2026 ರ ಐಪಿಎಲ್ ಇದೇ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಹಾಲಿ ವಿರುದ್ಧ ಆರ್ಸಿಬಿ ಪಂದ್ಯಾವಳಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದ ಇನ್ನೊಂದು ಹೈಲೈಟ್ಸ್ ಅಂದರೆ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಕ್ರಿಕೆಟ್ ಅಂಗಳಕ್ಕೆ ಇಳಿಯಲಿದ್ದಾರೆ.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಈ ಸ್ವರೂಪದಲ್ಲಿ ಐಪಿಎಲ್ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಚುಟುಕು ಮಾದರಿಯಲ್ಲಿ ಕಿಂಗ್ ಕೊಹ್ಲಿಯ ಹೊಡಿಬಡಿ ನೋಡಲು ಅಭಿಮಾನಿಗಳು ವರ್ಷಗಳ ಕಾಲ ಕಾಯಬೇಕಾಗಿದೆ. ಆದರೀಗ ಆ ಕಾಯುವಿಕೆ ಮುಗಿದಿದ್ದು, ಮಿಲಿಯನ್ ಡಾಲರ್ ಪ್ರಶಸ್ತಿಯಲ್ಲಿ ಬ್ಯಾಟ್ ಬೀಸಲಿದ್ದಾರೆ.
ಇನ್ನು ಬಾರಿಯ ಐಪಿಎಲ್ ವಿರಾಟ್ ಕೊಹ್ಲಿಗೆ ಮತ್ತಷ್ಟು ವಿಶೇಷವಾಗಿದೆ. ಏಕೆಂದರೆ ಐಪಿಎಲ್ನಲ್ಲಿ ಸಿಕ್ಸರ್ಗಳ ತ್ರಿಶತಕ ಪೂರೈಸಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 9 ಸಿಕ್ಸರ್ಗಳು ಅಗತ್ಯವಿದೆ. ಐಪಿಎಲ್ನಲ್ಲಿ 259 ಇನ್ನಿಂಗ್ಸ್ಗಳನ್ನಾಡಿರುವ ವಿರಾಟ್ ಇದುವರೆಗೆ 291 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಇದಕ್ಕೂ ಮೊದಲು ಐಪಿಎಲ್ನಲ್ಲಿ ಸಿಕ್ಸರ್ಗಳ ತ್ರಿಶತಕ ಬಾರಿಸಿದ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿದ್ದರು. ರೋಹಿತ್ ಐಪಿಎಲ್ನಲ್ಲಿ ಇದುವರೆಗೆ 302 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 357 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಹೊಂದಿದ ನಂತರ ವಿರಾಟ್ ಕ್ರಿಕೆಟ್ ಪ್ರದರ್ಶನ ಅಮೋಘವಾಗಿದೆ. ವಿರಾಟ್ ಕೊಹ್ಲಿ ಕಳೆದ ಐದು ಇನ್ನಿಂಗ್ಸ್ಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಅವರ ಹೆಸರಲ್ಲಿ ಅರ್ಧಶತಕವೂ ಸೇರಿದೆ. ಕಳೆದ ಆವೃತ್ತಿಯಲ್ಲಿ ರನ್ಗಳ ಮಳೆ ಹರಿಸಿದ್ದ ವಿರಾಟ್, 54 ಸರಾಸರಿಯಲ್ಲಿ 657 ಬಾರಿಸಿದ್ದರು. ಇದರಲ್ಲಿ 8 ಅರ್ಧಶತಕಗಳು ಇವೆ. ಈ ಇನ್ನಿಂಗ್ಸ್ನಲ್ಲಿ ಅವರು 19 ಸಿಕ್ಸರ್ಗಳು ಮತ್ತು 66 ಬೌಂಡರಿಗಳನ್ನು ಬಾರಿಸಿದ್ದಾರೆ.




