ವಿರೋಧದ ಬೆನ್ನಲ್ಲೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ತೆಗೆದುಹಾಕಿದ್ದು ನಿಜವೇ?

ವಿರೋಧದ ಬೆನ್ನಲ್ಲೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ತೆಗೆದುಹಾಕಿದ್ದು ನಿಜವೇ?


ವಿರೋಧದ ಬೆನ್ನಲ್ಲೇ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡನ್ನು ತೆಗೆದುಹಾಕಿದ್ದು ನಿಜವೇ?

ಜೋಗಿ ಪ್ರೇಮ್ (ಪ್ರೇಮ್) ನಿರ್ದೇಶನದ ‘ಕೇಡಿ’ ಸಿನಿಮಾ ಈಗ ಸುದ್ದಿಯಾಗಿದೆ. ಇದಕ್ಕೆ ಕಾರಣ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು. ಈ ಹಾಡಿನಲ್ಲಿ ನೋರಾ ಫತೇಹಿ ಹಾಗೂ ಸಂಜಯ್ ದತ್ ನಟಿಸಿದ್ದರು. ಈ ಹಾಡಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿನ ಸಾಹಿತ್ಯವನ್ನು ಟೀಕಿಸಿದರು. ಈ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ತೆಗೆದುಹಾಕಲಾಗಿದೆ. ಆದರೆ, ಇದು ನಿಜವಲ್ಲ.

ಪ್ರೇಮ್ ಅವರು ‘ಕೇಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 30ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಹಾಡಿಗೆ ರಾಜ್ಯದ ಜನತೆ ಬಾಲಿವುಡ್ ಮಂದಿಯೂ ಕ್ಯಾತೆ ತೆಗೆದಿದ್ದರು. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಈ ಚಿತ್ರದ ಹಾಡಿಗೆ ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಕನ್ನಡದಲ್ಲಿ ಹಾಡಿದ್ದಾರೆ. ಹಿಂದಿಯಲ್ಲಿ ರಖೀಬ್ ಆಲಂ ಅವರು ಸಾಹಿತ್ಯ ಬರೆದಿದ್ದು, ಮಂಗ್ಲಿ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಪ್ರೇಮ್ ಬರೆದ ‘ಕೇಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

‘ಸರ್ಸೆ..’ ಹಾಡಿನಲ್ಲಿ ನೋರಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಸಾಕಷ್ಟು ಅಶ್ಲೀಲ ಸಾಹಿತ್ಯ ಇದೆ. ಈ ಹಾಡನ್ನು ಕೇಳಿದ್ದ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್, ‘ಗೀತರಚನಕಾರರು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದನ್ನು ನೋಡಲು ಬೇಸರವಾಗುತ್ತದೆ’ ಎಂದಿದ್ದರು. ಈ ವಿರೋಧದ ಬೆನ್ನಲ್ಲೇ ಹಾಡು ಕೆಲ ಹೊತ್ತು ಯೂಟ್ಯೂಬ್ ನಿಂದ ಮಾಯ ಆಗುತ್ತಿದೆ . ಈಗ ಹಾಡು ಮತ್ತೆ ಮರಳಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ರಿಲೀಸ್‌ಗೆ ಕೆಲವೇ ವಾರಗಳು ಇರುವಾಗ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.

ಪ್ರೇಮ್ ಅವರು ಈ ಮೊದಲು ಈ ರೀತಿಯ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದರು. ಅವರ ನಟನೆಯ ‘ಪ್ರೇಮ್ ಅಡ್ಡ’ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. ಈ ‘ಮೇಲುಕೋಟೆ ಹುಡುಗಿ ಒಬ್ಬಳು’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಮೇಲುಕೋಟೆಯ ಜನರು ವಿರೋಧ ವ್ಯಕ್ತಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *