
ವಿರಾಟ್ ಕೊಹ್ಲಿ ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿದಿದ್ದಾರೆ. ಈ ಹದಿನೆಂಟು ವರ್ಷಗಳಲ್ಲಿ ಅನೇಕ ಆಟಗಾರರು ಬಂದು ಹೋಗಿದ್ದಾರೆ. ಇವರಲ್ಲಿ ಕೆಲವರು ಆರ್ಸಿಬಿ ತಂಡದ ಆಲ್ ಟೈಮ್ ಫೇವರೇಟ್ ಆಗಿ ಗುರುತಿಸಿಕೊಂಡಿದ್ದಾರೆ, ಇನ್ನು ಕೆಲವರು ಮಿಂಚಿ ಮರೆಯಾಗಿದ್ದಾರೆ. ಹೀಗೆ ಆರ್ಸಿಬಿ ತಂಡದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿರುವ ಸಾರ್ವಕಾಲಿಕ ಇಲೆವೆನ್ ಹೆಸರಿಸಿದ್ದಾರೆ ವಿರಾಟ್ ಕೊಹ್ಲಿ. ಈ ಹನ್ನೊಂದು ಆಟಗಾರರಲ್ಲಿ ಇಬ್ಬರು ಕನ್ನಡಿಗರು ಕೂಡ ಕಾಣಿಸಿಕೊಂಡಿರುವುದು ವಿಶೇಷ.
ವಿರಾಟ್ ಕೊಹ್ಲಿ ತಮ್ಮ ಸಾರ್ವಕಾಲಿಕ ಇಲೆವೆನ್‌ನಲ್ಲಿ ಆರಂಭಿಕರಾಗಿ ಆಯ್ಕೆ ಮಾಡಿದ್ದು ಲೆಜೆಂಡ್ ಕ್ರಿಸ್ ಗೇಲ್ ಅವರನ್ನು. ಕ್ರೀಸ್ ಗೇಲ್ ಜೊತೆ ಆರಂಭಿಕನಾಗಿ ತನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಆಪತ್ಭಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನು ಹೆಸರಿಸಿದ್ದಾರೆ.
ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರ ಹೆಸರು ಸೂಚಿಸಿದ್ದಾರೆ. ಇನ್ನು ಐದನೇ ಕ್ರಮಾಂಕಕ್ಕೆ ಪ್ರಸ್ತುತ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಆಯ್ಕೆ ಮಾಡಿರುವುದು ದಿನೇಶ್ ಕಾರ್ತಿಕ್ ಅವರನ್ನು. ಇನ್ನು ವೇಗಿಗಳಾಗಿ ಹರ್ಷಲ್ ಪಟೇಲ್, ಡೇಲ್ ಸ್ಟೈನ್ ಹಾಗೂ ಮಿಚೆಲ್ ಸ್ಟಾರ್ಕ್ ಅವರನ್ನು ಹೆಸರಿಸಿದ್ದಾರೆ.
ಹಾಗೆಯೇ ಸ್ಪಿನ್ನರ್‌ಗಳಾಗಿ ಕನ್ನಡಿಗ ಅನಿಲ್ ಕುಂಬ್ಳಿ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಹೆಸರಿಸಿದ ಸಾರ್ವಕಾಲಿಕ ಇಲೆವೆನ್‌ನಲ್ಲಿ ಐವರು ಬೌಲರ್‌ಗಳಿದ್ದಾರೆ, ಆರು ಬ್ಯಾಟರ್‌ಗಳು ಕಾಣಿಸಿಕೊಂಡಿದ್ದಾರೆ.
ಇನ್ನು ಈ ಇಲೆವೆನ್ನ ನಾಯಕನನ್ನಾಗಿ ಆಯ್ಕೆ ಮಾಡಿರುವುದು ರಜತ್ ಪಾಟಿದಾರ್ ಅವರಿಗೆ ಎಂಬುದು ವಿಶೇಷ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಂತಹ ಪಾಟಿದಾರ್ ಅವರು ತಮ್ಮ ಸಾರ್ವಕಾಲಿಕ ಇಲೆವೆನ್ ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್ ಅನುಮಾನ ಹುಟ್ಟುಹಾಕಿದ ಪಾಕ್ ವೇಗಿ
ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಆರ್ ಇಲೆವೆನ್:
- ಕ್ರಿಸ್ ಗೇಲ್
- ವಿರಾಟ್ ಕೊಹ್ಲಿ
- ಎಬಿ ಡಿವಿಲಿಯರ್ಸ್
- ಕೆಎಲ್ ರಾಹುಲ್
- ರಜತ್ ಪಾಟಿದಾರ್ (ನಾಯಕ)
- ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
- ಹರ್ಷಲ್ ಪಟೇಲ್
- ಅನಿಲ್ ಕುಂಬ್ಳೆ
- ಮಿಚೆಲ್ ಸ್ಟಾರ್ಕ್
- ಡೇಲ್ ಸ್ಟೈನ್
- ಯುಜ್ವೇಂದ್ರ ಚಾಹಲ್.