
ತುಮಕೂರು, ಮಾರ್ಚ್ 15: ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಚುನಾವಣೆ ವೇಳೆ ಭಾರಿ ಹೈದ್ರಾಮಾವೇ ನಡೆದಿದೆ. ಚುನಾವಣಾ ಅಧಿಕಾರಿಯೇ ಕಾಂಗ್ರೆಸ್ ಪರ ಫೋರ್ಜರಿ ಮಾಡಿರುವ ಆರೋಪ ಕೇಳಿಬಂದಿದ್ದು, ಜೇಬಿನಲ್ಲಿ ಮತಪತ್ರಗಳನ್ನು ತುಂಬಿಕೊಂಡು ಬಂದು ಮತ ಪೆಟ್ಟಿಗೆಗೆ ಹಾಕಿರೋದಾಗಿ ಜೆಡಿಎಸ್ ದೂರಿದೆ. ಈ ಸಂಬಂಧ ಚುನಾವಣಾಧಿಕಾರಿ ವಿರುದ್ಧ ಕುಣಿಗಲ್‌ನ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಕೂಡ ನೀಡಿರಲಿಲ್ಲ, ಹೈಡ್ರಾಮಾದ ಬಳಿಕ ಚುನಾವಣೆಯನ್ನೇ ರದ್ದುಪಡಿಸಿದ ಪ್ರಸಂಗ ನಡೆದಿದೆ.
ಸಂತೆಮಾವತ್ತೂರು ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ 12 ಮಂದಿ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಸಾಲಗಾರರ 11 ಕ್ಷೇತ್ರ ಮತ್ತು 1 ಸಾಮಾನ್ಯ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ನಡೆದ ಎಲೆಕ್ಷನ್‌ಗೆ 22 ಅಭ್ಯರ್ಥಿಗಳು ಇದ್ದಾರೆ. ಶೇಕಡ 20ರಷ್ಟು ಮತದಾನ ಬಾಕಿ ಇರುವಾಗ ಹೈರಾಮಾ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಬ್ಯಾಲೆಟ್ ಪೇಪರ್ ಅಕ್ರಮವಾಗಿ ಮತಪೆಟ್ಟಿಗೆಗೆ ಚುನಾವಣಾಧಿಕಾರಿ ಸುನೀಲ್ ಸೇರಿಸಿದ ಆರೋಪವನ್ನು ಜೆಡಿಎಸ್ ಮಾಡಿದೆ. ಸಾಲಗಾರರ ಕ್ಷೇತ್ರ ಮತಗಟ್ಟೆ ಸಂಖ್ಯೆ 1ರಲ್ಲಿ ಚುನಾವಣಾಧಿಕಾರಿಯೇ ಜೇಬಿನಲ್ಲಿ ತುಂಬಿಕೊಂಡು ಬಂದು ಮತಪತ್ರವನ್ನು ಮತಪೆಟ್ಟಿಗೆಗೆ ಹಾಕಿದ್ದಾರೆ. ಇದನ್ನು ಜೆಡಿಎಸ್ ಎಂಜೆಂಟ್ ಕಂಡು ತಡೆದಿದ್ದಾರೆ. ಈ ವೇಳೆ ಸುನೀಲ್ ಅವರ ಜೇಬಿನಲ್ಲಿ 25 ಮತಪತ್ರಗಳು ಇವೆ ಎಂದು ಆರೋಪಿಗಳು, ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್; ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಣಿಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಚುನಾವಣಾಧಿಕಾರಿಯಿಂದ ಕಳ್ಳ ಮತದಾನ ನಡೆದಿದೆ. ಸದ್ಯ ಸರ್ಕಾರ ಇದೆ ಎಂದು ಶಾಸಕರು ತಾಲೂಕಿನಲ್ಲಿ ಮಾಡಬಾರದ ಅನಾಚಾರ ಮಾಡುತ್ತಿದ್ದಾರೆ. ಈ ಹಿಂದೆ ರಣಮಗರ ಮತ್ತು ಹಾಸನದಲ್ಲಿ ಚುನಾವಣಾ ಅಕ್ರಮ ಮಾಡಿದ್ದ ಸುನೀಲ್ ಅವರನ್ನು ಕುಣಿಗಲ್ ತಾಲೂಕಿಗೆ ಹಾಕಿದ್ದಾರೆ. ಕಿಟಿಕಿಯಿಂದ ಗೌಪ್ಯವಾಗಿ ಮತಪತ್ರಗಳನ್ನು ತಂದು ಏಜೆಂಟರು ಇಲ್ಲದಿದ್ದಾಗ ಮತಪೆಟ್ಟಿಗೆಗೆ ತುಂಬುತ್ತಿದ್ದರು. ಸುಮಾರು ನೂರರಿಂದ ನೂರೈವತ್ತು ಈ ರೀತಿ ಕಳ್ಳಮತದಾನ ನಡೆದಿದೆ. ಚುನಾವಣಾಧಿಕಾರಿ ನಾವು ದೂರು ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಜೊತೆ ಯಾರ್ಯಾರು ಸಹಕರಿಸಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು ಎಂದು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ