110 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 475 ಕೋಟಿ ರೂಪಾಯಿ ಯೋಜನೆ ಸದ್ದಿಲ್ಲದೇ ಆರಂಭ! | Gundlupet Chamarajanagar Rs 475 Crore Project To Fill 110 Lakes And Reservoirs With Water Has Begun Without A Hitch Mrq

110 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 475 ಕೋಟಿ ರೂಪಾಯಿ ಯೋಜನೆ ಸದ್ದಿಲ್ಲದೇ ಆರಂಭ! | Gundlupet Chamarajanagar Rs 475 Crore Project To Fill 110 Lakes And Reservoirs With Water Has Begun Without A Hitch Mrq



110 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 475 ಕೋಟಿ ರೂಪಾಯಿ ಯೋಜನೆ ಸದ್ದಿಲ್ಲದೇ ಆರಂಭ! | Gundlupet Chamarajanagar Rs 475 Crore Project To Fill 110 Lakes And Reservoirs With Water Has Begun Without A Hitch Mrq

110 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರೆತಿದೆ. ಭೂಮಿ ಪೂಜೆಗೂ ಮುನ್ನವೇ, ನಂಜನಗೂಡು ಬಳಿ ಪೈಪ್‌ಲೈನ್‌ಗಾಗಿ ಅಲೈನ್ಮೆಂಟ್‌ ಸರ್ವೆ ಕಾರ್ಯ ಸದ್ದಿಲ್ಲದೆ ಆರಂಭವಾಗಿದೆ. ಈ ₹475 ಕೋಟಿ ಮೊತ್ತದ ಯೋಜನೆ ಇದಾಗಿದೆ.

ರಂಗೂಪುರ ಶಿವಕುಮಾರ್‌

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೂರಾಹತ್ತು ಕೆರೆ, ಕಟ್ಟೆಗಳಿಗೆ ಕಬಿನಿ ನದಿ ಮೂಲದಿಂದ ನೀರು ತುಂಬಿಸುವ ಎರಡು ಹಂತದ ಕಾಮಗಾರಿಯಲ್ಲಿ ಮೊದಲ ಹಂತದ ಕಾಮಗಾರಿಗೆ ಭೂಮಿ ಪೂಜೆಗೂ ಮುನ್ನವೇ ಸದ್ದಿಲ್ಲದೇ ಅಲೈನ್ಮೆಂಟ್‌ ಸರ್ವೆ ಆರಂಭವಾಗಿದೆ.

ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿಲ್ಲ/ ತುಂಬಿಸಿದ್ದೀನಿ ವಿಚಾರದಲ್ಲಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಬೆಂಬಲಿಗರ ಪರ, ವಿರೋಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅಲೈನ್ಮೆಂಟ್‌ ಸರ್ವೆ ಕಾರ್ಯ ನಂಜನಗೂಡು ಬಳಿಯ ಗಾಂಧಿಗ್ರಾಮದ ಬಳಿಯಿಂದ ಶುರುವಾಗಿದೆ.

ತಾಲೂಕಿನ ನೂರಾಹತ್ತು ಕೆರೆ,ಕಟ್ಟೆಗಳಿಗೆ ಕಬಿನಿ ನದಿಯಿಂದ ಎರಡು ಹಂತದಲ್ಲಿ ನೀರು ತುಂಬಿಸುವ ಯೋಜನೆ 475 ಕೋಟಿ ಅಂದಾಜು ಮೊತ್ತದ ಕಾಮಗಾರಿ ಕಳೆದ ಫೆ.12 ರಂದು ಸ್ಟಾರ್‌ ಬಿಲ್ಡರ್‌ ಕಂಪನಿಗೆ 402 ಕೋಟಿಗೆ ಟೆಂಡರ್‌ ಪಡೆದಿದ್ದಾರೆ. ಅಲ್ಲದೆ ಸ್ಟಾರ್‌ ಕಂಪನಿಗೆ ಕಾವೇರಿ ನೀರಾವರಿ ನಿಗಮ ಕಳೆದ ಫೆ.12 ರಂದು ಕಾಮಗಾರಿ ಆರಂಭಕ್ಕೆ ವರ್ಕ್ ಆರ್ಡರ್‌ ನೀಡಲಾಗಿದೆ. ಗುತ್ತಿಗೆ ಪಡೆದ ಸ್ಟಾರ್‌ ಕಂಪನಿಯು ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದಿಂದ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ತನಕ ಮೊದಲನೇ ಹಂತದ ಅಲೈನ್ಮೆಂಟ್‌ ಸರ್ವೆ ನಡೆಸಿದ್ದಾರೆ.

ಅಲೈನ್ಮೆಂಟ್‌ನ 2ನೇ ಹಂತದ ಸರ್ವೆ ಕಾರ್ಯ ಕೂಡ ಪ್ರಗತಿಯಲ್ಲಿದೆ. ಅಲೈನ್ಮೆಂಟ್‌ ಸರ್ವೆಯಲ್ಲಿ ಪೈಪ್‌ ಲೈನ್‌ ಸರ್ವೆ ಹಾಗೂ ಪಂಪ್‌ ಹೌಸ್‌ ಜಾಗದ ಸರ್ವೆ ನಡೆಸಲಾಗಿದ್ದು, 2ನೇ ಹಂತ ಅಲೈನ್ಮೆಂಟ್‌ ಸರ್ವೆ ಕೂಡ ಚುರುಕಾಗಿ ನಡೆಯುತ್ತಿದೆ.

ಪತ್ರ ವ್ಯವಹಾರ

ಒಂದೆಡೆ ಅಲೈನ್ಮೆಂಟ್‌ ಸರ್ವೆ ಪ್ರಥಮ ಹಂತ ಮುಗಿದು, 2 ನೇ ಹಂತ ಪ್ರಗತಿಯಲ್ಲಿದ್ದರೆ,ಮತ್ತೊಂದೆಡೆ ಗುತ್ತಿಗೆ ಪಡೆದ ಸ್ಟಾರ್‌ ಕಂಪನಿ ಯೋಜನೆಗೆ ತುರ್ತಾಗಿ ಬೇಕಾದ ವಿದ್ಯುತ್‌ ಸಂಪರ್ಕ, ನೀರೆತ್ತುವ ಯಂತ್ರ, ಪೈಪ್‌ಲೈನ್‌ ಸಂಬಂಧ ಪತ್ರ ವ್ಯವಹಾರ ನಡೆಸುತ್ತಿದೆ.

ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದ ಬಳಿಯ ಕಬಿನಿ ನದಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎರಡು ಹಂತಗಳಲ್ಲಿ ನೂರತ್ತು ಕೆರೆ,ಕಟ್ಟೆಗಳಿಗೆ ತಾಲೂಕಿನಲ್ಲಿ ಕುಡಿಯುವ ನೀರು ಉದ್ದೇಶಕ್ಕಾಗಿ ನೀರನ್ನು ಎತ್ತುವ ಯೋಜನೆ ಎರಡು ಹಂತಗಳಲ್ಲಿ.

3 ವರ್ಷ ಕಾಲಾವಧಿ

ನೂರಾಹತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷದ ಕಾಲಾವಧಿಯಿದ್ದು, ಕೆಲಸ ಪೂರ್ಣಗೊಂಡ ಪ್ರಮಾಣ ಪತ್ರ ನೀಡಿದ ನಂತರ ಗುತ್ತಿಗೆ ಪಡೆದ ಕಂಪನಿ 5 ವರ್ಷದ ತನಕ ದೋಷ ಹಾಗೂ ನಿರ್ವಹಣೆ ಮಾಡಬೇಕಿದೆ.

ಯೋಜನೆ ಹಿನ್ನಲೆ?

ತಾಲೂಕಿನ ನೂರತ್ತು ಕೆರೆ,ಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಕನಸು ಹೊತ್ತು ಈ ಕೆರೆ ನೀರು ತುಂಬಿಸುವ ಯೋಜನೆಗೆ ಕಳೆದ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಸಿ.ಎಸ್. ನಿರಂಜನ್‌ ಕುಮಾರ್‌ ಡಿಪಿಆರ್‌ ಮಾಡಿಸಿದ್ದರು.

ಆದರೆ ನೂರತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಬಿಜೆಪಿ ಸರ್ಕಾರ ಜಸ್ಟೀಸ್‌ ನೀಡಿತ್ತು. ಒಂದೇ ಸಲ ೪೩೦ ಕೋಟಿ ಅನುದಾನ ನೀಡಲು ಆಗುವುದಿಲ್ಲ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿರಲಿಲ್ಲ. ಎರಡು ಹಂತದಲ್ಲಿ ಅನುದಾನ ನೀಡಲು ಹಣಕಾಸು ಇಲಾಖೆ ಹೇಳಿತ್ತು. ಮತ್ತೆ ಪ್ರಸ್ತಾವ ಸಲ್ಲಿಸಿ ಎನ್ನುವ ವೇಳೆಗೆ 2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬಂದ ಕಾರಣ ಯೋಜನೆಗೆ ಬ್ರೇಕ್‌ ಬಿತ್ತು.

ಇದಾದ ಬಳಿಕ 2023 ರಲ್ಲಿ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾದರು. ಅವರದೇ ಪಕ್ಷದ ಸರ್ಕಾರ ಬಂತು. ನೂರತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಫೈಲ್‌ ಹಿಡಿದು ಮತ್ತೆ ಪ್ರಸ್ತಾವ ಸಲ್ಲಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದರು.

ಇದನ್ನೂ ಓದಿ: ಗಾಲ್ಫ್‌ ಆಡ್ತಾರೆ, ಡ್ಯೂಟಿ ಮಾಡೋಕೆ ಟೈಂ ಇಲ್ಲ; 9 ತಿಂಗಳು ಕಚೇರಿಗೆ ಬಾರದ ಐಎಎಸ್‌, ಆರ್ ಅಶೋಕ್ ಗರಂ, ಯಾರು ಆ ಅಧಿಕಾರಿ?

2025 ಏ.24 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂರಾಹತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ 475 ಕೋಟಿ ಅಂದಾಜು ಮೊತ್ತದ ಯೋಜನೆಗೆ ಒಪ್ಪಿಗೆ ಸೂಚಿಸಿದ್ದರು.

ಗುಂಡ್ಲುಪೇಟೆ ತಾಲೂಕಿನ ನೂರಾಹತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಬಿಡುಗಡೆಯಾದ ಬಳಿಕ ಟೆಂಡರ್‌ ಕೂಡ ಆಗಿದೆ. ಕಾಮಗಾರಿ ಅಗ್ರಿಮೆಂಟ್‌ ಕೂಡ ಆಗಿದೆ.ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಆಹ್ವಾನಿಸಿ ಭೂಮಿ ಪೂಜೆ ಮಾಡಿಸುತ್ತೇನೆ ಎಂದು ಗುಂಡ್ಲುಪೇಟೆ ಶಾಸಕ -ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಅವರದ್ದು ಖಾಲಿ ಚೊಂಬು, ಸಾಲದ ಮೇಲೆ ರೂಪಿಸಿದಬಜೆಟ್‌: ಸಿಟಿ ರವಿ



Source link

Leave a Reply

Your email address will not be published. Required fields are marked *