Headlines

ಬಿಜೆಪಿ ಅಧ್ಯಕ್ಷ ನಿತಿನ್‌, ಜೆಡಿಯು ಅಧ್ಯಕ್ಷ ನಿತೀಶ್‌ಗೆ ಹೊಸ ಹುದ್ದೆ- 26 ಜನ ಅವಿರೋಧ ಆಯ್ಕೆ | Nitin Gadkari And Nitish Kumar To Enter Rajya Sabha

ಬಿಜೆಪಿ ಅಧ್ಯಕ್ಷ ನಿತಿನ್‌, ಜೆಡಿಯು ಅಧ್ಯಕ್ಷ ನಿತೀಶ್‌ಗೆ ಹೊಸ ಹುದ್ದೆ- 26 ಜನ ಅವಿರೋಧ ಆಯ್ಕೆ | Nitin Gadkari And Nitish Kumar To Enter Rajya Sabha



ಬಿಜೆಪಿ ಅಧ್ಯಕ್ಷ ನಿತಿನ್‌, ಜೆಡಿಯು ಅಧ್ಯಕ್ಷ ನಿತೀಶ್‌ಗೆ ಹೊಸ ಹುದ್ದೆ- 26 ಜನ ಅವಿರೋಧ ಆಯ್ಕೆ | Nitin Gadkari And Nitish Kumar To Enter Rajya Sabha

ಒಡಿಶಾ, ಬಿಹಾರ, ಹರ್ಯಾಣದ 11 ರಾಜ್ಯಸಭಾ ಸ್ಥಾನಗಳಿಗಾಗಿ ಸೋಮವಾರ ನಡೆದಿದ್ದು, ಬಿಹಾರದಲ್ಲಿ ಎಲ್ಲಾ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. 10 ರಾಜ್ಯಗಳ 37 ಸ್ಥಾನಗಳಗಾಗಿ ಚುನಾವಣೆ ನಡೆದಿದ್ದು, ಈ ಪೈಕಿ ಈಗಾಗಲೇ 26 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಡೆದಿತ್ತು.

ನವದೆಹಲಿ: ಒಡಿಶಾ, ಬಿಹಾರ, ಹರ್ಯಾಣದ 11 ರಾಜ್ಯಸಭಾ ಸ್ಥಾನಗಳಿಗಾಗಿ ಸೋಮವಾರ ನಡೆದಿದ್ದು, ಬಿಹಾರದಲ್ಲಿ ಎಲ್ಲಾ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. 10 ರಾಜ್ಯಗಳ 37 ಸ್ಥಾನಗಳಗಾಗಿ ಚುನಾವಣೆ ನಡೆದಿದ್ದು, ಈ ಪೈಕಿ ಈಗಾಗಲೇ 26 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಡೆದಿತ್ತು.

ಬಿಹಾರದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ಜೆಡಿಯು ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಕೇಂದ್ರ ಸಚಿವ ಜೆಡಿಯುನ ರಾಮ್‌ನಾಥ್ ಠಾಕೂರ್‌, ಬಿಜೆಪಿಯ ಶಿವೇಶ್‌ ಕುಮಾರ್‌, ಆರ್‌ಎಲ್‌ಎಂ ಅಧ್ಯಕ್ಷ ಉಪೇಂದ್ರ ಕುಶ್ವಾಹ ವಿಜೇತರಾಗಿದ್ದಾರೆ. ಬಿಜೆಪಿ- ಜೆಡಿಯುಗೆ 4 ಸ್ಥಾನ ಗೆಲ್ಲುವ ಅವಕಾಶ ಇತ್ತು, ಆದರೆ ವಿಪಕ್ಷ ಇಂಡಿಯಾ ಕೂಟದ 3 ಸದಸ್ಯರು ಮತದಾನಕ್ಕೆ ಗೈರಾದ ಕಾರಣ ಎನ್‌ಡಿಎ ಕೂಟ ತನ್ನ 5ನೇ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಂಡಿದೆ.

ಒಡಿಶಾ:

ಇನ್ನು ಒಡಿಶಾದ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್‌ ಸಮಲ್‌, ಹಾಲಿ ರಾಜ್ಯಸಭಾ ಸದಸ್ಯ ಸುಜೀತ್‌ ಕುಮಾರ್‌ ಕಣಕ್ಕೆ ಇಳಿದಿದ್ದಾರೆ. ಇನ್ನು ಬಿಜೆಪಿ ಬೆಂಬಲದಿಂದ ಕಣಕ್ಕೆ ಇಳಿದಿದ್ದ ಮಾಜಿ ಕೇಂದ್ರ ಸಚಿವ, ಪಕ್ಷೇತರ ಅಭ್ಯರ್ಥಿ ದಿಲೀಪ್‌ ರೇ ಕೂಡಾ ಗೆಲುವು ಸಾಧಿಸಿದ್ದಾರೆ. ಬಿಜೆಡಿಯ ಸಂತೃಪ್ತ್‌ ಮಿಶ್ರಾ ಗೆಲುವು ಸಾಧಿಸಿದ್ದಾರೆ.

ಹರ್ಯಾಣ:

ರಾಜ್ಯದ 2 ಸ್ಥಾನಗಳಿಗೆ ಬಿಜೆಪಿಯಿಂದ ಸಂಜಯ್ ಭಾಟಿಯಾ, ಕಾಂಗ್ರೆಸ್‌ನ ಕರ್ಮವೀರ್‌ ಸಿಂಗ್‌, ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ಸತೀಶ್‌ ನಂದಾಲ್‌ ಕಣಕ್ಕೆ ಇಳಿದಿದ್ದಾರೆ. ಆದರೆ ಕಾಂಗ್ರೆಸ್‌ ಶಾಸಕರು ಗೌಪ್ಯತೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಕಾರಣ ಮತ ಎಣಿಕೆ ವಿಳಂಬವಾಗಿದೆ.



Source link

Leave a Reply

Your email address will not be published. Required fields are marked *