Breaking News: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಪಡೆಯಿಂದ ಭೀಕರ ವೈಮಾನಿಕ ದಾಳಿ; 400 ಮಂದಿ ಸಾವು! | Afghanistan Accuses Pakistan Of Killing 400 In Massive Airstrike On Kabul Hospital Rav

Breaking News: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಪಡೆಯಿಂದ ಭೀಕರ ವೈಮಾನಿಕ ದಾಳಿ; 400 ಮಂದಿ ಸಾವು! | Afghanistan Accuses Pakistan Of Killing 400 In Massive Airstrike On Kabul Hospital Rav



Breaking News: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಪಡೆಯಿಂದ ಭೀಕರ ವೈಮಾನಿಕ ದಾಳಿ; 400 ಮಂದಿ ಸಾವು! | Afghanistan Accuses Pakistan Of Killing 400 In Massive Airstrike On Kabul Hospital Rav

ಪಾಕಿಸ್ತಾನದ ವಾಯುಪಡೆಯು ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಆಸ್ಪತ್ರೆಯೊಂದು ಗುರಿಯಾಗಿದ್ದು, 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರ ಆರೋಪಿಸಿದೆ. ಆದರೆ, ಪಾಕಿಸ್ತಾನವು ಈ ಆರೋಪವನ್ನು ತಳ್ಳಿಹಾಕಿದೆ.

ಕಾಬೂಲ್ (ಮಾ.17): ಮಧ್ಯಪ್ರಾಚ್ಯ ಸಂಘರ್ಷ ನಡುವೆಯೇ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಸೋಮವಾರ ತಡರಾತ್ರಿ ಪಾಕಿಸ್ತಾನದ ವಾಯುಪಡೆ ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ಬೃಹತ್ ವೈಮಾನಿಕ ದಾಳಿ ನಡೆಸಿದ್ದು, ಈ ಭೀಕರ ಕೃತ್ಯದಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರ ತಿಳಿಸಿದೆ.

ಆಸ್ಪತ್ರೆ, ವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ

ಅಫ್ಘಾನಿಸ್ತಾನದ ಸರ್ಕಾರದ ವಕ್ತಾರ ಹಮ್ದುಲ್ಲಾ ಫಿತ್ರಾತ್ ನೀಡಿರುವ ಮಾಹಿತಿಯ ಪ್ರಕಾರ, ಪಾಕಿಸ್ತಾನದ ಯುದ್ಧ ವಿಮಾನಗಳು ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಸುಮಾರು 2,000 ಹಾಸಿಗೆಗಳ ಸಾಮರ್ಥ್ಯದ ಈ ಬೃಹತ್ ಆಸ್ಪತ್ರೆಯ ಮೇಲೆ ರಾತ್ರಿ 9 ಗಂಟೆಗೆ ಬಾಂಬ್ ದಾಳಿ ನಡೆದಿದ್ದು, ಆಸ್ಪತ್ರೆಯ ಬಹುಭಾಗ ಧ್ವಂಸಗೊಂಡಿದೆ. ಮೃತಪಟ್ಟ 400 ಜನರಲ್ಲಿ ಹೆಚ್ಚಿನವರು ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. 250ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಚ್ಚಿಬಿಳಿಸುತ್ತೆ ದುರಂತದ ಭೀಕರತೆ

ದಾಳಿಯ ಬೆನ್ನಲ್ಲೇ ಆಸ್ಪತ್ರೆಯ ಆವರಣದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯ ದೂರದರ್ಶನ ವಾಹಿನಿಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ, ಭದ್ರತಾ ಪಡೆಗಳು ಬ್ಯಾಟರಿ ಬೆಳಕಿನಲ್ಲಿ ಅವಶೇಷಗಳ ಅಡಿಯಿಂದ ಶವಗಳನ್ನು ಮತ್ತು ಗಾಯಾಳುಗಳನ್ನು ಹೊರತೆಗೆಯುತ್ತಿರುವುದು ಕಂಡುಬಂದಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಾನವೀಯತೆಯ ವಿರುದ್ಧದ ಅಪರಾಧ: ಅಫ್ಘಾನ್ ಆಕ್ರೋಶ

ಅಫ್ಘಾನ್ ಸರ್ಕಾರದ ಮುಖ್ಯ ವಕ್ತಾರ ಜಬೀಹುಲ್ಲಾ ಮುಜಾಹಿದ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಪಾಕಿಸ್ತಾನವು ನಾಗರಿಕ ಪ್ರದೇಶಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ಭಯಾನಕ ಕೃತ್ಯ ಎಸಗುತ್ತಿದೆ. ಇದು ಅಂತರಾಷ್ಟ್ರೀಯ ತತ್ವಗಳ ಉಲ್ಲಂಘನೆ ಮಾತ್ರವಲ್ಲದೆ, ಮಾನವೀಯತೆಯ ವಿರುದ್ಧದ ಗಂಭೀರ ಅಪರಾಧವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ. ಗಡಿ ಭಾಗದಲ್ಲಿ ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಸಂಘರ್ಷ ಈಗ ಪೂರ್ಣ ಪ್ರಮಾಣದ ಯುದ್ಧದ ರೂಪ ಪಡೆದುಕೊಂಡಿದೆ.

ಆರೋಪ ತಳ್ಳಿಹಾಕಿದ ಪಾಕಿಸ್ತಾನ

ಇನ್ನೊಂದೆಡೆ, ಈ ಗಂಭೀರ ಆರೋಪಗಳನ್ನು ಪಾಕಿಸ್ತಾನ ಸರ್ಕಾರವು ಸಂಪೂರ್ಣವಾಗಿ ತಳ್ಳಿಹಾಕಿದೆ. ನಾವು ಯಾವುದೇ ಆಸ್ಪತ್ರೆ ಅಥವಾ ನಾಗರಿಕ ಕೇಂದ್ರಗಳ ಮೇಲೆ ದಾಳಿ ಮಾಡಿಲ್ಲ ಎಂದು ಪಾಕಿಸ್ತಾನದ ಮಾಹಿತಿ ಸಚಿವಾಲಯ ಸ್ಪಷ್ಟಪಡಿಸಿದೆ. ‘ನಮ್ಮ ವಾಯುಪಡೆಯು ಕೇವಲ ತಾಲಿಬಾನ್ ಮತ್ತು ಪಾಕಿಸ್ತಾನ ವಿರೋಧಿ ಉಗ್ರಗಾಮಿಗಳ ಅಡಗುದಾಣಗಳು, ಶಸ್ತ್ರಾಸ್ತ್ರ ಸಂಗ್ರಹಣಾ ಕೇಂದ್ರಗಳು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡು ನಿಖರ ದಾಳಿ ನಡೆಸಿದೆ” ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಕ್ತಾರ ಮೊಶರಫ್ ಜೈದಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *