Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ


ಸಂಖ್ಯಾಶಾಸ್ತ್ರದ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3 ರ ಮಾರ್ಚ್ 17 ರ ದಿನಭವಿಷ್ಯ

ಸುಬ್ರಹ್ಮಣ್ಯ ಸ್ವಾಮಿಯ ಪೂಜೆ, ಆರಾಧನೆ ಮಾಡಿಕೊಳ್ಳಿ. ಇದನ್ನು ಮಾಡುವುದರಿಂದ ಚರ್ಮ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ, ಸಾಲ ಬಾಧೆ ಇರುವವರಿಗೆ ಸಮಸ್ಯೆಯಿಂದ ಹೊರಬರುವಂಥ ಮಾರ್ಗ ಗೋಚರವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಂಭ್ರಮದ ಮಧ್ಯೆ ಯಾವುದೋ ಕೆಲಸ ಬಂತು ಅಥವಾ ಕರೆ ಬಂತು ಎಂಬ ಕಾರಣಕ್ಕೆ ಹೊರಡುವಂತೆ ಆಗಲಿದೆ. ಮನಸ್ಸಿಲ್ಲದ ಮನಸ್ಸಿನಿಂದ ತೆರಳಬೇಕಾದ ಸನ್ನಿವೇಶ ಎದುರಾಗಲಿದೆ. ಈ ದಿನ ಖರ್ಚು ಹೆಚ್ಚಿಗೆ ಆದ ನಂತರವೂ ಒಂದು ಬಗೆಯ ಸಮಾಧಾನ- ತೃಪ್ತಿ ನಿಮಗೆ ಇರಲಿದೆ. ಇಲ್ಲದ್ದು ಇದ್ದದ್ದು ಸೇರಿಸಿ, ಮಾತನಾಡುವಂಥ ವ್ಯಕ್ತಿಗೆ ನೇರ ಎಚ್ಚರಿಕೆ ನೀಡಿದ್ದೇನೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮಲ್ಲಿ ಯಾರು ಔಷಧ- ಪಥ್ಯದಲ್ಲಿ ಇದ್ದೀರಿ ಅಂಥವರು ಯಾವುದೇ ಬದಲಾವಣೆ ಮಾಡಿಕೊಳ್ಳದಿರುವುದು ಕ್ಷೇಮ. ಇದನ್ನು ಮೀರಿ ಏನಾದರೂ ಬದಲಾದಾಗ ಕಾಡಬಹುದು. ನಿಮಗೆ ತುಂಬಾ ಪರಿಚಿತರು, ಆಪ್ತರೇ ಆದರೂ ಅವರೆದುರು ಕೆಲವು ರಹಸ್ಯ ವಿಚಾರಗಳನ್ನು ಚರ್ಚೆ ಮಾಡಲು ಹೋಗಬೇಡಿ. ಇದರಿಂದ ಸಮಸ್ಯೆ ಆದೀತು.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಜತೆ ಇದ್ದು, ಕೆಲಸ ಮಾಡಿದಂಥವರು, ನೆರೆ ಮನೆಯಲ್ಲಿ ಇದ್ದವರು ಅಥವಾ ಸ್ನೇಹಿತರೇ ಇರಬಹುದು, ಭೇಟಿ ಆಗಲಿದ್ದಾರೆ. ನಿಮಗೆ ಕೆಲವು ಹೊಸ ಸಂಗತಿಗಳು, ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಇನ್ನು ಸಾಕು, ನಿಲ್ಲಿಸೋಣ ಎಂದುಕೊಂಡಿದ್ದ ಕೆಲವು ಸೇವೆ ಅಥವಾ ಕೆಲಸಗಳನ್ನು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಯೋಗವಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *