Headlines

Lavanya Tripathi: ತಮಿಳು ನಿರ್ದೇಶಕನಿಂದ ಕಿರುಕುಳ; ಸಿನಿಮಾ ಬಿಟ್ಟಿದ್ದಕ್ಕೆ ಕೇಸ್ ಹಾಕಿದ್ರು ಎಂದ ಮೆಗಾ ಸೊಸೆ!

Lavanya Tripathi: ತಮಿಳು ನಿರ್ದೇಶಕನಿಂದ ಕಿರುಕುಳ; ಸಿನಿಮಾ ಬಿಟ್ಟಿದ್ದಕ್ಕೆ ಕೇಸ್ ಹಾಕಿದ್ರು ಎಂದ ಮೆಗಾ ಸೊಸೆ!

Lavanya Tripathi: ತಮಿಳು ನಿರ್ದೇಶಕನಿಂದ ಕಿರುಕುಳ; ಸಿನಿಮಾ ಬಿಟ್ಟಿದ್ದಕ್ಕೆ ಕೇಸ್ ಹಾಕಿದ್ರು ಎಂದ ಮೆಗಾ ಸೊಸೆ!

ತಮಿಳು ಸಿನಿಮಾವೊಂದರ ಶೂಟಿಂಗ್ ವೇಳೆ ನಿರ್ದೇಶಕ ಕೆಟ್ಟದಾಗಿ ನಡೆದುಕೊಂಡಿದ್ದರಿಂದ ತಾನು ಆ ಚಿತ್ರದಿಂದ ಹೊರಬಂದೆ. ಇದಕ್ಕಾಗಿ ನನ್ನ ಮೇಲೆ ಕೇಸ್ ಹಾಕಲಾಯ್ತು ಎಂದು ನಟಿ ಲಾವಣ್ಯ ತ್ರಿಪಾಠಿ ಬಹಿರಂಗಪಡಿಸಿದ್ದಾರೆ.

ನಟಿ ಲಾವಣ್ಯ ತ್ರಿಪಾಠಿ ಅವರು ತಮಗಾದ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಒಬ್ಬ ತಮಿಳು ಸಿನಿಮಾ ನಿರ್ದೇಶಕ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡ. ಇದರಿಂದ ಬೇಸತ್ತು ಆ ಸಿನಿಮಾದಿಂದ ಹೊರಬಂದೆ. ಆದರೆ, ಚಿತ್ರತಂಡ ನನ್ನ ವಿರುದ್ಧವೇ ಕೇಸ್ ದಾಖಲಿಸಿತು ಎಂದು ಲಾವಣ್ಯ ಹೇಳಿದ್ದಾರೆ.

ಅಷ್ಟೇ ಅಲ್ಲ, ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಈ ಒತ್ತಡದಿಂದಾಗಿ ಒಂದು ದಿನ ಪೂರ್ತಿ ಮನೆಯಲ್ಲಿ ಕೂತು ಅತ್ತಿದ್ದೆ ಎಂದೂ ಲಾವಣ್ಯ ನೋವು ತೋಡಿಕೊಂಡಿದ್ದಾರೆ. "ನನಗೆ ಸಿನಿಮಾ ಹಿನ್ನೆಲೆ ಇಲ್ಲ. ಒಬ್ಬಂಟಿ ಮಹಿಳೆಯಾಗಿ ಇಂಡಸ್ಟ್ರಿಯಲ್ಲಿ ಇದ್ದಾಗ ಸಹಾಯಕ್ಕೆ ಯಾರೂ ಇರಲ್ಲ.

ನಾನು ಒಂದು ತಮಿಳು ಸಿನಿಮಾ ಮಾಡಬೇಕಿತ್ತು. ಆ ನಿರ್ದೇಶಕನ ವರ್ತನೆ ಸರಿ ಇರಲಿಲ್ಲ. ನನಗೆ ತುಂಬಾ ಮುಜುಗರವಾಯ್ತು. ಅದಕ್ಕೆ ನಾನು ಆ ಸಿನಿಮಾ ‘ನೋ’ ಅಂದೆ. ಆಮೇಲೆ ಅವರು ನನ್ನ ಮೇಲೆ ಕೇಸ್ ಹಾಕಿದ್ರು. ಪತ್ರಿಕೆಗಳಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಬರೆಸಿದರು. ಈ ವಿಷಯವನ್ನು ನಾನು ಮೊದಲ ಬಾರಿಗೆ ಹೇಳುತ್ತಿದ್ದೇನೆ," ಎಂದು ಲಾವಣ್ಯ ವಿವರಿಸಿದ್ದಾರೆ.

"ಆಗ ನಾನು ಈ ಬಗ್ಗೆ ಯಾರ ಹತ್ತಿರವೂ ಹೇಳಿಕೊಳ್ಳಲಿಲ್ಲ, ಸಹಾಯವನ್ನೂ ಕೇಳಲಿಲ್ಲ. ಆದರೆ ಆ ಒತ್ತಡಕ್ಕೆ ಒಂದು ದಿನ ಮನೆಗೆ ಬಂದು ತುಂಬಾ ಅತ್ತೆ. ಸಾಮಾನ್ಯವಾಗಿ ನಾನು ಅಳುವವಳಲ್ಲ. ತುಂಬಾ ಅತ್ತ ಮೇಲೆ ಎದ್ದು ಒಂದು ಚಹಾ ಮಾಡಿಕೊಂಡೆ. ಅಳುವುದು ಒಳ್ಳೆಯದೇ, ಅದರಲ್ಲಿ ತಪ್ಪೇನಿಲ್ಲ.

ಆದರೆ ನನಗೆ ಇಂತಹ ಅನುಭವಗಳು ಆಗಿವೆ. ಕೆಲವೊಮ್ಮೆ ಇವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅವರ ಜೊತೆ ಕೆಲಸ ಮಾಡಲು ಕಷ್ಟವಾದ ಕಾರಣಕ್ಕೆ ನಾನು ‘ನೋ’ ಎಂದು ಹೇಳಿದ್ದು ಅಷ್ಟೇ. ಆದರೂ ಅವರು ನನಗೆ ತೊಂದರೆ ಕೊಡುವುದನ್ನು ಮುಂದುವರಿಸಿದರು," ಎಂದು ಲಾವಣ್ಯ ಮಾತು ಮುಗಿಸಿದರು.

Source link

Leave a Reply

Your email address will not be published. Required fields are marked *