
ಚುನಾವಣಾಧಿಕಾರಿಯ ಅಕ್ರಮದ ಬಗ್ಗೆ ಜೆಡಿಎಸ್ ಆರೋಪ ಮಾಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದ ಬ್ಯಾಲೇಟ್ ಪೇಪರನ್ನು ಚುನಾವಣಾಧಿಕಾರಿ ಸುನೀಲ್ ಅವರು ಅಕ್ರಮವಾಗಿ ಮತ ಪೆಟ್ಟಿಗೆಯೊಳಗೆ ಸೇರಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಮತಗಟ್ಟೆಯಿಂದ ಹೊರಗೆ ಕಾಂಗ್ರೆಸ್ ಪರ ಹಾಕಿದ್ದ ಮತ ಪತ್ರಗಳನ್ನ ಚುನಾವಣಾಧಿಕಾರಿಗೆನೀಡಿದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಸಾಕ್ಷಿ ಸಮೇತ ಇದನ್ನು ಕಂಡಿದ್ದಾರೆ.
ನಿನ್ನೆ ಸಂತೇಮಾವತ್ತೂರಿನ ಸಾಲಗಾರರ 11 ಕ್ಷೇತ್ರಗಳಿಗೆ, 1 ಸಾಮಾನ್ಯ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಆದರೆ ಮತದಾನದ ನಡುವೆ ಒಂದಷ್ಟು ಮತಪತ್ರಗಳನ್ನು ಚುನಾವಣಾಧಿಕಾರಿ ಸುನೀಲ್ ಮತಪೆಟ್ಟಿಗೆಗೆ ಹಾಕಿದ್ದು, ಇದನ್ನ ಜೆಡಿಎಸ್ ಚುನಾವಣಾ ಏಜೆಂಟ್‌ಗಳು ಗಮನಿಸಿದ್ದಾರೆ.