Headlines

ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ | Demand To Ban Rss And Raw What Did India Said Rejecting Uscirf Report

ನವದೆಹಲಿ: ಆರ್‌ಎಸ್ಎಸ್‌ ಸಂಘಟನೆಯನ್ನು ನಿಷೇಧಿಸಬೇಕು, ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದರ ಜೊತೆಗೆ ಭಾರತದ ಭಾರತದ ಗುಪ್ತಚರ ಸಂಸ್ಥೆ (Research and Analysis Wing) ‘ರಾ’ಗೆ ನಿರ್ಬಂಧ ಹೇರಬೇಕು ಎಂಬ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವಾರ್ಷಿಕ ವರದಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವರದಿಯನ್ನು ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವಸ್ತುನಿಷ್ಠ ಸಂಗತಿಗಳಿಗಿಂತ ಪ್ರಶ್ನಾರ್ಹ ಮೂಲಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳನ್ನು ಅವಲಂಬಿಸಿ ಭಾರತದ ಬಗ್ಗೆ ವಿಕೃತ, ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ಅಮೆರಿಕಾದ ಈ ಆಯೋಗವು ನಿರಂತರವಾಗಿ ತೊಡಗಿಸಿಕೊಂಡಿದೆ. ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗದ (USCIRF) ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಅದರ ಪ್ರೇರಿತ ಮತ್ತು ಪಕ್ಷಪಾತದ ಗುಣಲಕ್ಷಣಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ;  ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವಿನಿಂದ ತೆರವಾದ ಕ್ಷೇತ್ರ: ಅತ್ತಿಗೆ ವಿರುದ್ಧ ಸ್ಪರ್ಧಿಸಲ್ಲ ಎಂದ ಸುಪ್ರಿಯಾ ಸುಳೆ

Source link

Leave a Reply

Your email address will not be published. Required fields are marked *