IPL 2026: ಐಪಿಎಲ್ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ತನ್ನ ಜೆರ್ಸಿಯ ಮೇಲೆ ಚಿನ್ನದ ಬಣ್ಣದ ಐಪಿಎಲ್ ಲೋಗೋ (ಗೋಲ್ಡನ್ IPL ಲೋಗೋ) ಧರಿಸಲಿದೆ. ಇನ್ನುಳಿದ 9 ತಂಡಗಳು ಸಾಧಾರಣ ಐಪಿಎಲ್ ಲೋಗೋನಲ್ಲಿ ಕಾಣಿಸುತ್ತದೆ.
ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ತಂಡವನ್ನು ಗೌರವಿಸಲು ಈ ವಿಶೇಷ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಅದರಂತೆ ಕಳೆದ ಬಾರಿಯ ಆರ್ಸಿಬಿ ತಂಡವು ಈ ಬಾರಿ ಗೋಲ್ಡನ್ ಐಪಿಎಲ್ ಲೋಗೋದೊಂದಿಗೆ ಕಣಕ್ಕಿಳಿಯಲಿದೆ.
ಈ ಬಾರಿಯ ಆರ್ಸಿಬಿ ತಂಡದ ಜೆರ್ಸಿ ಮೇಲೆ ಒಂದು ಚಿನ್ನದ ನಕ್ಷತ್ರವಿರಲಿದೆ, ಇದು ತಂಡದ ಮೊದಲ ಐಪಿಎಲ್ ಟ್ರೋಫಿಯನ್ನು ಸೂಚಿಸುತ್ತದೆ. ಇದೇ ಮೊದಲ ಬಾರಿಗೆ ಆರ್ಸಿಬಿ ಸ್ಟಾರ್ ಹಾಗೂ ಬ್ಯಾಡ್ಜ್ನೊಂದಿಗೆ ಕಣಕ್ಕಿಳಿಯುತ್ತಿರುವುದು ವಿಶೇಷ.
ಕಳೆದ ವರ್ಷ ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ, 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿತ್ತು. ಈ ಐತಿಹಾಸಿಕ ಗೆಲುವಿನ ಸಂಭ್ರಮದ ಭಾಗವಾಗಿ ಈ ‘ಗೋಲ್ಡನ್ ಜೆರ್ಸಿ’ ವಿನ್ಯಾಸಗೊಳಿಸಲಾಗಿದೆ.
ಇನ್ನು 2026ರ ಐಪಿಎಲ್ (ಐಪಿಎಲ್ 2026) ಮಾರ್ಚ್ 28, 2026 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಬಾಲಕಿಯರ ಹಾಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.




