
ಪಾರ್ವತಿ ದೇವಿಗೆ ಕ್ಷೀರಾಭಿಷೇಕ ಮಾಡುವುದರಿಂದ ಯಾವುದೇ ಕೆಲಸದಲ್ಲಿ ಇರುವಂತಹ ಗೊಂದಲ ದೂರವಾಗಿದೆ. ಇನ್ನು ನಿರಾಸಕ್ತಿ ಕಾಡುತ್ತಾ ಇದ್ದಲ್ಲಿ ಆ ಸಮಸ್ಯೆ ಕೂಡ ಬಗೆಹರಿಯಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಹಣದ ಅಗತ್ಯ ಬಂದು, ಅದಕ್ಕಾಗಿ ಉಳಿತಾಯ ಅಥವಾ ಹೂಡಿಕೆ ಹಣ ಹಿಂದೆ ತೆಗೆಯುವ ಬಗ್ಗೆ ನಿರ್ಧಾರ ಮಾಡುತ್ತೀರಿ. ಬ್ಯೂಟಿ ಪಾರ್ಲರ್ ನಡೆಸುತ್ತಾ ಇರುವವರಿಗೆ ಈಗಿರುವ ಸ್ಥಳದಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂಬ ಆಲೋಚನೆ ಮೂಡಲಿದೆ. ಒಬ್ಬ ವ್ಯಕ್ತಿಯನ್ನು ಭೇಟಿಯಾಗುವುದಕ್ಕೆ ಹಲವು ಸಲ ಪ್ರಯತ್ನ ಮಾಡಬೇಕಾಗಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ತೀರ್ಥ ಕ್ಷೇತ್ರ, ದೇವಸ್ಥಾನ ಅಥವಾ ಯಾವುದಾದರೂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಚಿಕ್ಕ ವಯಸ್ಸಿಂದ ಪರಿಚಯ ಇರುವ ವ್ಯಕ್ತಿ ತುಂಬ ಅನುಕೂಲ ಆಗುವ ಕೆಲ ಮಾಹಿತಿ ನೀಡಲಿದ್ದಾರೆ. ಕೃಷಿ ಹಾಗೂ ಕೃಷಿ ಸಂಬಂಧಿತ ವೃತ್ತಿ ಮಾಡುತ್ತಾ ಇರುವವರಿಗೆ ಆದಾಯ ಹೆಚ್ಚು ಮಾಡಿಕೊಳ್ಳಲು ಅವಕಾಶ ತೆರೆದುಕೊಳ್ಳಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸಣ್ಣ ಸಣ್ಣ ಒಡವೆಗಳನ್ನು ಜೋಪಾನವಾಗಿ ಇರಿಸಿಕೊಳ್ಳುವ ಕಡೆಗೆ ಲಕ್ಷ್ಯ ನೀಡಿ. ಒಂದು ವೇಳೆ ಮುಖ್ಯ ಈ ರೀತಿಯ ಜವಾಬ್ದಾರಿಯನ್ನು ನಿಮಗೆ ವಹಿಸಿದರೆ ಸಾಮಾನ್ಯ ದಿನದಿಂದ ಹೆಚ್ಚು ಎಚ್ಚರಿಕೆ ವಹಿಸುವುದು. ಮನೆ ಕಾರ್ಯಕ್ರಮಗಳು ಅಥವಾ ಬೇರೆ ಯಾವುದಾದರೂ ಕಾರ್ಯಕ್ರಮಕ್ಕಾಗಿ ಹೊಸ ಬಟ್ಟೆಗಳನ್ನು ಖರೀದಿಸಬೇಕು ಎಂದು ಹಣ ಖರ್ಚು ಮಾಡಿದ್ದಾರೆ.
ಲೇಖನ- ಸ್ವಾತಿ ಎನ್.ಕೆ.