ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು

ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು

ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು

ಭಾರತೀಯ ಸಂಸ್ಕೃತಿಯಲ್ಲಿ, ಅಡುಗೆಮನೆ, ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಹಿರಿಯರು ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗ್ತಿರಲಿಲ್ಲ. ಚಪ್ಪಲಿ ಧರಿಸಿ ಯಾಕೆ ಅಡುಗೆ ಮಾಡ್ಬಾರದು ಎಂಬುದಕ್ಕೆ ಕಾರಣ ಇಲ್ಲಿದೆ.

ಅಡುಗೆ ಮನೆ ಕೇವಲ ಅಡುಗೆ ಮಾಡುವ ಸ್ಥಳವಲ್ಲ. ಸಂಪತ್ತು ಮತ್ತು ಸಮೃದ್ಧಿಯ ದೇವತೆ ಅನ್ನಪೂರ್ಣ ವಾಸಸ್ಥಾನವೂ ಹೌದು. ಹೊರಗಿನಿಂದ ಕೊಳಕು ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ಅಡುಗೆಮನೆಗೆ ಪ್ರವೇಶಿಸಿದಾಗ ಅನ್ನಪೂರ್ಣೆಗೆ ಅವಮಾನ ಮಾಡಿದಂತೆ. ಹಿಂದೂ ಧರ್ಮದ ಪ್ರಕಾರ, ದೇವರಿರುವ ಜಾಗಕ್ಕೆ ಚಪ್ಪಲಿ ಧರಿಸಿ ಬರಬಾರದು. ಅಡುಗೆ ಮನೆಗೆ ಚಪ್ಪಲಿ ಧರಿಸಿ ಬರೋದಲ್ದೆ ಅಡುಗೆಯನ್ನು ಚಪ್ಪಲಿ ಧರಿಸಿ ಮಾಡಿದ್ರೆ ತಾಯಿಗೆ ಅವಮಾನ ಮಾಡಿದಂತೆ. ಇದ್ರಿಂದ ತಾಯಿ ಕೋಪಗೊಳ್ಳುತ್ತಾಳೆ.

ವಾಸ್ತು ರಾಜವಲ್ಲಭ ಮತ್ತು ಸಮರಂಗ ಸೂತ್ರಧಾರದಂತಹ ಪ್ರಾಚೀನ ವಾಸ್ತು ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ. ಮನೆಯ ಎರಡು ಜಾಗವನ್ನು ಸದಾ ಶುದ್ಧವಾಗಿಡಬೇಕೆಂದು ಈ ಎರಡೂ ಶಾಸ್ತ್ರಗಳಲ್ಲಿ ಹೇಳಲಾಗಿದೆ. ದೇವರ ಮನೆ ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆ, ಶುದ್ಧತೆ ಮುಖ್ಯ.

ವಾಸ್ತು ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವಿನ ಪ್ರಭಾವ ಶೂಗಳು ಮತ್ತು ಚಪ್ಪಲಿಗಳೊಂದಿಗೆ ಸಂಬಂಧಿಸಿದೆ. ಈ ನಕಾರಾತ್ಮಕ ಶಕ್ತಿಯು ಅಡುಗೆಮನೆಯನ್ನು ತಲುಪಿದಾಗ, ಅದು ಆಹಾರದ ಮೂಲಕ ಇಡೀ ಕುಟುಂಬವನ್ನು ಪ್ರವೇಶಿಸುತ್ತದೆ. ಇದು ಹೆಚ್ಚಿದ ಅನಾರೋಗ್ಯ, ಅನಗತ್ಯ ಜಗಳಗಳು ಮತ್ತು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರ ಮಾತ್ರವಲ್ಲ ಧಾರ್ಮಿಕ ದೃಷ್ಟಿಕೋನದಿಂದಲೂ, ಈ ಅಭ್ಯಾಸವು ತುಂಬಾ ಹಾನಿಕಾರಕವಾಗಿದೆ. ಹೊರಗೆ ಚಪ್ಪಲಿ ಧರಿಸಿ ಓಡಾಡುವ ನಾವು, ಹೊರಗಿನ ಕೊಳಕು, ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಮನೆಗೆ ತರ್ತೇವೆ. ಅದೇ ಚಪ್ಪಲಿಯನ್ನು ಅಡುಗೆ ಮನೆಯಲ್ಲಿ ಬಳಸಿದಾಗ ಕೊಳಕು ನಮ್ಮ ಆಹಾರವನ್ನು ಸೇರಬಹುದು. ಇದರಿಂದ ಕುಟುಂಬದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ಕೆಲವೊಮ್ಮೆ, ಚಳಿಗಾಲದಲ್ಲಿ ನೆಲ ತುಂಬಾ ತಂಪಾಗಿರುತ್ತದೆ. ಇಂಥ ಸಂದರ್ಭದಲ್ಲಿ ಚಪ್ಪಲಿ ಧರಿಸುವುದು ಅನಿವಾರ್ಯವಾಗುತ್ತದೆ. ಕೀಲು ನೋವಿನಿಂದ ಬಳುವವರಿಗೆ ವೈದ್ಯರೇ ಚಪ್ಪಲಿ ಧರಿಸುವ ಸಲಹೆ ನೀಡ್ತಾರೆ. ಆಗ ಚಪ್ಪಲಿಯಿಂದ ದೂರ ಇರಲು ಸಾಧ್ಯವಿಲ್ಲ. ಚಪ್ಪಲಿ ಧರಿಸಿ ಅಡುಗೆ ಮಾಡುವುದು ಅನಿವಾರ್ಯವಾಗುತ್ತದೆ.

ಚಪ್ಪಲಿ ಧರಿಸೋದು ಅನಿವಾರ್ಯ ಎನ್ನುವವರು ಸರಳ ವಾಸ್ತು ರೂಲ್ಸ್ ಫಾಲೋ ಮಾಡ್ಬಹುದು. ಮನೆ ಹೊರಗೆ ಧರಿಸುವ ಚಪ್ಪಲಿ, ಶೂ ಮನೆಯೊಳಗೆ ತರಬೇಡಿ. ಮನೆಯೊಳಗೆ ಅದ್ರಲ್ಲೂ ಅಡುಗೆಮನೆಗೆ ಪ್ರತ್ಯೇಕವಾದ, ಸ್ವಚ್ಛವಾದ ಬಟ್ಟೆ ಅಥವಾ ಉಣ್ಣೆಯ ಚಪ್ಪಲಿ ಬಳಸಿ. ಅದೇ ಚಪ್ಪಲಿ ಧರಿಸಿ ಎಂದಿಗೂ ಮನೆಯಿಂದ ಹೊರಗೆ ಅಥವಾ ಬಾತ್ ರೂಮಿಗೆ ಹೋಗ್ಬೇಡಿ. ಅಡುಗೆಮನೆಯು ಅನ್ನಪೂರ್ಣ ದೇವತೆ ಮತ್ತು ಅಗ್ನಿ ದೇವರ ನೆಲೆಯಾಗಿದೆ. ಅಶುದ್ಧ ಪಾದಗಳೊಂದಿಗೆ ಅಲ್ಲಿಗೆ ಪ್ರವೇಶಿಸುವುದು ಸೂಕ್ತವಲ್ಲ. ನೀವು ಕೊಳಕು ಚಪ್ಪಲಿಯನ್ನು ಅಡುಗೆ ಮನೆಗೆ ತಂದ್ರೆ ನಕಾರಾತ್ಮಕ ಶಕ್ತಿ ಪ್ರವೇಶ ಆಗೋದಲ್ದೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.

Source link

Leave a Reply

Your email address will not be published. Required fields are marked *