Headlines

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ


ಸ್ಪೀಕರ್ ಸಿಟ್ಟಿಗೆ ಹಿರಿಯ ಅಧಿಕಾರಿಗಳ ತಲೆದಂಡ: ಖಾದರ್ ಮನವೊಲಿಕೆ ಬಳಿಕ ಸದನ ಪುನಾರಂಭ

ಬೆಂಗಳೂರು, ಮಾರ್ಚ್ 16: ವಿಧಾನ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ ಸದಾ ಸದನವನ್ನು ಮುಂದೂಡದೆ ಪೀಠದಿಂದಲೇ ಎದ್ದು ಹೊರ ನಡೆದರು ಯು.ಟಿ. ಖಾದರ್ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಜೊತೆಗೆ ಸಮರ್ಪಕ ಉತ್ತರ ಕೊಡದ 3-4 ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಉತ್ತರ ಒದಗಿಸಿದ ಡಬ್ಲ್ಯುಡಿ, ಪಶುಸಂಗೋಪನೆ, ಸಾರಿಗೆ, ಐಟಿ-ಬಿಟಿ, ಡಿಪಿಎಆರ್ ಮತ್ತು ಇತರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿ ಸಿಎಂಗೆ ಸ್ಪೀಕರ್ ಆದ ಹಿನ್ನೆಲೆ, ಹಿರಿಯ ಐಎಎಸ್ ಅಧಿಕಾರಿಗಳು ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮತ್ತೊಂದೆಡೆ ಸಿಎಂ ಹಿನ್ನೆಲೆ ಮಧ್ಯಾಹ್ನ ಸಿಎಸ್‌ ಶಾಲಿನಿ ರಜನೀಶ್‌ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಧೋರಣೆಗೆ ಸ್ಪೀಕರ್ ಗರಂ; ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್

ಅಂತಿಮವಾಗಿ ಸ್ವೀಕರ್ ಸಂಧಾನ ಯಶಸ್ವಿ ಹಿನ್ನೆಲೆ ವಿಧಾನಸಭೆ ಕಲಾಪ ಪುನಾರಂಭವಾಗಿದೆ. ಲಿಖಿತ ರೂಪದ ಪ್ರಶ್ನೆಗಳಿಗೆ ಉತ್ತರ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಶಾಸಕರಿಗೆ ಉತ್ತರ ಸಿಗಬೇಕು. ಈ ಸೇರಿದಂತೆ ಸಿದ್ದರಾಮಯ್ಯ, ವಿಪಕ್ಷ ನಾಯಕರೆಲ್ಲರೂ ಸೇರಿ ಚರ್ಚಿಸಿದ್ದೇವೆ. ಉತ್ತರ ಸಿಗುವ ಬಗ್ಗೆ ಎಲ್ಲರಿಗೂ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿರೋದಾಗಿ ಸ್ಪೀಕರ್ ಖಾದರ್ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್ ನಲ್ಲೂ ಸದ್ದು ಮಾಡಿದ ಸಚಿವರ ಹಾಜರಾತಿ

ವಿಧಾನ ಸಭೆಯ ಬೆನ್ನಲ್ಲೇ ಅತ್ತ ವಿಧಾನ ಪರಿಷತ್ ನಲ್ಲೂ ಸಚಿವರ ಹಾಜರಾತಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಡ್ಡಾಯ ಹಾಜರಾತಿ ಅಂದರೂ ಸಚಿವರು ಸದನಕ್ಕೆ ಬಂದಿಲ್ಲ. ಅಧಿಕಾರಿಗಳು ಇಲ್ಲ, ಹೀಗಾದ್ರೆ ಹೇಗೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಭಾಪತಿಗಳನ್ನು ಪ್ರಶ್ನಿಸಿದ್ದಾರೆ. ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹೇಳಿ? ವಿಧಾನಸಭೆಯಲ್ಲಿ ಉತ್ತರ ಸಿಗಲಿಲ್ಲ ಅಂತಾ ಸದನ ಮುಂದೂಡಲಾಗಿದೆ. ನಮ್ಮಲ್ಲಿ ಏಕೆ ಈ ಅಸಡ್ಡೆ? ಅಧಿಕಾರಿಗಳು ಸಮರ್ಪಕ ಉತ್ತರ ಕೊಡಲ್ಲ. ಸದಸ್ಯರ 126 ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲವೆಂದು ತಿಳಿದು ಬಂದಿದೆ. ನಮ್ಮ ಸದಸ್ಯ ಇಂದಿನವರೆಗೂ ಪ್ರಶ್ನೆ ಮಾಡ್ತಾನೇ ಇದ್ದಾರೆ. ನಾವು ಉತ್ತರ ಕೊಡಲಾರದ ಪ್ರಶ್ನೆಯನ್ನ ಕೇಳುತ್ತಿದ್ದೀವಾ? ಎಂದು ಛಲವಾದಿ ಗರಂ ಆಗಿದ್ದಾರೆ. ಹೀಗಾಗಿ ಕೂಡಲೇ ಉತ್ತರ ಕೊಡಿಸಿ, ಇಲ್ಲ ಕ್ರಮ ಜರುಗಿಸಿ ಎಂದು ಸಭಾನಾಯಕ ಬೋಸರಾಜುಗೆ ಸಭಾಪತಿ ಸೂಚನೆ ನೀಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *