
ದೆಹಲಿ, ಮಾರ್ಚ್ 16: ಕೆಲಸದ ಸ್ಥಳಗಳಲ್ಲಿ ಕೆಲವು ಉದ್ಯೋಗಿಗಳು (ನೌಕರರು) ಅನುಭವಿಸುವ ಒತ್ತಡ ಹೇಳಲಾಗದು. ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೆ ಎಷ್ಟು ಕಷ್ಟವಾದ್ರೂ ಉದ್ಯೋಗ ಬಿಡಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಯುವಕ. ಜನದಟ್ಟಣೆಯಿಂದ ತುಂಬಿದ ದೆಹಲಿ (ದೆಹಲಿ) ಮೆಟ್ರೋದ ಬೋಗಿಯೊಳಗೆ ಯುವಕನೊಬ್ಬ ಲ್ಯಾಪ್ ಟಾಪ್ ತೆರೆದು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.
@kuxh101 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ದೆಹಲಿ ಮೆಟ್ರೋದ ಬೋಗಿಯೊಳಗೆ ಕಿಕ್ಕಿರಿದ ಕಂಪಾರ್ಟ್‌ಮೆಂಟ್ ಅನ್ನು ಕಾಣಬಹುದು. ಆಫೀಸ್ ಕಾಲ್ ಸ್ವೀಕರಿಸಿದ ಬಳಿಕ ಯುವಕ ಕೆಲಸದಲ್ಲಿ ತೊಡಗಿರುವುದು ಕಂಡುಬಂದಿದೆ. ಯುವಕನೊಬ್ಬ ಲ್ಯಾಪ್‌ಟಾಪ್‌ನ್ನು ತೊಡೆಯ ಮೇಲೆ ಇರಿಸಿಕೊಂಡು ನೆಲದ ಮೇಲೆ ಕುಳಿತಿರುವಂತೆ ಕಂಡುಬಂದಿದೆ. ಇನ್ನೊಂದು ಕೈಯಲ್ಲಿ ಫೋನ್ ಹಿಡಿದುಕೊಂಡಿದ್ದಾನೆ.
ಪೋಸ್ಟ್ ವೈರಲ್ ಇಲ್ಲಿದೆ
ಮೆಟ್ರೋದಲ್ಲಿ ಈ ವ್ಯಕ್ತಿಯನ್ನು ನೋಡಿದೆ. ಅವನ ಮ್ಯಾನೇಜರ್‌ನಿಂದ ಕರೆ ಬಂತು ಮತ್ತು ತಕ್ಷಣ ತನ್ನ ಲ್ಯಾಪ್‌ಟಾಪ್ ತೆರೆದು, ನೆಲದ ಮೇಲೆ ಕುಳಿತು ತನ್ನ ಕೆಲಸವನ್ನು ಮುಗಿಸಲು ಪ್ರಾರಂಭಿಸಿದ. pic.twitter.com/XChDwHwJAy
— kush.exe (@kuxh101) ಮಾರ್ಚ್ 15, 2026
ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಈ ವ್ಯಕ್ತಿಯನ್ನು ಮೆಟ್ರೋದಲ್ಲಿ ನೋಡಲಾಗಿದೆ. ಮ್ಯಾನೇಜರ್‌ನಿಂದ ಕರೆ ಬಂತು, ತಕ್ಷಣವೇ ತನ್ನ ಲ್ಯಾಪ್‌ಟಾಪ್ ತೆರೆದು, ನೆಲದ ಮೇಲೆ ಕುಳಿತು ತನ್ನ ಕೆಲಸವನ್ನು ಮುಗಿಸಲು ಪ್ರಾರಂಭಿಸಿದನು ಎಂದು ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್
ಈ ಪೋಸ್ಟ್ ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ2. ಬಳಕೆದಾರ, ಮೆಟ್ರೋವನ್ನು ಕೆಲಸದ ಸ್ಥಳದಲ್ಲಿ ಮಾಡಿಕೊಂಡರು ಎಂದರೆ, ಮತ್ತೊಬ್ಬರು, ಇದೇ ಕಾರಣಕ್ಕೆ ನಾನು ಓದುವುದನ್ನೇ ಬಿಟ್ಟೆ ಎಂದು ಹೇಳಿದ್ದಾರೆ. ಇತರರು, ಭಾನುವಾರ ಕೂಡ ಕೆಲಸನಾ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ