಿಬಿ ತಂಡ ಗೆಲುವಿನಲ್ಲಿ ಎಡಗೈ ವೇಗಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಆರ್‌ಸಿಬಿ ಪ್ರಶಸ್ತಿ ಗೆದ್ದ ಕೆಲವೇ ದಿನಗಳಲ್ಲಿ, ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ದಯಾಳ್ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದರು. ದಯಾಳ್ ಅವರೊಂದಿಗಿನ ಹಳೆಯ ಫೋಟೋಗಳು ಮತ್ತು ಚಾಟ್‌ಗಳನ್ನು ಅವರು ಹಂಚಿಕೊಂಡಿದ್ದಾರೆ, ಮದುವೆಯ ಸುಳ್ಳು ಭರವಸೆ ನೀಡಿ ದಯಾಳ್ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಇದರ ನಂತರ ದಯಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ದಯಾಳ್ ಬಂಧನಕ್ಕೆ ತಡೆ ನೀಡಿತ್ತು.





Source link

Leave a Reply

Your email address will not be published. Required fields are marked *