
Puneeth Rajkumar Birthday: ಪುನೀತ್ ರಾಜ್ ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಇಂದು ಬದುಕಿದ್ದರೆ ಅಭಿಮಾನಿಗಳು ಅದ್ದೂರಿಯಾಗು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಾರೆ. ಅವರು ಇಲ್ಲದೆ ಇರುವುದು ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇದ್ದರು ಎಂಬುದು ವಿಶೇಷ.
ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿ ಹಲವು ಜನರಿಗೆ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿ ಬಂದ ಅನೇಕರು ಗೆಲುವು ಕಾಣಬಹುದಾಗಿದೆ. ಅಂಥವರಿಗೆ ಪುನಿತ್ ಸಹಾಯ ಮಾಡಿದಂತೆ. ಆದರೆ, ಈ ಬಗ್ಗೆ ಯಾರೊಬ್ಬರಿಗೂ ಹೇಳದಂತೆ ಅವರು ಕಂಡೀಷನ್ ಹಾಕುತ್ತಿದ್ದಾರೆ. ಇದು ಅವರ ಹೆಚ್ಚುಗಾರಿಕೆ.
ಇನ್ನು, ಅವರ ಕೊನೆಯ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕಷ್ಟು ಗಮನ ಸೆಳೆಯಿತು. ಈ ಪ್ರಾಜೆಕ್ಟ್ ಶೂಟ್ ಗಾಗಿ ಅವರು ಉತ್ತರ ಕನ್ನಡ, ಚಾಮರಾಜ ನಗರ ಸೇರಿದಂತೆ ಅನೇಕ ಕಡೆ ಸುತ್ತಾಟ ನಡೆಸಿದ್ದರು. ಈ ವೇಳೆ ಸೆಟ್ಗೆ ಸಹಾಯಕ್ಕೆ ಬಂದ ಅನೇಕರಿಗೆ ಅವರು ಸಹಾಯ ಮಾಡುತ್ತಿದ್ದರು.
ಪುನೀತ್ ಅವರು 13 ವರ್ಷಗಳ ಕಾಲ ಉಚಿತವಾಗಿ ಕೆಎಂಎಫ್ನ ರಾಯಭಾರಿಯಾಗಿದ್ದರು. ಪ್ರವಾಹ, ಕೋವಿಡ್ ಹೀಗೆ ಪ್ರಕೃತಿ ವಿಕೋಪಗಳ ಸಮಯದಲ್ಲಿ ಅಪ್ಪು ಹಣವನ್ನು ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ನೀಡಿದ ಹಲವು ಪಟ್ಟಿಗಳಿವೆ. ಇದು ಅಚರ ಹೆಚ್ಚುಗಾರಿಕೆ. ‘ಶಿಕ್ಷಣದ ಹಕ್ಕು’ ಜಾಹೀರಾತಿನಲ್ಲಿಯೂ ಸಂಭಾವನೆ ಪಡೆಯದೇ ನಟಿಸಿದ್ದರು. ಡಾ. ರಾಜಕುಮಾರ್ ಟ್ರಸ್ಟ್ ಮೂಲಕ ಹೆಣ್ಣುಮಕ್ಕಳ ಶೇಯೋಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಇನ್ನೂ ಸಾಕಷ್ಟು ಸಹಾಯವನ್ನು ಅವರು ಮಾಡಿದ್ದಾರೆ. ಆದರೆ, ಅನೇಕ ವಿಷಯಗಳು ಹೊರಗೆ ಬಂದಿಲ್ಲ.
ಇದನ್ನೂ ಓದಿ: ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್
ಇಂದು ಕುಟುಂಬದವರು ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರೋ ಸಮಾಧಿ ಬಳಿ ತೆರಳಲಿದೆ. ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.