
ಕಾರವಾರ, (ಮಾರ್ಚ್ 16): ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ ಬಾದಲ್ಲಿ ನಡೆದಿದೆ. ಕಸ್ತೂರ ಬಾ ನಗರದ ಬಾಲೆ ಭುವಿ(2) ಬಡಕುಳಿದ ಮಗು. ಆಟವಾಡುತ್ತ ಭುವಿ ಏಕಾಏಕಿ ನಾಪತ್ತೆಯಾಗಿದ್ದ. ಇದರಿಂದ ಆತಂಕಗೊಂಡು ಮನೆ ಹುಡುಕಿದರೂ ಇಲ್ಲ. ಕೊನೆಗೆ ಮನೆಯ ಮುಂದಿನ ಬಾವಿಯಲ್ಲಿ ನೋಡಿದಾಗ ಮಗು ಅಳುವ ಶಬ್ದ ಕೇಳಿದೆ. ಕೂಡಲೇ ಬಿಟ್ಟು ಬ್ಯಾಟರಿ ನೋಡಿದಾಗ ಮಗು ಬಾವಿಯೊಳಗೆ ಪೈಪ್ಗೆ ಸಿಲುಕಿರುವುದು ಕಂಡುಬಂದಿದ್ದು, ತಕ್ಷಣವೇ ಪಯ್ಯ ಚವಟಿ ಎಂಬ ವ್ಯಕ್ತಿ ಬಾವಿಗೆ ಇಳಿದು ಮಗುವನ್ನ ಹೊರತೆಗೆಯಲು ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.