Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ, ನಿತ್ಯಾ ಸುತ್ತವೇ ಕಥೆ ಸಾಗುತ್ತಿದೆ. ಕರ್ಣ ಯಾರನ್ನು ಮದುವೆ ಆಗ್ತಾನೆ? ನಿತ್ಯಾ ಕಥೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಒಂದು ಪಾತ್ರ ಅಂತ್ಯ ಆಗಲಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.

ಕರ್ಣನನ್ನು ಕಂಡರೆ ನಿತ್ಯಾಗೆ ಒಳ್ಳೆಯ ಅಭಿಮಾನ ಇದೆ. ನಿತ್ಯಾಳನ್ನು ಕರ್ಣ ಕೇರ್ ಮಾಡುತ್ತಾನೆ, ಆದರಿಸುತ್ತಾನೆ ಎಂದು ನಿತ್ಯಾಗೆ ಗೊತ್ತಿದೆ. ಇದೇ ವಿಷಯವನ್ನು ಇಟ್ಟುಕೊಂಡು ರಮೇಶ್ ಡಬಲ್ ಗೇಮ್ ಆಡುತ್ತಿದ್ದಾನೆ.

ನಿಧಿ ಹಾಗೂ ಕರ್ಣನನ್ನು ದೂರ ಮಾಡಬೇಕು ಎಂದು ನಿಧಿಯನ್ನು ಮನೆಯಿಂದ ಹೊರಗಡೆ ಹೋಗುವಂತೆ ಮಾಡಿದ್ದಾನೆ, ನಿಧಿಗೆ ಬೇರೆ ಮನೆ ಮಾಡಿಕೊಡಲಾಗಿದೆ. ಇನ್ನೊಂದು ಕಡೆ ನಿಧಿ ಸ್ವಾಭಿಮಾನವನ್ನು ಕೆಣಕಿದ್ದು, ಅವಳು ತನ್ನ ಕೆಲಸಕ್ಕೆ ರಿಸೈನ್ ಮಾಡುವ ಹಾಗೆ ಆಗಿದೆ.

ನಿತ್ಯಾ ಹಾಗೂ ಕರ್ಣನಿಗೆ ಸಂಬಂಧ ಇದೆ, ನಿತ್ಯಾ ಹೊಟ್ಟೆಯಲ್ಲಿ ಇರೋದು ನನ್ನ ಮಗು ಅಲ್ಲ ಎಂದು ತೇಜಸ್ ನಂಬಿದ್ದಾನೆ, ಇದೇ ವಿಚಾರ ಇಟ್ಟುಕೊಂಡು ತೇಜಸ್, ನಿತ್ಯಾ ನಡುವೆ ಜಗಳ ಆಗಿದೆ. ಆರಂಭದಲ್ಲಿ ನಿತ್ಯಾ ಬೇಸರ ಮಾಡಿಕೊಂಡಳು, ಈಗ ಅವಳು ಕರ್ಣ ಆಸ್ಪತ್ರೆಯಲ್ಲಿನ ಬೋರ್ಡ್ ಮೇಂಬರ್ ಆಗಿ ಕೆಲಸ ಮಾಡುತ್ತಿದ್ದಾಳೆ.

ನಿತ್ಯಾ ಹಾಗೂ ತೇಜಸ್ ಮದುವೆ ಮುರಿದು ಬಿದ್ದು, ಜಗಳ ಆದಾಗಿನಿಂದ ಇಲ್ಲಿಯವರೆಗೆ ಮತ್ತೆ ತೇಜಸ್ ಪತ್ತೆ ಇಲ್ಲ, ತೇಜಸ್ ಬಗ್ಗೆ ತೋರಿಸುತ್ತಲೂ ಇಲ್ಲ. ಹೀಗಾಗಿ ಈ ಪಾತ್ರ ಮುಗಿದೋಯ್ತಾ ಎಂಬ ಪ್ರಶ್ನೆ ಇದೆ.

ಸದ್ಯ ಈ ಸೀರಿಯಲ್‌ನಲ್ಲಿ ತೇಜಸ್ ಪಾತ್ರ ಕಾಣಿಸದೆ ಇದ್ದರೂ ಕೂಡ, ಮುಂದಿನ ದಿನಗಳಲ್ಲಿ ಮತ್ತೆ ಎಂಟ್ರಿ ಆಗಲೂಬಹುದು. ಹೀಗೆ ನ್ಯಾಯವನ್ನೇ ಕೊಡದೆ ಈ ಪಾತ್ರವನ್ನು ಅಂತ್ಯ ಮಾಡೋದು ಡೌಟ್. ಇನ್ನು ವೀಕ್ಷಕರು ಕೂಡ ತೇಜಸ್ ಪಾತ್ರ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Source link
Karna Serial: ಕರ್ಣ ಧಾರಾವಾಹಿ ಮುಖ್ಯ ಪಾತ್ರವೇ ಮುಗೀತಾ? ವೀಕ್ಷಕರಿಗೆ ಸಿಕ್ಕ ಸುಳಿವೇನು?