ಬೆಂಗಳೂರು: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

ಬೆಂಗಳೂರು: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ


ಬೆಂಗಳೂರು: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

ಬೆಂಗಳೂರು, ಮಾರ್ಚ್ 16: ನಮ್ಮ ಮೆಟ್ರೋ (ನಮ್ಮ ಮೆಟ್ರೋ) ವಿಸ್ತರಣೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಬಿಎಂಆರ್ ಸಿಎಲ್ (BMRCL) ಮೇ ತಿಂಗಳಿನಲ್ಲಿ ಪಿಂಕ್ ಲೈನ್‌ನಲ್ಲಿ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಶುರುಮಾಡಿದೆ. ಪಿಂಕ್ ಲೈನ್ ಮೆಟ್ರೋಗಾಗಿ ನಾಲ್ಕನೇ ರೈಲು ಭಾನುವಾರ ಬಂದಿಳಿದಿದೆ. ಆರು ಕೋಚ್ಗಳಿರುವ ಈ ಹೊಸ ರೈಲು ಸೆಟ್ ಮಾರ್ಚ್ 13 ರಂದು ಬಿಐಎಂಎಲ್ ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ತರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು.

ಈ ರೈಲನ್ನು ಪ್ರಸ್ತುತ ಕೊತ್ತನೂರು ಡಿಪೋದಲ್ಲಿನ ಇನ್ಸ್‌ಪೆಕ್ಷನ್ ಬೇ ಲೈನ್ (IBL) ಗೆ ಸ್ಥಳಾಂತರಿಸಲು ಅಗತ್ಯ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ನಿಯಮಾನುಸಾರ ಅನುಮತಿ ಪ್ರಕ್ರಿಯೆಗಳು ನಂತರ ರೈಲು ಸೇವೆಗೆ ಸಿದ್ಧವಾಗಿದೆ.

ಪಿಂಕ್ ಲೈನ್ ಮೊದಲ ರೈಲನ್ನು ಬಿಐಎಂಎಲ್ ಸಂಸ್ಥೆ 2025ರ ಡಿಸೆಂಬರ್ 11 ರಂದು ಬಿಡುಗಡೆ ಮಾಡಿತ್ತು. ಬಳಿಕ ಫೆಬ್ರವರಿಯಲ್ಲಿ ಇನ್ನೂ ಎರಡು ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿತ್ತು. ಈಗ ನಾಲ್ಕನೇ ರೈಲು ಕೂಡ ಬಂದಿದೆ ಪಿಂಕ್ ಸೇವೆ ಆರಂಭದ ಸಿದ್ಧತೆಗಳು ವೇಗವಾಗಿದೆ.

ಸುಮಾರು 7.5 ಕಿಲೋಮೀಟರ್ ಉದ್ದದ ಕಾಳೇನ ಅಗ್ರಹಾರ – ತಾವರೆಕೆರೆಯ ಪಿಂಕ್ ಲೈನ್ ಮಾರ್ಗದಲ್ಲಿ ಮೇ ತಿಂಗಳಿನಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ನೇರಳೆ ಮತ್ತು ಹಸಿರು ಮಾರ್ಗಗಳ ಪ್ರಯಾಣಿಕರಿಗೂ ಗುಡ್ ನ್ಯೂಸ್

ನೇರಳೆ ಮತ್ತು ಹಸಿರು ಮಾರ್ಗಗಳಿಗೆ ದಟ್ಟಣೆ ಕಡಿಮೆ ಕೂಡ ಕ್ರಮ ಕೈಗೊಳ್ಳಲಾಗಿದೆ. ಕೋಲ್ಕತ್ತಾ ಮೂಲದ ಟಿಟಾಗ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆ ಮತ್ತು ಗ್ರೀನ್ ಲೈನ್‌ಗಳಿಗಾಗಿ ಎರಡನೇ ಡಿಟಿಜಿ ರೈಲು ಸೆಟ್ ಅನ್ನು ಕಳುಹಿಸಲಾಗಿದೆ. ಈ ರೈಲಿನ ಮೂರು ಕೋಚ್‌ಗಳನ್ನು ಮಾರ್ಚ್ 13 ರಂದು ಕಳುಹಿಸಲಾಗಿದೆ, ಉಳಿದ ಮೂರು ಕೋಚ್‌ಗಳು ಮರುದಿನ ರಾತ್ರಿ ರವಾನೆಯಾಗಿವೆ. ಈ ರೈಲು ಈ ತಿಂಗಳ ಅಂತ್ಯದೊಳಗೆ ಪೀಣ್ಯ ಡಿಪೋ ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್ನ್ಯೂಸ್? ಸೀಲ್ಡ್ ಲಿಕ್ಕರ್ ಬಾಟಲ್ ಸಾಗಾಟಕ್ಕೆ ಅನುಮತಿ?

ಈ ಎರಡು ಹೊಸ ರೈಲುಗಳು ಮೇ–ಜೂನ್ ವೇಳೆಗೆ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಪೀಕ್ ಅವಧಿಯಲ್ಲಿ ಮೆಟ್ರೋದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರಸ್ತುತ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಒಟ್ಟು 57 ರೈಲುಗಳು ಸಂಚಾರ ಮಾಡುತ್ತಿವೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *