
ದುಬೈ, ಮಾರ್ಚ್ 16: ಇರಾನ್-ಅಮೆರಿಕ ಯುದ್ಧಕ್ಕೆ (Iran war) ಸಂಬಂಧಿಸಿದ ಘಟನೆಗಳು ಮತ್ತು ಮಾಹಿತಿಯನ್ನು ತಪ್ಪಾಗಿ ಹಂಚಿಕೊಂಡ ಆರೋಪದ ಮೇಲೆ 35 ವ್ಯಕ್ತಿಗಳನ್ನು ಯುಇ ಆಡಳಿತ ಬಂಧಿಸುತ್ತಿದೆ. ಈ 35 ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಭಾರತೀಯರೇ ಇದ್ದಾರೆ. ವರದಿಗಳ ಪ್ರಕಾರ ಒಟ್ಟು 19 ಮಂದಿ ಭಾರತೀಯರನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ 35 ಮಂದಿಯನ್ನು ತ್ವರಿತ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ.
ಆರಂಭಿಕ ತನಿಖೆಯಲ್ಲಿ ಗೊತ್ತಾದ ಮಾಹಿತಿ ಪ್ರಕಾರ, ಈ 35 ಜನರು ಯುದ್ಧದ ವಿಚಾರಗಳನ್ನು ತಪ್ಪಾಗಿ ಬಿಂಬಿಸುವ ಕ್ಲಿಪಿಂಗ್ಗಳನ್ನು ಹಂಚಿಕೊಂಡಿದ್ದಾರೆ. ಶನಿವಾರ (ಮಾ. 14) ಹತ್ತು ಜನರನ್ನು ಬಂಧಿಸಲಾಯಿತು. ಈ 10 ಮಂದಿಯಲ್ಲಿ ಇಬ್ಬರು ಭಾರತೀಯರು ಇದ್ದಾರೆ. ಇದೀಗ 25 ಮಂದಿಯ ಮತ್ತೊಂದು ಪಟ್ಟಿ ಇದೆ. ಈ ಹೊಸ ಪಟ್ಟಿಯಲ್ಲಿ 17 ಭಾರತೀಯರಿದ್ದಾರೆ. ಈ ಎರಡು ಪಟ್ಟಿಗಳಲ್ಲಿ ಭಾರತೀಯರ ಸಂಖ್ಯೆ 19 ಇದೆ.
ಇದನ್ನೂ ಓದಿ: ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ
ಆರೋಪಿಗಳನ್ನು ಅವರು ಮಾಡಿದ ಕೃತ್ಯದ ತೀವ್ರತೆಯ ಆಧಾರದ ಮೇಲೆ ಮೂರು ಗುಂಪುಗಳಲ್ಲಿ ಸೇರಿಸಲಾಗಿದೆ. ಯುದ್ಧದಲ್ಲಿ ನಡೆಯುತ್ತಿರುವ ಮಿಸೈಲ್ ದಾಳಿ ಇತ್ಯಾದಿ ಘಟನೆಗಳ ಕ್ಲಿಪಿಂಗ್ಗಳನ್ನು ಹಂಚಿಕೊಂಡಿರುವುದು; ಎಐ ಮೂಲಕ ಕ್ಲಿಪಿಂಗ್ಗಳನ್ನು ತಿರುಚಿರುವುದು; ದಾಳಿ ಕ್ರಮಗಳನ್ನು ವೈಭವೀಕರಿಸಿರುವುದು, ಈ ರೀತಿ ಆರೋಪಿಗಳನ್ನು ವರ್ಗೀಕರಿಸಲಾಗುವುದಿಲ್ಲ.
ದುಬೈ, ಅಬುಧಾಬಿ, ಶಾರ್ಜಾ ನಗರಗಳನ್ನು ಒಳಗೊಂಡಿರುವ ಯುಎಇಯ ಮೇಲೆ ಇರಾನ್ ಹಲವು ಬಾರಿ ಮಿಸೈಲ್ ದಾಳಿ ನಡೆದಿದೆ. ಈ ಕೆಲ ಕ್ಷಿಪಣಿಗಳನ್ನು ಗಾಳಿಯಲ್ಲೇ ತಡೆಯಾಗಿದೆ. ಇಂತಹ ವಿಡಿಯೋಗಳನ್ನು ಡಿಜಿಟಲ್ ಪ್ಲಾಟ್ ಘಟನೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಹೀಗೆ ಹಂಚಿಕೊಳ್ಳುವಾಗ ಯುದ್ಧೋನ್ಮಾದವಿರುವಂತೆ ಬಿಂಬಿಸುವಂತಹ ಕಾಮೆಂಟರಿಗಳು ಮತ್ತು ಮ್ಯೂಸಿಕ್ ಅನ್ನು ಸೇರಿಸಿರುವ ಆರೋಪವು ಮೊದಲ ಗುಂಪಿನ ಮಂದಿಯ ಮೇಲಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ರಕ್ಷಣೆ: ಭಾರತದ ನೆರವಿಗೆ ಅಮೆರಿಕ ಯಾಚನೆ?
ಎರಡನೇ ಗುಂಪಿನ ಜನರು ಐ ಸೃಷ್ಟಿತ ವಿಶುವಲ್ ಅಥವಾ ದೇಶದ ಹೊರಗೆ ನಡೆದ ಘಟನೆಯ ವಿಡಿಯೋವನ್ನು ಯುಎಇಯಲ್ಲೇ ನಡೆಯುತ್ತಿದೆ ಎಂಬಂತೆ ಮರುಬಳಕೆ ಮಾಡಿದ್ಧಾರೆ.
ಮೂರನೇ ಗುಂಪಿನಲ್ಲಿರುವ ಆರೋಪಿಗಳು ದಾಳಿ ಮಾಡಿದ ದೇಶ ಮತ್ತು ಅದರ ರಾಜಕೀಯ ಮತ್ತು ಮಿಲಿಟರಿ ನಾಯಕತ್ವ ಮತ್ತು ಯುಇಐನಲ್ಲಿ ಅವರ ದಾಳಿಯನ್ನು ವೈಭವೀಕರಿಸುವ ಕೆಲಸ ಮಾಡಿದ ಆರೋಪ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ