ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ


ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು 'ಬಾಸ್' ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ದರ್ಶನ್ (ದರ್ಶನ್) ಪರ ವಕೀಲರು ‘ಬಾಸ್’ ಸಿನಿಮಾಗೆ ಪ್ರಮಾಣಪತ್ರ ನೀಡಬಾರದು ಎಂದು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ‘ಬಾಸ್’ ಚಿತ್ರದ ನಟ ತನುಷ್ ಶಿವಣ್ಣ ಅವರು ಮಾತನಾಡಿದ್ದಾರೆ. ‘ಅವರು ಸಿನಿಮಾವನ್ನೇ ನೋಡಿಲ್ಲ. ಹಾಗಿದ್ದಮೇಲೆ ಅವರು ಹೇಗೆ ನೋಟಿಸ್ ಕಳಿಸುತ್ತಾರೆ? ನಾವು ಯಾವ ವಿಷಯದ ಮೇಲೆ ಸಿನಿಮಾ ಮಾಡಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಸೆನ್ಸಾರ್ ಮಂಡಳಿಗೆ ಜವಾಬ್ದಾರಿ ಇದೆ. ಅವರು ತಮ್ಮ ಕೆಲಸ ಮಾಡುತ್ತಾರೆ. ಇನ್ನೇನು ನಮ್ಮ ಸಿನಿಮಾಗೆ ಪ್ರಮಾಣಪತ್ರ ಸಿಗಬೇಕಿತ್ತು. ಆದರೆ ಈಗ ನೋಟಿಸ್ ಕಳಿಸುವುದರಿಂದ ನಮಗೆ ತುಂಬಾ ನಷ್ಟವಾಗಿದೆ. ರೇಣುಕಾಸ್ವಾಮಿ ಜೊತೆ ಕೆಲವು ವಿಷಯಗಳು ಮ್ಯಾಚ್ ಆಗಿರಬಹುದು. ಆದರೆ ಇದು ಅದೇ ಕಥೆ ಅಂತ ನಿರ್ಧಾರಕ್ಕೆ ಬರೋಕೆ ಆಗಲ್ಲ. ನಾವು ಆ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಕೂಡ ಆಗಲ್ಲ’ ಎಂದ ತನುಷ್ ಶಿವಣ್ಣ (ತನುಷ್ ಶಿವಣ್ಣ) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *