ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!

ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!

ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!

ಬೆಂಗಳೂರು: 19ನೇ ಸೀಸನ್‌ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮೊದಲು ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿಯೂ ಟ್ರೋಫಿ ಗೆಲ್ಲದ ಆರು ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

ಆರ್‌ಸಿಬಿ ತಂಡದ ಆಪತ್ಬಾಂಧವನಾಗಿ ಗುರುತಿಸಿಕೊಂಡು ಒಂದು ದಶಕಗಳ ಕಾಲ ಆಡಿದರೂ ಎಬಿ ಡಿವಿಲಿಯರ್ಸ್ ಪಾಲಿಗೆ ಐಪಿಎಲ್‌ ಟ್ರೋಫಿ ಗಗನ ಕುಸುಮವಾಗಿಯೇ ಉಳಿಯಿತು. ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಆರ್‌ಸಿಬಿ ತಂಡದ ಪರ ಒಟ್ಟು 184 ಮ್ಯಾಚ್ ಆಡಿದರೂ, ಎಬಿಡಿಗೆ ಕಪ್‌ ಗೆಲ್ಲಲು ಸಾಧ್ಯವಾಗದೇ ನಿವೃತ್ತಿ ಘೋಷಿಸಿದರು.

ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಇದುವರೆಗೂ 177 ಐಪಿಎಲ್ ಮ್ಯಾಚ್ ಆಡಿದ್ದರೂ ಐಪಿಎಲ್‌ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಡೆಲ್ಲಿ ಡೇರ್‌ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರೂ ಸಂಜು ಐಪಿಎಲ್ ಟ್ರೋಫಿ ಗೆದ್ದಿಲ್ಲ. ಇದೀಗ 19ನೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲು ರೆಡಿಯಾಗಿದ್ದು, ಸಿಎಸ್‌ಕೆ ಪರವಾದರೂ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ತಾರಾ ಕಾದು ನೋಡಬೇಕಿದೆ.

ಭಾರತದ ದಿಗ್ಗಜ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಒಟ್ಟು 162 ಮ್ಯಾಚ್ ಆಡಿ 174 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಆದರೆ ಐಪಿಎಲ್ ಟ್ರೋಫಿ ಮಾತ್ರ ಗೆಲ್ಲಲು ಸಾಧ್ಯವಾಗಲಿಲ್ಲ. ಅಮಿತ್ ಮಿಶ್ರಾ, ಡೆಲ್ಲಿ ಕ್ಯಾಪಿಟಲ್ಸ್, ಡೆಕ್ಕನ್ ಚಾರ್ಜಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ಪ್ರತಿನಿಧಿಸಿದ್ದರೂ ಕಪ್ ಗೆಲ್ಲದೇ ಐಪಿಎಲ್‌ಗೆ ವಿದಾಯ ಘೋಷಿಸಿದರು.

ಮುಂಬೈ ಇಂಡಿಯನ್ಸ್‌ ಮೂಲಕ ಐಪಿಎಲ್‌ಗೆ ಎಂಟ್ರಿಕೊಟ್ಟ ಅಕ್ಷರ್ ಪಟೇಲ್, ಬಳಿಕ ಪಂಜಾಬ್ ಕಿಂಗ್ಸ್ ಆ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ 162 ಪಂದ್ಯಗಳನ್ನಾಡಿರುವ ಅಕ್ಷರ್ ಪಟೇಲ್ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರೂ, ಐಪಿಎಲ್‌ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ಕರ್ನಾಟಕದ ಅನುಭವಿ ಆಟಗಾರ ಕೆ ಎಲ್ ರಾಹುಲ್, ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್‌, ಲಖನೌ ಸೂಪರ್ ಜೈಂಟ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರೂ, ಐಪಿಎಲ್ ಟ್ರೋಫಿ ಎನ್ನುವುದು ಗಗನಕುಸುಮವಾಗಿದೆ. ರಾಹುಲ್ 145 ಐಪಿಎಲ್ ಮ್ಯಾಚ್ ಆಡಿಯೂ ಕಪ್ ಇದುವರೆಗೂ ಗೆದ್ದಿಲ್ಲ.

ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಕೆಕೆಆರ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿ, ಆ ಬಳಿಕ ಆರ್‌ಸಿಬಿ ತಂಡದ ದೈತ್ಯ ಆಟಗಾರನಾಗಿ ಬೆಳೆದು ನಿಂತರು. ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದರು. ಒಟ್ಟು 142 ಐಪಿಎಲ್ ಮ್ಯಾಚ್ ಆಡಿಯೂ ಗೇಲ್‌ಗೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಸಿಗಲೇಯಿಲ್ಲ.

Source link

Leave a Reply

Your email address will not be published. Required fields are marked *