ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು? | Assma Assembly Elecion 2026 What Are The Pluses And Minuses Of Bjp Congress Parties Mrq

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು? | Assma Assembly Elecion 2026 What Are The Pluses And Minuses Of Bjp Congress Parties Mrq



ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು? | Assma Assembly Elecion 2026 What Are The Pluses And Minuses Of Bjp Congress Parties Mrq

ಅಸ್ಸಾಂ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿಯು ಹಿಮಾಂತ ಬಿಸ್ವ ಶರ್ಮಾ ಅವರ ವರ್ಚಸ್ಸು ಮತ್ತು ಕಲ್ಯಾಣ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಮತ್ತು ಅಲ್ಪಸಂಖ್ಯಾತರ ಅಸಮಾಧಾನವನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ

ಬಿಜೆಪಿ- ಕಾಂಗ್ರೆಸ್‌ ನೇರ ಸಮರ: ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?

ಬಿಜೆಪಿ

ಬಲ: ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ. ಅನೇಕ ಜನಕಲ್ಯಾಣ ಯೋಜನೆಯಿಂದ ಪಟ್ಟಭದ್ರ. ನಕ್ಸಲ್‌ ಶರಣಾಗತಿ ಬಹುದೊಡ್ಡ ಸಾಧನೆ. ಸಿಎಂ ಹಿಮಾಂತ ಬಿಸ್ವ ಶರ್ಮಾ ವರ್ಚಸ್ಸು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಪ್ರಚಾರದ ಬಲ.

ದೌರ್ಬಲ್ಯ: ಪ್ರಗತಿ ಕಾಣದ ಪ್ರದೇಶಗಳಲ್ಲಿ ಆಡಳಿತ ವಿರೋಧಿ ಅಲೆಯ ಆತಂಕ. ಮನೆ ತೆರವು ಕ್ರಮದಿಂದ ಬಂಗಾಳಿ ಮುಸಲ್ಮಾನರ ಮತ ನಷ್ಟ. ಸಿಎಂ ಶರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಕಳಂಕ.

ಅವಕಾಶ: ವಿಪಕ್ಷ ಛಿದ್ರಗೊಂಡಿರುವುದರ ಲಾಭ. ಸ್ತ್ರೀಯರು, ಮಕ್ಕಳು, ಹಿಂದುಳಿದವರ ಪರ ಯೋಜನೆಗಳು ಹಾಗೂ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದಿಂದ ಬೆಂಬಲದ ನಿರೀಕ್ಷೆ.

ಸವಾಲು: ಟಿಕೆಟ್‌ ಸಿಗದ ಆಕಾಕ್ಷಿಗಳ ಅಸಮಾಧಾನ ನಿಭಾಯಿಸಬೇಕು. ಮುಸಲ್ಮಾನರ ವಿರುದ್ಧದ ಸಿಎಂ ವಾಗ್ದಾಳಿಯಿಂದ ಆ ಸಮುದಾಯದ ಮತ ಕೈತಪ್ಪಬಹುದು.

ಕಾಂಗ್ರೆಸ್‌:

ಬಲ: ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಿಂದ ಲಾಭ. ಬಿಜೆಪಿ ವಿರುದ್ಧದ ಬಂಗಾಳಿ ಮುಸಲ್ಮಾನರ ಕೋಪವೂ ವರ. ಬಿಜೆಪಿ ವಿರುದ್ಧ ಜೋರ್ಹಾಟ್‌ನಿಂದ ಗೆದ್ದ ಗೌರವ್‌ ಗೊಗೋಯ್‌ ಸಿಎಂ ಮುಖವೆಂದು ಪ್ರಚಾರ. ಸಿಎಂ, ಪರಿವಾರದ ಭ್ರಷ್ಟಾಚಾರ ಆರೋಪದ ಅಸ್ತ್ರ.

ದೌರ್ಬಲ್ಯ: ಬಿಜೆಪಿಗೆ ಬಿಸ್ವಾ ವಲಸೆ ಬಳಿಕ ರಾಜ್ಯದಲ್ಲಿ ಕುಂದಿದ ಶಕ್ತಿ. ಒಳ-ಒಡಕುಗಳಿಂದ ಹಿನ್ನಡೆ ಸಂಭವ. ಗೊಗೋಯ್‌ ಪತ್ನಿಗೆ ಪಾಕಿಸ್ತಾನದ ನಂಟು ಆರೋಪ.

ಅವಕಾಶ: ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪ, ಅಲ್ಪಸಂಖ್ಯಾತರು ಎದುರಿಸಿಸ ಮಾನವೀಯ ಬಿಕ್ಕಟ್ಟು, 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡುವಲ್ಲಿ ಸರ್ಕಾರದ ವಿಫಲತೆಯ ಉಲ್ಲೇಖ. ಎನ್‌ಡಿಎ ಕೂಟದ ಅತೃಪ್ತರಿಗೆ ಗಾಳ.

ಸವಾಲು: ಅಸ್ಸಾಮಿಗರ ಕಡೆಗಣಿಸಿ ಬೆಂಗಾಲಿ ಮುಸಲ್ಮಾನರನ್ನೇ ಮತಬ್ಯಾಂಕ್‌ ಎಂದು ಪರಿಗಣಿಸಿದರೆ ಹೆಚ್ಚು ವೋಟ್‌ ಗಳಿಕೆ ಕಷ್ಟ. ಪ್ರಮುಖ ನಯಕರು ಪಕ್ಷ ತೊರೆಯುತ್ತಿರುವುದೂ ಸವಾಲು.

ಇದನ್ನೂ ಓದಿ: Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?

ಅಸ್ಸಾಂ ಚುನಾವಣೆಯಲ್ಲಿ ಪ್ರಮುಖ ಅಂಶಗಳು

  • ಬಾಂಗ್ಲಾದೇಶ ಅಕ್ರಮ ವಲಸಿಗರ ಒಳನುಸುಳುವಿಕೆ
  • ಅತಿಕ್ರಮಣ ಭೂಮಿ ಹೊಂದಿದ್ದವರ ತೆರವು ಕೆಲಸ
  • ಬಾಲ್ಯ ವಿವಾಹ, ಬಹುಪತ್ನಿತ್ವ ವಿರುದ್ಧ ಬಿಜೆಪಿ ಕ್ರಮ
  • ಬಿಜೆಪಿ ಸರ್ಕಾರದ ಅಭಿವೃದ್ಧಿ / ಕಲ್ಯಾಣ ಯೋಜನೆಗಳು
  • ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ
  • ಸಿಂಗಾಪುರದಲ್ಲಿ ಖ್ಯಾತ ಗಾಯಕ ಜುಬೀನ್ ಗರ್ಗ್‌ ಸಾವು

ಇದನ್ನೂ ಓದಿ: ಪಶ್ಚಿಮ ಬಂಗಾಳದ ಕದನ ಕಣ: ಸಿಎಂ ಮಮತಾ ಬ್ಯಾನರ್ಜಿ ಬತ್ತಳಿಕೆಯಲ್ಲಿರೋ ಅಸ್ತ್ರ ಯಾವುದು?



Source link

Leave a Reply

Your email address will not be published. Required fields are marked *