Headlines

ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು! ಮುಂದೇನಾಯ್ತು? | Kochi Wedding Bride Faints On Stage After Friends Surprise Firecrackers Explode Sat

ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು! ಮುಂದೇನಾಯ್ತು? | Kochi Wedding Bride Faints On Stage After Friends Surprise Firecrackers Explode Sat



ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು! ಮುಂದೇನಾಯ್ತು? | Kochi Wedding Bride Faints On Stage After Friends Surprise Firecrackers Explode Sat

ಕೇರಳದಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ, ವರನ ಸ್ನೇಹಿತರು ಸಿಡಿಸಿದ ಪಟಾಕಿಯ ಭೀಕರ ಶಬ್ದಕ್ಕೆ ಬೆಚ್ಚಿಬಿದ್ದ ವಧು ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಘಟನೆಯು ಮದುವೆ ಸಂಭ್ರಮಗಳಲ್ಲಿನ ಅತಿಯಾದ ವರ್ತನೆಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಸುಂದರ ಮತ್ತು ಸಂಭ್ರಮದ ಕ್ಷಣ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಸ್ನೇಹಿತರು, ಸಂಬಂಧಿಕರು ನಾನಾ ರೀತಿಯ ‘ಸರ್ಪ್ರೈಸ್’ ಪ್ಲಾನ್ ಮಾಡುತ್ತಾರೆ. ಆದರೆ, ಇಲ್ಲಿ ಸ್ನೇಹಿತರು ನೀಡಿದ ಇಂತಹದ್ದೇ ಒಂದು ಸರ್ಪ್ರೈಸ್ ಅಕ್ಷರಶಃ ಯಡವಟ್ಟಿಗೆ ಕಾರಣವಾಗಿದೆ. ಗೆಳೆಯರು ಸಂಭ್ರಮಕ್ಕಾಗಿ ಸಿಡಿಸಿದ ಪಟಾಕಿಯ ಭೀಕರ ಶಬ್ದಕ್ಕೆ ಬೆಚ್ಚಿಬಿದ್ದ ವಧು, ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ.

ಘಟನೆಯ ವಿವರ:

ಕೇರಳದ ಕೊಚ್ಚಿಯ ವೈಟ್ಟಿಲ ಮೂಲದ ಯುವತಿ ಹಾಗೂ ವರನ ಮದುವೆಯ ಆರತಕ್ಷತೆ (Reception) ಕಾರ್ಯಕ್ರಮವು ಭಾನುವಾರ ಸಂಜೆ ತ್ರಿಪುಣಿತುರದಲ್ಲಿರುವ ಖಾಸಗಿ ಹಾಲ್‌ನಲ್ಲಿ ಅದ್ಧೂರಿಯಾಗಿ ಆಯೋಜನೆಯಾಗಿತ್ತು. ಸಂಬಂಧಿಕರು, ಸ್ನೇಹಿತರು ನವಜೋಡಿಯನ್ನು ಆಶೀರ್ವದಿಸಲು ಆಗಮಿಸಿದ್ದರು. ಕಾರ್ಯಕ್ರಮದ ಹೈಲೈಟ್ ಆಗಿ ವಧು-ವರರು ವೇದಿಕೆಗೆ ಆಗಮಿಸುವ ಕ್ಷಣವನ್ನು ವಿಶೇಷವಾಗಿಸಲು ವರನ ಸ್ನೇಹಿತರು ನಿರ್ಧರಿಸಿದ್ದರು. ಯಾವಾಗ ನವಜೋಡಿ ಮೆರವಣಿಗೆಯ ಮೂಲಕ ವೇದಿಕೆಯತ್ತ ಹೆಜ್ಜೆ ಹಾಕಿದರೋ, ಆಗ ಪಕ್ಕದಲ್ಲೇ ಇದ್ದ ಸ್ನೇಹಿತರು ಅತಿ ಹೆಚ್ಚು ಶಬ್ದ ಮಾಡುವ ‘ಗುಂಡು ಪಟಾಕಿ’ಗಳನ್ನು ಏಕಾಏಕಿ ಸಿಡಿಸಿದ್ದಾರೆ. ನಿರೀಕ್ಷೆಯೇ ಇರದ ಈ ಭೀಕರ ಶಬ್ದಕ್ಕೆ ವಧು ಗಾಬರಿಗೊಂಡಿದ್ದಾರೆ. ಶಬ್ದದ ತೀವ್ರತೆ ಎಷ್ಟಿತ್ತೆಂದರೆ, ವಧು ಅತೀಂದ್ರಿಯವಾಗಿ ನಡುಗಿ ಅಲ್ಲೇ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಸಂಭ್ರಮದ ವಾತಾವರಣವು ಆತಂಕಕ್ಕೆ ತಿರುಗಿತು.

ಆಸ್ಪತ್ರೆಗೆ ದೌಡಾಯಿಸಿದ ಕುಟುಂಬ:

ವಧು ಪ್ರಜ್ಞೆ ತಪ್ಪುತ್ತಿದ್ದಂತೆ ಗಾಬರಿಗೊಂಡ ವರ ಮತ್ತು ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಮದುವೆಗೆಂದು ಸಿಂಗರಿಸಿದ್ದ ಕಾರಿನಲ್ಲೇ ಹತ್ತಿರದ ತ್ರಿಪುಣಿತುರ ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ರಾತ್ರಿ ಸುಮಾರು 7:30ರ ವೇಳೆಗೆ ವಧುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತಕ್ಷಣವೇ ಚಿಕಿತ್ಸೆ ಆರಂಭಿಸಿ, ಆಕೆಗೆ ಡ್ರಿಪ್ಸ್ ಹಾಕಿದರು. ಸ್ವಲ್ಪ ಸಮಯದ ನಂತರ ಆಕೆ ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ವೈದ್ಯರು ತಿಳಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ವಧು, ಧೈರ್ಯಗೆಡದೆ ಮತ್ತೆ ವರನ ಜೊತೆ ರಿಸೆಪ್ಷನ್ ಹಾಲ್‌ಗೆ ವಾಪಸಾದರು. ಅರೆಬರೆ ನಿಂತಿದ್ದ ಕಾರ್ಯಕ್ರಮವನ್ನು ಅಂತಿಮವಾಗಿ ಪೂರ್ಣಗೊಳಿಸಲಾಯಿತು. ಆದರೆ, ಸ್ನೇಹಿತರ ಈ ಅತಿಯಾದ ಸಂಭ್ರಮ ಮಾತ್ರ ಅತಿಥಿಗಳಲ್ಲಿ ಮತ್ತು ಕುಟುಂಬದವರಲ್ಲಿ ಅಸಮಾಧಾನ ಮೂಡಿಸಿತ್ತು.

ಮದುವೆ ಮನೆಗಳಲ್ಲಿ ಹೆಚ್ಚುತ್ತಿರುವ ಯಡವಟ್ಟುಗಳು:

ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ದೊಡ್ಡ ಮಟ್ಟದ ಗಲಾಟೆಗಳು ನಡೆಯುತ್ತಿವೆ. ಇತ್ತೀಚೆಗೆ ಕೇರಳದಲ್ಲೇ ಮದುವೆ ಊಟದ ವೇಳೆ ‘ಹಪ್ಪಳ’ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ವಿಡಿಯೋ ವೈರಲ್ ಆಗಿತ್ತು. ಅಂತಹ ಘಟನೆಗಳ ಬೆನ್ನಲ್ಲೇ ಈಗ ಈ ಪಟಾಕಿ ದುರಂತ ವರದಿಯಾಗಿದೆ. “ಸಂಭ್ರಮದ ಹೆಸರಿನಲ್ಲಿ ಇತರರಿಗೆ ತೊಂದರೆಯಾಗುವ ಅಥವಾ ಅಪಾಯ ತರುವಂತಹ ಕೆಲಸಗಳನ್ನು ಮಾಡಬಾರದು” ಎಂದು ನೆಟ್ಟಿಗರು ಈ ಘಟನೆಯ ಬಗ್ಗೆ ಕಿಡಿಕಾರುತ್ತಿದ್ದಾರೆ.



Source link

Leave a Reply

Your email address will not be published. Required fields are marked *