Headlines

viral video : ಇನ್ಫ್ಲುಯೆನ್ಸರ್ ಬಟ್ಟೆ ನೋಡಿ ಬೆಂಗಳೂರಿನ ವೃದ್ಧೆ ಗರಂ, ವೈರಲ್ ಆಯ್ತು ವಿಡಿಯೋ | Viral Video Woman Scolds Influencer For Wearing Short Dress

viral video : ಇನ್ಫ್ಲುಯೆನ್ಸರ್ ಬಟ್ಟೆ ನೋಡಿ ಬೆಂಗಳೂರಿನ ವೃದ್ಧೆ ಗರಂ, ವೈರಲ್ ಆಯ್ತು ವಿಡಿಯೋ | Viral Video Woman Scolds Influencer For Wearing Short Dress



viral video : ಇನ್ಫ್ಲುಯೆನ್ಸರ್ ಬಟ್ಟೆ ನೋಡಿ ಬೆಂಗಳೂರಿನ ವೃದ್ಧೆ ಗರಂ, ವೈರಲ್ ಆಯ್ತು ವಿಡಿಯೋ | Viral Video Woman Scolds Influencer For Wearing Short Dress

viral video : ಮಹಿಳೆಯರು ಬಟ್ಟೆ ವಿಷ್ಯಕ್ಕೆ ಟ್ರೋಲ್ ಆಗೋದು ಹೊಸದೇನಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಫೋಟೋಶೂಟ್ ಮಾಡ್ತಿದ್ದ ಇನ್ಪ್ಲುಯೆನ್ಸರ್ ಗೆ ವೃದ್ಧೆ ಏನು ಹೇಳಿದ್ದಾಳೆ ಗೊತ್ತಾ? 

ಮಹಿಳೆಯ ಬಟ್ಟೆ ಬಗ್ಗೆ ಉಪದೇಶ ನೀಡೋದು ಹೊಸತೇನಲ್ಲ. ಚಿಕ್ಕ ಚಿಕ್ಕ ಬಟ್ಟೆ ಧರಿಸಿ ಹುಡುಗಿಯರು ಬೀದಿಗೆ ಬಂದಾಗ ಅನೇಕರ ಕಣ್ಣು ಬೇಡ ಅಂದ್ರೂ ಬಟ್ಟೆ ಮೇಲೆ ಹೋಗುತ್ತೆ. ಕೆಲವರು ನೋಡಿಯೂ ನೋಡದಂತೆ ಹೋದ್ರೆ ಮತ್ತೆ ಕೆಲವರ ಮನಸ್ಸು ತಡೆಯೋದಿಲ್ಲ. ಹುಡುಗಿಯರಿಗೆ ಸಲಹೆ ನೀಡಲು ಶುರು ಮಾಡ್ತಾರೆ. ಹುಡುಗಿಯಾದವಳು ಮೈತುಂಬಾ ಬಟ್ಟೆ ಧರಿಸಬೇಕು ಅಂತ ಮಾತು ಶುರುಮಾಡ್ತಾರೆ. ಈಗ ಈ ಬಟ್ಟೆ ವಿಷ್ಯ ಮತ್ತೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆಂಗಳೂರಿನ ವಿಡಿಯೋ.

ಇನ್ಫ್ಲುಯೆನ್ಸರ್ ಬಟ್ಟೆ ನೋಡಿ ಕೋಪಗೊಂಡ ವೃದ್ಧೆ

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶ್ರೀಯಾನ್ಶಿ, ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈಗ ಈ ಪೋಸ್ಟ್ ಡಿಲಿಟ್ ಮಾಡಲಾಗಿದೆ. ಆದ್ರೆ ವಿಡಿಯೋ ಕೆಲ ಬೇರೆ ಫ್ಲಾಟ್ ಫಾರ್ಮ್ ಗಳಲ್ಲಿ ವೈರಲ್ ಆಗ್ತಿದೆ. ಇನ್ಫ್ಲುಯೆನ್ಸರ್ ಶ್ರೀಯಾನ್ಶಿ, ಕಪ್ಪು ಶಾರ್ಟ್ಸ್, ಬಿಳಿ ಟಾಪ್ ಮತ್ತು ಫ್ಯೂರಿ ಬೂಟುಗಳನ್ನು ಧರಿಸಿದ್ದಾರೆ. ಬೀದಿ ಬದಿಯಲ್ಲಿ ಫೋಟೋ ಶೂಟ್ ಮಾಡ್ತಿದ್ದಾರೆ. ಅಲ್ಲಿಗೆ ಬಂದ ಸೀರೆ ಧರಿಸಿರುವ ವೃದ್ಧೆ, ಶ್ರೀಯಾನ್ಶಿ ಬಟ್ಟೆ ಬಗ್ಗೆ ಮಾತನಾಡಿದ್ದಾರೆ.

Viral Post: PTMಗೆ ಬೇಕಾಗಿದೆ ನಕಲಿ ಪೇರೆಂಟ್ಸ್, 15 ಸಾವಿರ ಆಫರ್ ಇಟ್ಟ ಬೆಂಗಳೂರು ವಿದ್ಯಾರ್ಥಿನಿ ಪೋಸ್ಟ್ ವೈರಲ್

ಶ್ರೀಯಾನ್ಶಿಗೆ ಕನ್ನಡದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ ವೃದ್ಧೆ. ಹುಡುಗಿಯರು ಇಂಥ ಚಿಕ್ಕ ಬಟ್ಟೆ ಹಾಕ್ಬಾರದು. ಅದು ಅವರಿಗೆ ಚೆನ್ನಾಗಿ ಕಾಣುವುದಿಲ್ಲ. ಕುರ್ತಾ ಇಲ್ಲ ಚೂಡಿದಾರ್ ಹಾಕ್ಬೇಕು ಅಂತ ವೃದ್ಧೆ ಸಲಹೆ ನೀಡಿದ್ದಾರೆ. ಶ್ರೀಯಾನ್ಶಿ ಮೇಲೆ ನನಗೆ ಯಾವುದೇ ವೈಯಕ್ತಿಕ ಸಮಸ್ಯೆ ಇಲ್ಲ. ಆದ್ರೆ ಹುಡುಗಿಯರು ಇಂಥ ಬಟ್ಟೆ ಧರಿಸುವುದು ಸರಿ ಅಲ್ಲ ಅಂತ ಹೇಳಿದ್ದಾರೆ. ಅವರ ಮಾತಿಗೆ ತಿರುಗುತ್ತರ ನೀಡದ ಶ್ರೀಯಾನ್ಶಿ, ಸುಮ್ಮನೆ ಕೇಳಿಸಿಕೊಂಡಿದ್ದಾರೆ. ನಂತ್ರ ಕ್ಷಮೆ ಕೇಳಿದ್ದಲ್ಲದೆ, ಆದಷ್ಟು ಬೇಗ ಪ್ರಕರಣ ಮುಗಿಸುವ ಪ್ರಯತ್ನ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾ ಕಮೆಂಟ್

ಶ್ರೀಯಾನ್ಶಿ ಪೋಸ್ಟ್ ಮಾಡಿದ್ದ ಈ ವಿಡಿಯೋ 1.4 ಮಿಲಿಯನ್ ಗಿಂತ ಹೆಚ್ಚು ವೀವ್ಸ್ ಪಡೆದಿತ್ತು. ಆದ್ರೆ ಶ್ರೀಯಾನ್ಶಿ ಇದನ್ನು ಡಿಲಿಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಈ ಘಟನೆಯನ್ನು ಟೀಕಿಸಿದ್ದಾರೆ. ಇದು ನೈತಿಕ ಪೊಲೀಸ್ ಗಿರಿ ಅಂತ ಕರೆದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಬಟ್ಟೆ ಆರಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ ಅಂತ ಜನರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಶ್ರೀಯಾನ್ಶಿ ವರ್ತನೆಯನ್ನು ಮೆಚ್ಚಿದ್ದಾರೆ. ವೃದ್ಧೆಯ ಮುಂದೆ ಶಾಂತವಾಗಿದ್ದ ಶ್ರೀಯಾನ್ಶಿ ಸ್ವಭಾವ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ವೃದ್ಧೆ ಪರ ಮಾತನಾಡಿದ್ದಾರೆ. ಆಕೆಯ ತಪ್ಪಿಲ್ಲ. ಅವರ ಪಾಲನೆ ಪೋಷಣೆ ಸಮಯದಲ್ಲಿ ಮಹಿಳೆ ಡ್ರೆಸ್ ಬಗ್ಗೆ ಆಲೋಚನೆ ಹಾಗೆಯೇ ಇತ್ತು ಎಂದಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿಯೇ ಕಾಮದ ಅಮಲಿನಲ್ಲಿ ತೇಲಾಡಿದ ಜೋಡಿ; ಬೆತ್ತಲಾದವರಿಗೆ ಬಿಗ್ ಶಾಕ್

ಬಟ್ಟೆ ಬಗ್ಗೆ ಸಾರ್ವಜನಿಕ ಕಮೆಂಟ್ ಇದೇ ಮೊದಲಲ್ಲ. ಅದ್ರಲ್ಲೂ ಮಹಿಳೆಯರು ಬಟ್ಟೆ, ನಗು, ವರ್ತನೆಗೆ ಸಂಬಂಧಿಸಿದಂತೆ ಅನೇಕ ಬಾರಿ ಟೀಕೆಗೆ ಗುರಿಯಾಗ್ತಿರುತ್ತಾರೆ. ಕೆಲ ದಿನಗಳ ಹಿಂದೆ ಇನ್ಪ್ಲುಯೆನ್ಸರ್ ಅಂಜಲಿ ವಿಡಿಯೋ ವೈರಲ್ ಆಗಿತ್ತು. ಅವರು ವಿಡಿಯೋ ಮಾಡ್ತಿದ್ದಾಗ ಅಲ್ಲಿಗೆ ಬಂದ ಮಹಿಳೆಯೊಬ್ಬರು, ಇಂಥ ಬಟ್ಟೆ ಧರಿಸಬೇಡಿ. ಇದು ಲಂಡನ್, ಅಮೆರಿಕಾ ಅಲ್ಲ. ಭಾರತದ ಮರ್ಯಾದೆ ಕಳೆಯಬೇಡಿ ಅಂತ ಸಲಹೆ ನೀಡಿದ್ದರು. ತಾವು ಇದನ್ನು ಹೇಳಲು ಕಾರಣ ಏನು ಎಂಬುದನ್ನು ಮಹಿಳೆ ವಿವರಿಸ್ತಾರೆ. ಸುತ್ತಮುತ್ತಲಿನ ಪ್ರದೇಶಗಳು ಯಾವಾಗಲೂ ಸುರಕ್ಷಿತವಾಗಿಲ್ಲ, ಜನರು ಮಹಿಳೆಯರನ್ನು ಅನುಚಿತವಾಗಿ ನೋಡಬಹುದು, ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹರು ಎಂದಿದ್ದರು.



Source link

Leave a Reply

Your email address will not be published. Required fields are marked *