ಪುನೀತ್ ಬಾಲನಟನಾಗಿ ನಟಿಸಿದ ಸಿನಿಮಾಗಳು ಇವು; ಒಂದಕ್ಕಿಂತ ಒಂದು ಸೂಪರ್

ಪುನೀತ್ ಬಾಲನಟನಾಗಿ ನಟಿಸಿದ ಸಿನಿಮಾಗಳು ಇವು; ಒಂದಕ್ಕಿಂತ ಒಂದು ಸೂಪರ್


ಪುನೀತ್ ಬಾಲನಟನಾಗಿ ನಟಿಸಿದ ಸಿನಿಮಾಗಳು ಇವು; ಒಂದಕ್ಕಿಂತ ಒಂದು ಸೂಪರ್

ಬಾಲ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡ ಕನ್ನಡಿಗರ ಪ್ರೀತಿಯ ಅಪ್ಪು ಇಂದು ನಮ್ಮ ಜೊತೆ ಇಲ್ಲ. ಇಂದು (ಮಾರ್ಚ್ 17) ಪುನೀತ್ ಜನ್ಮದಿನ. ಅವರು ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲರಿಂದಲೂ ಅವರು ಭೇಷ್ ಎನಿಸಿಕೊಂಡರು. ಅವರು ಆಗಲೇ ರಾಷ್ಟ್ರ ಪ್ರಶಸ್ತಿ ಕೂಡಿದ್ದಾರೆ. ಅವರು ಬಾಲ ಕಲಾವಿದನಾಗಿ ನಟಿಸಿದ ಸಿನಿಮಾಗಳ ವಿವರ ಇಲ್ಲಿದೆ.

  1. ಪುನೀತ್ ನಟನೆಯ ಮೊದಲ ಚಿತ್ರ ಪ್ರೇಮದ ಕಾಣಿಕೆ. 1976ರಲ್ಲಿ ಚಿತ್ರ ಪ್ರಕಟವಾಗಿತ್ತು. ಶಿಶುವಾಗಲೇ ಬಣ್ಣದ ಲೋಕದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು.
  2. 1977ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಚಿತ್ರದಲ್ಲಿಯೂ ಅಶೋಕ್ ಎಂಬ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದರು.
  3. 1978ರಲ್ಲಿ ‘ತಾಯಿಗೆ ತಕ್ಕ ಮಗ’ ಸಿನಿಮಾದಲ್ಲಿ ಅಪ್ಪು ನಟಿಸಿದರು.
  4. 1980ರಲ್ಲಿ ‘ವಸಂತ ಗೀತ’ ಚಿತ್ರ ಬಿಡುಗಡೆಯಾಗಿತ್ತು. ಇದರಲ್ಲಿ ರಾಜಕುಮಾರ್ ನಟಿಸಿದ್ದರು.
  5. 1981ರಲ್ಲಿ ಬಿಡುಗಡೆಯಾದ ‘ಭಾಗ್ಯವಂತ’ ಚಿತ್ರದಲ್ಲಿಯೂ ಅಪ್ಪು ಬಾಲನಟನಾಗಿ ಬಣ್ಣ ಹಚ್ಚಿದರು.
  6. ಬಾಲ ನಟನಾಗಿ ಅವರಿಗೆ ಸಾಲು ಸಾಲು ಆಫರ್‌ಗಳು ಬರುತ್ತಿದ್ದವು. 1982ರಲ್ಲಿ ರಿಲೀಸ್ ಆದ ‘ಹೊಸ ಬೆಳಕು’ ಚಿತ್ರದಲ್ಲಿ ಅಭಿನಯಿಸಿದ್ದರು.
  7. ಅದೇ ವರ್ಷ ಬಿಡುಗಡೆಯಾದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಅದ್ಭುತ ನಟನೆಯ ಮೂಲಕ ಜನಪ್ರಿಯತೆಯನ್ನು ಪಡೆದರು.
  8. ವಿಷ್ಟುವಿನ ಭಕ್ತನಾಗಿ ಮಿಂಚಿದ ‘ಭಕ್ತ ಪ್ರಹ್ಲಾದ’ ಸಿನಿಮಾ ಗಮನ ಸೆಳೆಯಿತು. ಈ ಚಿತ್ರವು 1983 ರಲ್ಲಿ ಚಿತ್ರ ಬಿಡುಗಡೆಯಾಗಿತ್ತು.
  9. ಪುನೀತ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ ಸಿನಿಮಾ ಎಂದರೆ ಅದು ಎರಡು ನಕ್ಷತ್ರಗಳು. 1983ರಲ್ಲಿ ಚಿತ್ರ ಯಶಸ್ಸು ಕಂಡಿತು.
  10. 1984ರಲ್ಲಿ ರಿಲೀಸ್ ಆದ ಯಾರಿವನು ಚಿತ್ರದಲ್ಲಿ ಪುನೀತ್ ನಟನೆ ಅಭಿಮಾನಿಗಳನ್ನು ಖುಷಿಪಡಿಸಿತ್ತು.
  11. 1985ರಲ್ಲಿ ಬಿಡುಗಡೆಯಾದ ‘ಬೆಟ್ಟದ ಹೂವು’ ಚಿತ್ರ ಪುನೀತ್ ಸಿನಿ ಬದುಕಿಗೆ ಭದ್ರ ಬುನಾದಿ ಹಾಕಿತು. ಇದಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
  12. 1988ರಲ್ಲಿ ಬಿಡುಗಡೆ ಕಂಡ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರ ಸೂಪರ್ ಹಿಟ್ ಆಗುತ್ತಿದೆ. ಪುನೀತ್ ನಟನೆ ಅಭಿಮಾನಿಗಳ ಮನಸ್ಸನ್ನು ಸ್ಪರ್ಶಿಸಿತ್ತು.
  13. ಬಾಲ ನಟನಾಗಿ ಅಪ್ಪು ನಟಿಸಿದ ಕೊನೆಯ ಚಿತ್ರ ‘ಪರಶುರಾಮ’. ಅಪ್ಪು ಎನ್ನುವ ಹೆಸರಿನ ಪಾತ್ರವನ್ನು ಈ ಚಿತ್ರದಲ್ಲಿ ಪುನೀತ್ ನಟಿಸಿದ್ದರು. ಆ ಬಳಿಕ ‘ಅಪ್ಪು’ ಸಿನಿಮಾ ಮೂಲಕ ಹೀರೋ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *