
ಚಿಕ್ಕಬಳ್ಳಾಪುರ, ಮಾರ್ಚ್ 16: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ರಾಜ್ಯದ್ಯಂತ ಹಲವು ಹೋಟೆಲ್ಗಳು ಬಂದ್ ಆಗಿವೆ, ಇನ್ನೂ ಕೆಲವೆಡೆ ಸೌದೆ ಒಲೆಗಳನ್ನೇ ನಂಬಿಕೊಂಡು ಹೋಟೆಲ್ ನಡೆಸುವ ಸ್ಥಿತಿ ಇದೆ. ಇದರ ಪರಿಣಾಮ ಪ್ರವಾಸೋದ್ಯಮದ ಮೇಲೂ ತಟ್ಟಿದೆ. ವಾರಾಂತ್ಯ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಪ್ರವಾಸಿತಾಣ ನಂದಿಗಿರಿಧಾಮ ಭಾನುವಾರ ಜನ ಇಲ್ಲದೆ ಬಿಕೊ ಎನ್ನುತ್ತಿದೆ. ಗಿರಿಧಾಮಕ್ಕೆ ಹೋದರೆ ಅಲ್ಲಿರುವ ಹೋಟೆಲ್ಗಳಲ್ಲಿ ತಿಂಡಿ-ಊಟ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದ ಅತ್ತ ಮುಖ ಮಾಡಿಲ್ಲ. ಮತ್ತೊಂದೆಡೆ ನಂದಿಗಿರಿಧಾಮದಲ್ಲಿರುವ ಪ್ರವಾಸೋದ್ಯಮ ಇಲಾಖೆ ಹೋಟೆಲ್ಗಳಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ ಇಲ್ಲ. ಅವು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ