Bhagyalakshmi Making Video: ಸೀರೆಯುಟ್ಟು ಭಾಗ್ಯ ಫೈಟಿಂಗ್‌- ಮುಟ್ತಿದ್ದಂತೆಯೇ ಉರುಳಿ ಉರುಳಿ ಬಿದ್ದ ರೌಡಿಗಳು

Bhagyalakshmi Making Video: ಸೀರೆಯುಟ್ಟು ಭಾಗ್ಯ ಫೈಟಿಂಗ್‌- ಮುಟ್ತಿದ್ದಂತೆಯೇ ಉರುಳಿ ಉರುಳಿ ಬಿದ್ದ ರೌಡಿಗಳು

Bhagyalakshmi Making Video: ಸೀರೆಯುಟ್ಟು ಭಾಗ್ಯ ಫೈಟಿಂಗ್‌- ಮುಟ್ತಿದ್ದಂತೆಯೇ ಉರುಳಿ ಉರುಳಿ ಬಿದ್ದ ರೌಡಿಗಳು
ಶ್ರೇಷ್ಠಾಳ ಕುತಂತ್ರದಿಂದ ಅಪಹರಣಕ್ಕೊಳಗಾದ ಭಾಗ್ಯ, ಸೀರೆಯುಟ್ಟೇ ರೌಡಿಗಳನ್ನು ಸದೆಬಡಿದು ತನ್ನ ಕರಾಟೆ ಪರಾಕ್ರಮವನ್ನು ಪ್ರದರ್ಶಿಸಿದ್ದಾಳೆ. ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕವಾದ ಈ ಫೈಟಿಂಗ್ ದೃಶ್ಯದ ಶೂಟಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಭಾಗ್ಯ ಮತ್ತು ಆದಿಯನ್ನು ಶ್ರೇಷ್ಠಾ ಕಿಡ್‌ನ್ಯಾಪ್‌ ಮಾಡಿಸಿದ್ದಳು. ಈ ಕಿಡ್‌ನ್ಯಾಪ್‌ ಮಾಡಿಸಿದ್ದು ತಾಂಡವ್‌ ಮೇಲೆ ತಂದಿದ್ದರೆ, ಅತ್ತ ತಾಂಡವ್‌ನನ್ನೂ ಕಿಡ್‌ನ್ಯಾಪ್‌ ಮಾಡಿಸಿ ಆದಿಯ ಮೇಲೆ ಗೂಬೆ ಕೂಡಿಸುವ ಪ್ರಯತ್ನ ಮಾಡಿದ್ದಳು ಶ್ರೇಷ್ಠಾ.

ಆದರೆ, ಭಾಗ್ಯಳನ್ನು ಕಿಡ್‌ನ್ಯಾಪ್‌ ಮಾಡಿ ಕೂಡಿ ಹಾಕಿದಾಗ, ಘಟಾನುಘಟಿ ರೌಡಿಗಳನ್ನು ಸೀರೆಯುಟ್ಟ ಭಾಗ್ಯ ಸದೆಬಡಿದಿದ್ದಾಳೆ.

ಭಾಗ್ಯ ಕರಾಟೆ ಯಾವಾಗ ಕಲಿತಳೋ ಗೊತ್ತಿಲ್ಲ. ಡ್ರೈವಿಂಗ್‌ ಕಲಿತದದ್ದು, ಅಕ್ಷರ ಕಲಿತು ಮಗಳ ಜೊತೆ ಎಸ್‌ಎಸ್‌ಎಲ್‌ಸಿ ಬರೆದದ್ದು, ಉತ್ತಮ ಶಿಕ್ಷಣ ಪಡೆದದ್ದು ಎಲ್ಲಾ ತೋರಿಸಲಾಗಿತ್ತು, ಆದರೆ ಅದರ ಜೊತೆ ಕರಾಟೆ ಕೂಡ ಕಲಿತಿದ್ದಾಳೆ ಎನ್ನುವುದನ್ನು ಈ ದೃಶ್ಯ ತೋರಿಸುತ್ತದೆ.

ಅದೇನೇ ಇದ್ದರೂ, ಎಷ್ಟೋ ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾಳೆ ಭಾಗ್ಯ. ಹೆಣ್ಣು ಮಕ್ಕಳು ಕರಾಟೆ ಕಲಿಯಬೇಕು ಎನ್ನುವುದನ್ನೂ ಈ ದೃಶ್ಯ ತೋರಿಸುತ್ತದೆ.

ಇದೀಗ ಶೂಟಿಂಗ್‌ ಸಮಯದಲ್ಲಿ ಭಾಗ್ಯ ಸೀರೆಯುಟ್ಟು ಘಟಾನುಘಟಿ ರೌಡಿಗಳನ್ನು ಉರುಳಿಸಿರುವ ವಿಡಿಯೋ ವೈರಲ್‌ ಆಗಿದೆ.

ಅಷ್ಟಕ್ಕೂ ಇದರಲ್ಲಿ, ಭಾಗ್ಯ ಯಾರನ್ನೂ ಮುಟ್ಟುವುದೇ ಇಲ್ಲ. ಡಿಶುಂ ಎಂದು ಹತ್ತಿರ ಬರುತ್ತಿದ್ದಂತೆಯೇ ರೌಡಿಗಳು ನೆಗೆದು ನೆಗೆದು ಬೀಳುತ್ತಿದ್ದಾರೆ. ಅಸಲಿಗೆ ಶೂಟಿಂಗ್‌ ಮಾಡುವುದು ಹೀಗೆಯೇ, ಆಮೇಲೆ ಅದನ್ನು ಎಡಿಟ್‌ ಮಾಡಿ ತಲೆಗೋ, ಇನ್ನೆಲ್ಲಿಗೋ ಹೊಡೆದ ಹಾಗೆ ತೋರಿಸಲಾಗುತ್ತದೆ. ಈ ವಿಡಿಯೋದಲ್ಲಿ ಅದನ್ನು ನೋಡಬಹುದಾಗಿದೆ.
View this post on Instagram
A post shared by Manu Breakouter (@manu_breakouter_official)

Source link

Leave a Reply

Your email address will not be published. Required fields are marked *