ಸಮುದ್ರ ತೀರದಲ್ಲಿ ರಶ್ಮಿಕಾ-ಆನಂದ್ ದೇವರಕೊಂಡ ಆಹ್ವಾನಿಸಿದ್ದು ಯಾರನ್ನ? ಫನ್ ಫೋಟೋ ವೈರಲ್

ಸಮುದ್ರ ತೀರದಲ್ಲಿ ರಶ್ಮಿಕಾ-ಆನಂದ್ ದೇವರಕೊಂಡ ಆಹ್ವಾನಿಸಿದ್ದು ಯಾರನ್ನ? ಫನ್ ಫೋಟೋ ವೈರಲ್


ಸಮುದ್ರ ತೀರದಲ್ಲಿ ರಶ್ಮಿಕಾ-ಆನಂದ್ ದೇವರಕೊಂಡ ಆಹ್ವಾನಿಸಿದ್ದು ಯಾರನ್ನ? ಫನ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (ವಿಜಯ್ ದೇವರಕೊಂಡ) ವಿವಾಹ ಆಗಿದ್ದಾರೆ. ಇವರು ಮದುವೆಗೂ ಮೊದಲು ಅನೇಕ ಕಡೆ ಸುತ್ತಾಟ ನಡೆಸಿದ್ದರು. ವಿಶೇಷ ಎಂದರೆ ಈ ರೀತಿ ಸುತ್ತಾಟ ನಡೆಸುವಾಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಜೊತೆ ಆನಂದ್ ದೇವರಕೊಂಡ ಕೂಡ ಇರುತ್ತಿದ್ದರು. ರಶ್ಮಿಕಾ ಹಾಗೂ ಆನಂದ್ ಅತ್ತಿಗೆ-ಬಾವ ಸಂಬಂಧ. ಇವರ ಸಂಬಂಧ ಕ್ರೇಜಿ ಆಗಿದೆ ಎಂದು ಹೇಳಿದ್ದಾರೆ.

ವಿಜಯ್, ರಶ್ಮಿಕಾ ಹಾಗೂ ಆನಂದ್ ಈ ಮೊದಲು ಅನೇಕ ಕಡೆ ಸುತ್ತಾಟ ನಡೆಸಲು ತೆರಳಿದ್ದು ಇದೆ. ಈ ವೇಳೆ ವಿಜಯ್ ದೇವರಕೊಂಡ ಅವರು ಒಂದು ಫನ್ ಫೋಟೋನ ಕ್ಲಿಕ್ ಮಾಡಿದ್ದರು. ಈ ಫೋಟೋದಲ್ಲಿ ರಶ್ಮಿಕಾ ಹಾಗೂ ಆನಂದ್ ಸಮುದ್ರ ನೋಡುತ್ತಾ ನಿಂತಿದ್ದಾರೆ. ಜೊತೆಗೆ, ಸಿಳ್ಳೆ ಹೊಡೆಯುತ್ತಾ ಇದ್ದಾರೆ. ಈ ಪೋಸ್ ನೋಡಿ ವಿಜಯ್ ದೇವರಕೊಂಡ ಅವರು ಒಂದು ಫ್ಯಾನ್ ಕಮೆಂಟ್ ಪಾಸ್ ಮಾಡಿದ್ದರಂತೆ. ಜೀವನದಲ್ಲಿ ಯಾವಾಗಲೂ ಇಷ್ಟೇ ಕ್ರೇಜಿ ಆಗಿರಬೇಕು ಎಂದು ರಶ್ಮಿಕಾ ಹೇಳಿದ್ದಾರೆ.

‘ಮೀನನ್ನು ಕರೆಯುವಂತೆ ಕಾಣಿಸುತ್ತಿದೆ ಎಂದು ವಿಜಯ್ ದೇವರಕೊಂಡ ಅವರು ಹೇಳಿದ್ದರು’ ಎಂದು ವಿಜಯ್ ದೇವರಕೊಂಡ ಫನ್ ಕಮೆಂಟ್ ಮಾಡಿದ್ದರಂತೆ. ಈ ಫೋಟೋ ಹಂಚಿಕೊಂಡು, ಆನಂದ್ ಗೆ ರಶ್ಮಿಕಾ ಬರ್ತ್ ಡೇ ವಿಶ್ ಮಾಡಿದ್ದಾರೆ. ‘ಆನಂದಾ… ಹ್ಯಾಪಿ ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್ತೇ. ನೀನು ಶೂಟಿಂಗ್ ಕಾರಣಕ್ಕೆ ಹೊರಕ್ಕೆ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ವಿಜಯ್ ದೇವರಕೊಂಡ ಸಹೋದರ ಆನಂದ್ ಅವರು ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ವಿಜಯ್ ಹೀರೋ ಆಗಿ ಮಿಂಚಿದ ಬಳಿಕ ಆನಂದ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆನಂದ್ ನಟನೆಯ ಸ್ಯಾಡ್ ಎಂಡಿಂಗ್ ಇರೋ ‘ಬೇಬಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ಆನಂದ್ ಜನಪ್ರಿಯತೆ ಹೆಚ್ಚಿತು. ಅವರು ಪ್ರಸ್ತುತ ಕೆಲವು ಆಯ್ದ ಪ್ರಾಜೆಕ್ಟ್‌ಗಳನ್ನು ಒಪ್ಪುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

 



Source link

Leave a Reply

Your email address will not be published. Required fields are marked *