
ಬೆಂಗಳೂರು, ಮಾರ್ಚ್ 16: ಬೆಂಗಳೂರು (ಬೆಂಗಳೂರು) ಅಂದ್ರೆ ದುಬಾರಿ. ಇಲ್ಲಿ ಎಷ್ಟು ದುಡಿದ್ರೂ ಮನೆ ಬಾಡಿಗೆ, ದಿನಸಿ ಹಾಗೂ ಉಳಿದ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದ್ರಲ್ಲಿಯೇ ಜೇಬು ಖಾಲಿಯಾಗಿರುತ್ತದೆ. ಇಂತಹದ್ದೇ ಅನುಭವ ಯುವತಿಗೆ ಆಗಿದೆ. ಬೆಂಗಳೂರಿನಲ್ಲಿ ಎರಡು ತಿಂಗಳ ಇಂಟರ್ನ್‌ಶಿಪ್ ಅವಧಿಯಲ್ಲಿ ಅಂಶಿಕಾ ಅಗರ್ವಾಲ್ (ಅಂಶಿಕಾ ಅಗರ್ವಾಲ್) ತನ್ನ ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾಳೆ. ಈ ಪೋಸ್ಟ್‌ನಲ್ಲಿ ವಿವರವಾದ ಮಾಹಿತಿ ನೀಡಿದ್ದಾಳೆ.
ಅಂಶಿಕಾ ಅಗರ್ವಾಲ್ (@kipupwidanshika) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮಾಸಿಕ ಖರ್ಚುವೆಚ್ಚಗಳ ಬಗ್ಗೆ ಉಲ್ಲೇಖಿಸಲಾಗಿದೆ. ಪಿಜಿಗೆ ಮಾತ್ರ ತಿಂಗಳಿಗೆ ಸುಮಾರು 12,500 ರೂ ಖರ್ಚು ಆಯ್ತು. ಆಹಾರವು ಎರಡನೇ ಅತಿದೊಡ್ಡ ವೆಚ್ಚವಾಗಿದ್ದು, ಪ್ರತಿ ತಿಂಗಳು ಸುಮಾರು 6,000 ರೂ ಊಟಕ್ಕೆ ಎತ್ತಿಡಬೇಕಾಯ್ತು. ಪಿಜಿ ವಸತಿ ಸೌಕರ್ಯವು ಸಾಮಾನ್ಯವಾಗಿದ್ದರೂ, ಆಹಾರ ಹೆಚ್ಚು ಅವಲಂಬಿಸಲು ಸಾಧ್ಯವಾಗಲಿಲ್ಲ ಹೊರಗಿನ ಊಟಕ್ಕೆ ಹೆಚ್ಚುವರಿ ಖರ್ಚು ಮಾಡಲಾಗಿತ್ತು ಎಂದು ಹೇಳಲಾಗಿದೆ.
ಪೋಸ್ಟ್ ವೈರಲ್ ಇಲ್ಲಿದೆ
2 ತಿಂಗಳ ಇಂಟರ್ನ್‌ಶಿಪ್‌ನಲ್ಲಿ ನನ್ನ ಬೆಂಗಳೂರಿನ ಖರ್ಚು ಇಲ್ಲಿದೆ
ಪುಟ: 12.5 ಕೆ
ಆಹಾರ: 6 ಕೆ (ನಾನು ಪಿಜಿ ಆಹಾರವನ್ನು ತಿನ್ನಲು ಸಾಧ್ಯವಾಗಲಿಲ್ಲ)
ಪ್ರಯಾಣ: ಆಟೋ, ಕ್ಯಾಬ್ಗಳಲ್ಲಿ 2 ಕೆ
ಪ್ರವಾಸಗಳು: 2k (ಹೆಚ್ಚು ಹೊರಗೆ ಹೋಗಲಿಲ್ಲ)
ಇತರೆ: 1-2 ಕೆ
ಒಟ್ಟು: ಸುಮಾರು 26 ಸಾವಿರ
ಬೆಂಗಳೂರು ದುಬಾರಿಯಾಗಿದೆ ಏಕೆಂದರೆ ಬಾಡಿಗೆ ಮತ್ತು ಕೆಲವೊಮ್ಮೆ ಪ್ರಯಾಣ ಅಥವಾ ನೀವು ಪಡೆಯಬಹುದು…— 0xcoder (@kipupwidanshika) ಮಾರ್ಚ್ 14, 2026
ಮಾಸಿಕ ವೆಚ್ಚಗಳಲ್ಲಿ ಟ್ರಾವೆಲ್‌ಗಾಗಿ ಸರಿಸುಮಾರು 2,000 ರೂ ಇದೆ. ಸುತ್ತಾಟಕ್ಕಾಗಿ 2,000 ರೂ, (ಇಂಟರ್ನ್‌ಶಿಪ್ ಸಮಯದಲ್ಲಿ) ಮತ್ತು ದೈನಂದಿನ ಅಗತ್ಯ ವಸ್ತುಗಳಂತಹ ವಿವಿಧ ವೆಚ್ಚಗಳು 1,000 ರೂಯಿಂದ 2,000 ರೂ ತಗಲಿವೆ. ಒಟ್ಟಾರೆಯಾಗಿ ಎರಡು ತಿಂಗಳ ಇಂಟರ್ನ್‌ಶಿಪ್‌ನಲ್ಲಿ 26,000 ರೂ ಖರ್ಚು ಆಯಿತು ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್
ಈ ಪೋಸ್ಟ್ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ನನ್ನದು ತಿಂಗಳಿಗೆ 40 ರಿಂದ 50 ಸಾವಿರ ರೂ ಖರ್ಚು ಎಂದು ಹೇಳಿದ್ದಾರೆ. ಇತರರು, ತುಂಬಾ ದುಬಾರಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಹುಶಃ ನನಗೆ ಪ್ರವಾಸಕ್ಕೆ ಸುಮಾರು 4-5 ಸಾವಿರ ಬೇಕಾಗಬಹುದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿದರೆ ಬೆಂಗಳೂರಿನಲ್ಲಿ ವಾಸಿಸುವುದು ಅಷ್ಟು ದುಬಾರಿಯಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ