ಪಶ್ಚಿಮ ಬಂಗಾಳದ ಕದನ ಕಣ: ಸಿಎಂ ಮಮತಾ ಬ್ಯಾನರ್ಜಿ ಬತ್ತಳಿಕೆಯಲ್ಲಿರೋ ಅಸ್ತ್ರ ಯಾವುದು? | West Bengal Assembly Elecion 2026 What Are The Pluses And Minuses Of Tmc Bjp Congress And Cpm Parties Mrq

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಲೇಖನವು ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳ ಶಕ್ತಿ, ದೌರ್ಬಲ್ಯ, ಅವಕಾಶಗಳು ಮತ್ತು ಸವಾಲುಗಳನ್ನು ಆಳವಾಗಿ ವಿಶ್ಲೇಷಿಸುತ್ತದೆ.

ಟಿಎಂಸಿ, ಬಿಜೆಪಿ ನೇರ ಸಮರ

ಟಿಎಂಸಿ

ಶಕ್ತಿ: ಸಿಎಂ ಮಮತಾ ಜನಪ್ರಿಯತೆ. ತಳಮಟ್ಟದವರೆಗೆ ಪಕ್ಷದ ಸಂಘಟನೆ ಬಲಿಷ್ಠ. ಅತಿದೊಡ್ಡ ಕಾರ್ಯಕರ್ತರ ಪಡೆಯನ್ನು ಪಕ್ಷ ಹೊಂದಿದೆ. ಪಂಚಾಯತಿ, ನಗರಸಭೆಯಂಥ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಧಿಕಾರ. ಸರ್ಕಾರದ ಜನಪರ ಕಾರ್ಯಕ್ರಮ. ಎಸ್‌ಐಆರ್‌ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿ.

ದೌರ್ಬಲ್ಯ: ಅಧಿಕಾರ ವಿರೋಧಿ ಅಲೆ ಇದೆ. ಭ್ರಷ್ಟಾಚಾರದ ಆರೋಪ, ಸ್ಥಳೀಯ ನಾಯಕರ ವಿರುದ್ಧ ಜನಾಕ್ರೋಶವಿದೆ. ರಾಜ್ಯದ ಜನರ ನೈಜ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾದ ಆರೋಪ. ಪಕ್ಷದೊಳಗಿನ ಬಣ ಜಗಳ. ಎಸ್‌ಐಆರ್‌ ವೇಳೆ ಪಕ್ಷದ ಮತಬುಟ್ಟಿ ಕಳಚಿದ ಆತಂಕ

ಅವಕಾಶ: ಎಸ್‌ಐಆರ್‌ ವಿವಾದದ ಲಾಭ. ಕಲ್ಯಾಣ ಕಾರ್ಯಕ್ರಮಗಳಿಂದ ಅನುಕೂಲ ಪಡೆದ ದುರ್ಬಲ ವರ್ಗದವರು ಮಮತಾ ಆಡಳಿತ ಬೆಂಬಲಿಸಬಹುದು.

ಬಿಜೆಪಿ

ಶಕ್ತಿ: ಟಿಎಂಸಿಯ ಪ್ರಬಲ ಪ್ರತಿಸ್ಪರ್ಧಿ. ಪ್ರಧಾನಿ ಮೋದಿ ಜನಪ್ರಿಯತೆ. ರಾಜ್ಯದಲ್ಲಿ ಹಿಂದುತ್ವದ ಅಲೆ ಸೃಷ್ಟಿಸುವಲ್ಲಿ ಯಶಸ್ವಿ. ಸರ್ಕಾರದ ಭ್ರಷ್ಟಾಚಾರ ಕಾನೂನು ಸುವ್ಯವಸ್ಥೆ ವೈಫಲ್ಯ ವಿರುದ್ಧ ಧ್ವನಿ ಎತ್ತುವ ಮೂಲಕ ಗಟ್ಟಿ ಅಭಿಯಾನ. ಎಡಪಂಥೀಯ, ಕಾಂಗ್ರೆಸ್‌ನ ಮತಬುಟ್ಟಿಗೆ ಕೈಹಾಕುವಲ್ಲಿ ಯಶಸ್ವಿ.

ದೌರ್ಬಲ್ಯ: ಪ್ರಚಾರಕ್ಕಾಗಿ ಹೊರಗಿನವರನ್ನೇ ನೆಚ್ಚಿಕೊಂಡಿದೆ. ಮೋದಿ ಸೇರಿ ಕೇಂದ್ರದ ನಾಯಕರೇ ಬಿಜೆಪಿ ಪಾಲಿಗೆ ಸ್ಟಾರ್‌ ಪ್ರಚಾರಕರು. ಎಸ್‌ಐಆರ್‌ ಗೊಂದಲ ಬಿಜೆಪಿಗೆ ನಷ್ಟ ಮಾಡಬಹುದು. ಆಂತರಿಕ ಕಚ್ಚಾಟ. ತಳಮಟ್ಟದಲ್ಲಿ ಸಂಘಟನೆ ಗಟ್ಟಿ ಇಲ್ಲ. ಮಮತಾ ವರ್ಚಸ್ಸಿಗೆ ಸರಿಸಮಾನಾದ ನಾಯಕನ ಕೊರತೆ.

ಅವಕಾಶ: ಆಡಳಿತ ವಿರೋಧಿ ಅಲೆ. ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಸಮಸ್ಯೆ, ಅಭಿವೃದ್ಧಿಯ ಕೊರತೆ. ಸಾಮೂಹಿಕ ನಾಯಕತ್ವದೊಂದಿಗೆ ಕಣಕ್ಕಿಳಿದು ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಸಮರ್ಥವಾಗಿ ಎದುರಿಸಬಹುದು.

ಕಾಂಗ್ರೆಸ್‌

ಶಕ್ತಿ: 2021ರಲ್ಲಿ ಶೂನ್ಯ ಸುತ್ತಿದರೂ ಮಾಲ್ಡಾ, ಮುರ್ಷಿದಾಬಾದ್‌, ನಡಿಯಾ ಮತ್ತಿತರ ಉತ್ತರ ಮತ್ತು ಮಧ್ಯ ಬಂಗಾಳದಲ್ಲಿ ಕಾಂಗ್ರೆಸ್‌ನ ಪ್ರಭಾವ ಇನ್ನೂ ಇದೆ.

ದೌರ್ಬಲ್ಯ: ಪಕ್ಷವಿರೋಧಿ ಚಟುವಟಿಕೆ, ಭಿನ್ನಮತ ಹಾಗೂ ಸಂಘಟನಾ ಕೊರತೆಯ ಕಾರಣ ಹಲವು ಜಿಲ್ಲೆಗಳಲ್ಲಿ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸಾಲು ಸಾಲು ಸೋಲುಗಳ ಹೊರತಾಗಿಯೂ ಪಕ್ಷ ಇನ್ನೂ ಪಾಠ ಕಲಿತಿಲ್ಲ.

ಅವಕಾಶ: ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಪರ್ಯಾಯಶಕ್ತಿಯಾಗಿ ಬಿಂಬಿಸಿಕೊಳ್ಳಲು ಅವಕಾಶ.

ಸಿಪಿಎಂ

ಶಕ್ತಿ: ಟಿಎಂಸಿ ವಿರುದ್ಧದ ಭ್ರಷ್ಟಾಚಾರದ ಆರೋಪ ಮತ್ತು ಧಾರ್ಮಿಕತೆಯ ಆಧಾರದ ಮೇಲಿನ ವಿಭಜನೆಯ ವಿರುದ್ಧ ಜನಾಭಿಪ್ರಾಯ ರೂಪಿಸಿದೆ. ಪಕ್ಷದ ಬಹುತೇಕ ನಾಯಕರು ಸರಳ ಜೀವನ ಶೈಲಿ, ಶುದ್ಧಹಸ್ತರೆಂಬ ಭಾವನೆ ಜನಸಾಮಾನ್ಯರಲ್ಲಿದೆ. ಶಾಲಾ ನೌಕರಿ ಹಗರಣ, ಆರ್‌.ಜಿ.ಕಾರ್‌ ಮೆಡಿಕಲ್‌ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಅತ್ಯಾ*ಚಾರ-ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ, ಧರಣಿಯಂಥ ಹೋರಾಟ ರೂಪಿಸಿದೆ.

ದೌರ್ಬಲ್ಯ: ಪ್ರತಿಭಟನೆಗಳು, ಧರಣಿಗಳು ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಪ್ರತಿಫಲ ನೀಡಿಲ್ಲ. 2011ರಲ್ಲಿ ಶೇ.39ರಷ್ಟಿದ್ದ ಮತಪ್ರಮಾಣ ಈಗ ಶೇ.4.73ರಷ್ಟಕ್ಕೆ ತಲುಪಿದೆ. ಪಕ್ಷದ ಸಂಘಟನೆ ದುರ್ಬಲ. ಜನಪ್ರಿಯ ನಾಯಕರ ಕೊರತೆ. ಯುವಕರ ಸೆಳೆಯಲು ವಿಫಲ.

ಅವಕಾಶ: 2024ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶೇ.5.73ರಷ್ಟು ಮತಗಳಿಸಿದೆ. 2021ಕ್ಕೆ ಹೋಲಿಸಿದರೆ ಮತಪ್ರಮಾಣ ಹೆಚ್ಚಳವಾಗಿದೆ. ಇದು ಪಕ್ಷದಲ್ಲಿ ಭರವಸೆ ಮೂಡಿಸಿದೆ.

ಸವಾಲು: ಈ ಬಾರಿ ಕಾಂಗ್ರೆಸ್‌ ಬೆಂಬಲವಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿಗೆ ಅಡಿಗಲ್ಲು ಹಾಕಿ ವಿವಾದ ಸೃಷ್ಟಿಸಿದ್ದ ಟಿಎಂಸಿ ಶಾಸಕ ಹುಮಾಯೂನ್‌ ಕಬೀರ್‌ ಜತೆಗಿನ ಸಖ್ಯ ಉಲ್ಟಾ ಹೊಡೆಯಬಹುದು.

ಇದನ್ನೂ ಓದಿ: ಬಾಗಲಕೋಟೆ ಉಪಕದನ ಹಣಾಹಣಿಗೆ ವೇದಿಕೆ ಸಜ್ಜು: HY ಮೇಟಿ ನಂತರ ಯಾರಿಗೆ ಪಟ್ಟ? ಕ್ಷೇತ್ರದ ಹಿನ್ನೋ

ಬಂಗಾಳ ಚುನಾವಣೆಯ ಪ್ರಮುಖ ಅಂಶಗಳು

– ವಿಶೇಷ ಮತಪಟ್ಟಿ ಪರಿಷ್ಕರಣೆ ಬಗ್ಗೆ ಸರ್ಕಾರ, ವಿಪಕ್ಷ ಜಟಾಪಟಿ

– ಅಕ್ರಮ ವಲಸಿಗರ ನುಸುಳುವಿಕೆಗೆ ಕಡಿವಾಣ ಬೀಳದಿರುವುದು

– ಟಿಎಂಸಿ ಸರ್ಕಾರದ ವಿರುದ್ಧ ವಿಪಕ್ಷಗಳ ಭ್ರಷ್ಟಾಚಾರ ಆರೋಪ

– 25,000ಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕಾತಿ ಹಗರಣ

– ರಾಜ್ಯದಲ್ಲಿನ ಕೋಮು ಸಂಘರ್ಷ, ಧರ್ಮ ರಾಜಕೀಯ ವಿವಾದ

– ರಾಜ್ಯದಲ್ಲಿ ಹೆಚ್ಚುತ್ತಿರುವ ಹಲ್ಲೆ, ಕಿರುಕುಳ, ಕಳ್ಳಸಾಗಣೆ ಘಟನೆ

– ಆರ್‌ಜಿ ಕರ್‌, ಕಾನೂನು ಕಾಲೇಜಿನ ಅತ್ಯಾ*ಚಾರ ಘಟನೆಗಳು

ಇದನ್ನೂ ಓದಿ: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ: ಯಾರಿಗೆ ಸಿಗಲಿದೆ ಅಧಿಕಾರದ ಗದ್ದುಗೆ?

Source link

Leave a Reply

Your email address will not be published. Required fields are marked *