
<p>ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್, ಅದ್ಭುತ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಕೆಲ ಪ್ರಮುಖ ಕ್ರಿಕೆಟಿಗರು ವಿದಾಯಕ್ಕೆ ಸಜ್ಜಾಗಿದ್ದಾರಾ?</p><img><p>ಟೀಮ್ ಇಂಡಿಯಾಗೆ 2026ರ ಟಿ20 ವಿಶ್ವಕಪ್ ಗೆಲುವು ತುಂಬಾನೇ ವಿಶೇಷ. ಈ ಹಿಂದೆ ಗೆದ್ದ ಎರಡು ವಿಶ್ವಕಪ್‌ಗಳು ವಿದೇಶಿ ನೆಲದಲ್ಲಾಗಿದ್ದವು. ಆದರೆ ಈ ಬಾರಿ ತವರಿನಲ್ಲೇ, ಸ್ವಂತ ಪ್ರೇಕ್ಷಕರ ಮುಂದೆ ಟ್ರೋಫಿ ಗೆದ್ದು ದಾಖಲೆ ಬರೆದಿದೆ . ಈ ಗೆಲುವು ಆಟಗಾರರಿಗೆ ಮಾತ್ರವಲ್ಲ, ಅಭಿಮಾನಿಗಳಿಗೂ ಸ್ಪೆಷಲ್. ಆದರೆ, ಇದೇ ವಿಶ್ವಕಪ್ ಕೆಲವು ಹಿರಿಯ ಆಟಗಾರರ ಕೆರಿಯರ್‌ಗೆ ಬಹುತೇಕ ಫುಲ್‌ಸ್ಟಾಪ್ ಇಟ್ಟಿದೆ. ಯುವ ಆಟಗಾರರ ಸ್ಪರ್ಧೆ ಎದುರಿಸಲಾಗದೆ ಕೆಲವರು ನಿವೃತ್ತಿಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ವಿಶ್ವಕಪ್ ಎಫೆಕ್ಟ್‌ನಿಂದ ನಿವೃತ್ತಿ ಪಡೆಯಬಹುದಾದ ಆಟಗಾರರು ಯಾರು ಅಂತ ನೋಡೋಣ.</p><img>ಇತ್ತೀಚೆಗೆ ಮೊಹಮ್ಮದ್ ಶಮಿ ನಿವೃತ್ತಿ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಈ ಟಿ20 ವಿಶ್ವಕಪ್ ನಂತರ ಈ ಚರ್ಚೆ ಮತ್ತಷ್ಟು ಜೋರಾಗಿದೆ. ಗಂಭೀರ ಗಾಯಗಳು, ಫಾರ್ಮ್ ಕೊರತೆಯಿಂದ ಅವರು ಕಷ್ಟಪಡುತ್ತಿದ್ದಾರೆ. ವೈಯಕ್ತಿಕ ಸಮಸ್ಯೆಗಳೂ ಅವರನ್ನು ಕಾಡುತ್ತಿವೆ. 2025ರ ಚಾಂಪಿಯನ್ಸ್ ಟ್ರೋಫಿ ನಂತರ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಇನ್ನು ಮುಂದೆ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. 2026ರ ವಿಶ್ವಕಪ್ ಗೆಲುವಿನಿಂದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಯುವ ತಂಡದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೀಗಾಗಿ, 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್, ಕೊಹ್ಲಿಯಂತಹ ಕೆಲವರನ್ನು ಬಿಟ್ಟು ಉಳಿದಂತೆ ಯುವಕರಿಗೇ ಮಣೆ ಹಾಕುವ ಯೋಚನೆಯಲ್ಲಿದೆ. ಹಾಗಾಗಿ, ಶಮಿ ತಂಡಕ್ಕೆ ಮರಳುವುದು ಕಷ್ಟ. ಇದೇ ಕಾರಣಕ್ಕೆ ಅವರು ಗೌರವಯುತವಾಗಿ ನಿವೃತ್ತಿ ಘೋಷಿಸಬಹುದು ಎನ್ನಲಾಗುತ್ತಿದೆ.<img>ಟೀಮ್ ಇಂಡಿಯಾದ ಹಿರಿಯ ಬೌಲರ್ ಇಶಾಂತ್ ಶರ್ಮಾ ಅವರ ಅಂತರರಾಷ್ಟ್ರೀಯ ಕೆರಿಯರ್‌ಗೂ ಈ ಟಿ20 ವಿಶ್ವಕಪ್ ಫುಲ್‌ಸ್ಟಾಪ್ ಇಟ್ಟಿದೆ ಎನ್ನಬಹುದು. ಈ ವೇಗದ ಬೌಲರ್ ಹಿಂದೆ ಭಾರತ ತಂಡಕ್ಕೆ ಅನೇಕ ಗೆಲುವುಗಳನ್ನು ತಂದುಕೊಟ್ಟಿದ್ದರು. ಆದರೆ ಸದ್ಯ ಗಾಯಗಳು ಮತ್ತು ಫಾರ್ಮ್ ಕೊರತೆಯಿಂದ ತಂಡದಿಂದ ದೂರ ಉಳಿದಿದ್ದಾರೆ. 2021ರಿಂದ, ಅಂದರೆ ಸುಮಾರು ಐದು ವರ್ಷಗಳಿಂದ ಅವರು ತಂಡದಿಂದ ಹೊರಗಿದ್ದಾರೆ. ಕೇವಲ ಐಪಿಎಲ್ ಮಾತ್ರ ಆಡುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ವರೆಗೆ ಆಡಿ, ನಂತರ ನಿವೃತ್ತಿ ಘೋಷಿಸುವ ಯೋಚನೆಯಲ್ಲಿದ್ದರು ಎನ್ನಲಾಗಿದೆ. ಆದರೆ ಯುವ ತಂಡದ ಅದ್ಭುತ ಪ್ರದರ್ಶನದಿಂದಾಗಿ, ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವ ಅವರ ಆಸೆ ಕಮರಿದೆ. ಹೀಗಾಗಿ ಇಶಾಂತ್ ಶರ್ಮಾ ಶೀಘ್ರದಲ್ಲೇ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.<img>ಟೀಮ್ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಕೂಡ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಹಲವು ಯುವ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಟಿ20 ವಿಶ್ವಕಪ್ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಆಯ್ಕೆಗಾರರು ಕೂಡ ತಂಡದ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರ ಕಡೆಗೇ ಒಲವು ತೋರುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಹಾನೆಗೆ ಮತ್ತೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ. ಹಾಗಾಗಿ, ಅವರೇ ಗೌರವಯುತವಾಗಿ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ. ಅಜಿಂಕ್ಯ ರಹಾನೆ ಭಾರತ ತಂಡದ ಪರ ಮೂರೂ ಮಾದರಿಗಳಲ್ಲಿ ಒಟ್ಟು 8,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 85 ಪಂದ್ಯಗಳಿಂದ 12 ಶತಕಗಳೊಂದಿಗೆ 5,077 ರನ್, ಏಕದಿನದಲ್ಲಿ 90 ಪಂದ್ಯಗಳಿಂದ 3 ಶತಕಗಳೊಂದಿಗೆ 2,962 ರನ್ ಗಳಿಸಿದ್ದಾರೆ. 20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 375 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ರಹಾನೆ 198 ಪಂದ್ಯಗಳನ್ನು ಆಡಿ 2 ಶತಕ ಮತ್ತು 33 ಅರ್ಧಶತಕಗಳೊಂದಿಗೆ 5,032 ರನ್ ಕಲೆಹಾಕಿದ್ದಾರೆ.<img>ಟೀಮ್ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ 2022ರಿಂದ ತಂಡದಿಂದ ಹೊರಗಿದ್ದಾರೆ. ಆದರೆ 2027ರ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ, 2026ರ ಟಿ20 ವಿಶ್ವಕಪ್‌ನಲ್ಲಿ ಯುವ ಭಾರತ ತಂಡದ ಗೆಲುವು ಅವರ ಆಸೆಗೆ ತಣ್ಣೀರೆರಚಿದೆ. ಹೀಗಾಗಿ, ಅವರು ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಐಪಿಎಲ್‌ನಲ್ಲಿ ಭುವನೇಶ್ವರ್ ಆಟ ಮುಂದುವರಿಸಲಿದ್ದಾರೆ.<img>ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ನಂತರ ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ತಂದುಕೊಟ್ಟ ಕೀರ್ತಿ ಸೂರ್ಯಕುಮಾರ್ ಯಾದವ್ ಅವರದ್ದು. ಆದರೆ, ಇದೇ ಅವರ ಕೊನೆಯ ವಿಶ್ವಕಪ್ ಆಗಿರಬಹುದು ಮತ್ತು ಅವರು ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಸೂರ್ಯ ಈ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಆದರೂ, ಭವಿಷ್ಯದ ದೃಷ್ಟಿಯಿಂದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಸೂರ್ಯಕುಮಾರ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರು ಆಡಲು ಬಯಸಿದರೂ, ಆಡಿಸದೇ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ಒತ್ತಡ ಹೇರಿ ನಿವೃತ್ತಿ ಘೋಷಿಸುವಂತೆ ಮಾಡಲಾಗಿತ್ತು. ಅದೇ ಪರಿಸ್ಥಿತಿ ಸೂರ್ಯಕುಮಾರ್ ಯಾದವ್‌ಗೂ ಬರಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Source link
ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ್ರಾ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್?