Viral Post: PTMಗೆ ಬೇಕಾಗಿದೆ ನಕಲಿ ಪೇರೆಂಟ್ಸ್, 15 ಸಾವಿರ ಆಫರ್ ಇಟ್ಟ ಬೆಂಗಳೂರು ವಿದ್ಯಾರ್ಥಿನಿ ಪೋಸ್ಟ್ ವೈರಲ್ | Bengaluru Student Offers Rs 15000 To Hire Fake Parent For Ptm

Viral Post: PTMಗೆ ಬೇಕಾಗಿದೆ ನಕಲಿ ಪೇರೆಂಟ್ಸ್, 15 ಸಾವಿರ ಆಫರ್ ಇಟ್ಟ ಬೆಂಗಳೂರು ವಿದ್ಯಾರ್ಥಿನಿ ಪೋಸ್ಟ್ ವೈರಲ್ | Bengaluru Student Offers Rs 15000 To Hire Fake Parent For Ptm



Viral Post: PTMಗೆ ಬೇಕಾಗಿದೆ ನಕಲಿ ಪೇರೆಂಟ್ಸ್, 15 ಸಾವಿರ ಆಫರ್ ಇಟ್ಟ ಬೆಂಗಳೂರು ವಿದ್ಯಾರ್ಥಿನಿ ಪೋಸ್ಟ್ ವೈರಲ್ | Bengaluru Student Offers Rs 15000 To Hire Fake Parent For Ptm

student viral post : ನಿಮಗೆ 40 ವರ್ಷ ದಾಟಿದ್ಯಾ? ಒಳ್ಳೆ ಇಂಗ್ಲೀಷ್ ಬರುತ್ತಾ? ಹಾಗಿದ್ರೆ 15 ಸಾವಿರ ಗಳಿಸೋ ಅವಕಾಶ ಇದೆ. ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ಈಗ ಎಲ್ಲರ ಗಮನ ಸೆಳೆದಿದೆ. 

ಪಿಟಿಎಂ ಅನ್ನೋದು ಪಾಲಕರು ಮತ್ತು ಶಿಕ್ಷಕರ ಮಧ್ಯೆ ಮಾತುಕತೆಗೆ ಒಂದೊಳ್ಳೆ ಸಮಯ. ಮಕ್ಕಳ ಸ್ಟಡಿ, ಅವರ ತಪ್ಪು, ಅವರ ಟ್ಯಾಲೆಂಟ್ ಸೇರಿದಂತೆ ಎಲ್ಲದರ ಬಗ್ಗೆ ಇಲ್ಲಿ ಚರ್ಚೆಯಾಗುತ್ತೆ. ಎಗ್ಸಾಂ ಮುಗಿದ ನಂತ್ರ ಬಹುತೇಕ ಎಲ್ಲ ಸ್ಕೂಲ್ ಗಳಲ್ಲಿ ಈ ಪಿಟಿಎಂ ಕಾಮನ್. ಪಿಟಿಎಂ ಡೇಟ್ ಫಿಕ್ಸ್ ಆಗ್ತಿದ್ದಂತೆ ಮಕ್ಕಳ ಎದೆ ಬಡಿತ ಜೋರಾಗುತ್ತೆ. ಸಿನಿಮಾಗಳಲ್ಲಿ ನಕಲಿ ಪೇರೆಂಟ್ಸ್ ಸ್ಕೂಲಿಗೆ ಕರೆದುಕೊಂಡು ಹೋಗೋದು ಕಾಮನ್ ವಿಷ್ಯ. ಅನೇಕ ಸಿನಿಮಾಗಳಲ್ಲಿ ನೀವು ಈ ಸೀನ್ ನೋಡ್ಬಹುದು. ಆದ್ರೆ ರಿಯಲ್ ಲೈಫ್ ನಲ್ಲೂ ಇಂತದ್ದು ನಡೀತಿರುತ್ತೆ. ಈಗ ಸೋಶಿಯಲ್ ಮೀಡಿಯಾದ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ.

ಬಾಡಿಗೆಗೆ ಬೇಕು ಅಪ್ಪ – ಅಮ್ಮ

ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಬಾಡಿಗೆಗೆ ತಂದೆ – ತಾಯಿಯ ಹುಡುಕಾಟ ನಡೆಸ್ತಿದ್ದಾಳೆ. ಆಕೆ ಕಾಲೇಜಿನಲ್ಲಿ ಪಿಟಿಎಂ ಬರ್ತಿದೆ. ಅದಕ್ಕೆ ಪಾಲಕರಾಗಿ ಬರಲು ಜನ ಬೇಕು. ಸೋಶಿಯಲ್ ಮೀಡಿಯಾದಲ್ಲಿ ಆಕೆ ಪೋಸ್ಟ್ ಹಾಕಿದ್ದು, ಬಾಡಿಗೆ ಅಪ್ಪ – ಅಮ್ಮನಿಗೆ ಹಣ ನೀಡೋದಾಗಿ ಹೇಳಿದ್ದಾಳೆ. ಆಕೆ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಾತ್ರವಲ್ಲ, ಸಾಕಷ್ಟು ತಮಾಷೆ ಕಮೆಂಟ್ ಗೆ ಕಾರಣವಾಗಿದೆ.

ಕಲಬುರಗಿ: 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ ಅದ್ದೂರಿ ನಾಮಕರಣ: ಗೋ ಸೇವಕರಿಗೆ

ಪೋಸ್ಟ್ ನಲ್ಲಿ ಏನಿದೆ?

ಇಂದಿರಾ ನಗರದಲ್ಲಿರುವ ನಕಲಿ ಪಾಲಕರನ್ನು ಹುಡುಕುತ್ತಿದ್ದೇನೆ ಎಂದು ಪೋಸ್ಟ್ ಶೀರ್ಷಿಕೆ ಹಾಕಲಾಗಿದೆ. ನಾನು ಕಾಲೇಜಿನಲ್ಲಿ ಓದುತ್ತಿದ್ದೇನೆ. ಕಾಲೇಜಿನಲ್ಲಿ ಪಿಟಿಎಂ ಬರ್ತಿದೆ. ಅದಕ್ಕೆ ನಕಲಿ ಪಾಲಕರು ಬೇಕಾಗಿದ್ದಾರೆ. ಪಿಟಿಎಂಗೆ ಅವರು ನನ್ನ ಜೊತೆ ಬರಬೇಕು. 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲವರಾಗಿದ್ದರೆ, ನನ್ನನ್ನು ಸಂಪರ್ಕಿಸಿ. ನನ್ನ ಗೆಳೆಯ 15,000 ರೂಪಾಯಿಗಳನ್ನು ಪಾವತಿಸಲು ಸಿದ್ಧರಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಬಳಕೆದಾರರ ಕಮೆಂಟ್

ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಅನೇಕರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ನನ್ನ ತಂದೆ ನಿವೃತ್ತರಾಗಿದ್ದಾರೆ. ಹೆಚ್ಚುವರಿ ಆದಾಯ ಗಳಿಸುವ ಮಾರ್ಗವನ್ನು ಹುಡುಕುತ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಿಮ್ಮ ಎಲ್ಲ ಷರತ್ತುಗಳಿಗೆ ನಾವು ಯೋಗ್ಯವಾಗಿಲ್ಲ, ಸಣ್ಣಪುಟ್ಟ ಚೇಂಜಸ್ ಇದೆ, ನಾವು ಬರಬಹುದಾ ಅಂತ ಕೇಳಿದ್ದಾರೆ. ನನಗೆ 34 ವರ್ಷವಾಗಿದೆ, ಗಡ್ಡ, ಮೀಸೆ ಅಲ್ಲಲ್ಲಿ ಬೆಳ್ಳಗಾಗಿದೆ, ಇದು ಓಕೆನಾ ಅಂತ ಕೇಳಿದ್ದಾರೆ. ಇನ್ನೊಬ್ಬರು ನನಗೆ 40 ವರ್ಷ ಆಗಿಲ್ಲ ಈಗಿನ್ನೂ 31 ವರ್ಷ. ಆದ್ರೆ ಸಾಕಷ್ಟು ಅನುಭವ ಇದೆ, ನಾನು ಬರ್ತೇನೆ ಅಂತ ಕಮೆಂಟ್ ಮಾಡಿದ್ದಾರೆ.

ತುಮಕೂರು: ಸಹಕಾರಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಸೇರಿಸಿದ ಆರೋಪ

ಹಲವು ಬಳಕೆದಾರರು ಹಣ ಇಲ್ದೆ ಮೋಜಿಗಾಗಿ ಬರಲು ಇಷ್ಟಪಟ್ಟಿದ್ದಾರೆ. ನಮಗೆ ಹಣ ಬೇಡ, ಇದನ್ನು ಮೋಜಿಗಾಗಿ ಮಾಡ್ತೇವೆ, ಬರಬಹುದಾ ಅಂತ ಕೇಳಿದ್ದಾರೆ. ವಯಸ್ಸು ಚಿಕ್ಕದು, ಮೇಕಪ್ ಅಗತ್ಯವಿದೆ ಆದ್ರೆ ಹಣ ಬೇಡ ಅಂತ ಮತ್ತೊಬ್ಬರು ಬರೆದಿದ್ದಾರೆ.

ಇನ್ನೊಬ್ಬರು 2003ರಲ್ಲಿ ಆದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 2003 ರಲ್ಲಿ ನನ್ನ ಫ್ರೆಂಡ್ ಒಬ್ರು ಹೀಗೆ ಮಾಡಿದ್ರು. ಸುಂದರವಾಗಿ ಇಂಗ್ಲೀಷ್ ಮಾತನಾಡಬಲ್ಲ ಅಡುಗೆಯವರನ್ನು ತಂದೆ ಅಂತ ಕಾಲೇಜಿಗೆ ಕರೆದುಕೊಂಡು ಹೋಗಿದ್ರು. ಶನಿವಾರ ಆಗಿದ್ರಿಂದ ಅಡುಗೆಯವನಿಗೆ ಕೆಲ್ಸ ಇರಲಿಲ್ಲ, ಇದನ್ನು ಚೆನ್ನಾಗಿ ನಿಭಾಯಿಸಿದ್ದ. ಆದ್ರೆ ಒಂದು ವಾರದ ನಂತ್ರ ಫ್ರೆಂಡ್ ನಿಜವಾದ ತಂದೆ ಕಾಲೇಜಿಗೆ ಬಂದಿದ್ರು ಅಂತ ಬರೆದಿದ್ದಾರೆ. ಮತ್ತೆ ಕೆಲವರಿಗೆ ಕಾಲೇಜಿನಲ್ಲೂ ಪಿಟಿಎಂ ಇರುತ್ತೆ ಅನ್ನೋದು ಇಂಟರೆಸ್ಟಿಂಗ್ ವಿಷ್ಯವಾಗಿದೆ. 10ನೇ ತರಗತಿ ತನಕ ಮಾತ್ರ ಅಂತ ಅಂದ್ಕೊಂಡಿದ್ವಿ, ಕಾಲೇಜಿನಲ್ಲೂ ಇರುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *