Headlines

ಮಹಿಳೆಯನ್ನ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಫಸ್ಟ್ ರಿಯಾಕ್ಷನ್; ಒಂದೊಂದಕ್ಕೂ ಒಂದು ಕಥೆ ಕಟ್ಟಿದರು | Moodabidri Inspector Sandesh Refutes Harassment Allegations Media Interview Sat

ಮಹಿಳೆಯನ್ನ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಫಸ್ಟ್ ರಿಯಾಕ್ಷನ್; ಒಂದೊಂದಕ್ಕೂ ಒಂದು ಕಥೆ ಕಟ್ಟಿದರು | Moodabidri Inspector Sandesh Refutes Harassment Allegations Media Interview Sat



ಮಹಿಳೆಯನ್ನ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಫಸ್ಟ್ ರಿಯಾಕ್ಷನ್; ಒಂದೊಂದಕ್ಕೂ ಒಂದು ಕಥೆ ಕಟ್ಟಿದರು | Moodabidri Inspector Sandesh Refutes Harassment Allegations Media Interview Sat

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ತಮ್ಮ ಮೇಲಿನ ಲೈಂಗಿಕ ಕಿರುಕುಳ ಮತ್ತು ಹಣದ ಬೇಡಿಕೆಯ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕಾಂಪೌಂಡ್ ಹಾರಿದ್ದು ಸಂಬಂಧಿಕರ ಮನೆಯಲ್ಲಿ ನಡೆದ ಜಗಳದ ಕಾರಣಕ್ಕೆ ಎಂದ ಅವರು, ಈಗಾಗಲೇ ಮೇಲಧಿಕಾರಿಗಳಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು/ದಕ್ಷಿಣ ಕನ್ನಡ (ಮಾ.17): ನನ್ನ ಮೇಲೆ ಬಂದಿರುವ ಎಲ್ಲ ಆರೋಪಗಳೂ ಕೂಡ ಸುಳ್ಳು. ಈಗಾಗಲೇ ಬಂದಿರುವ ದೂರುಗಳ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡಿದ್ದು, ಯಾವುದೇ ತಪ್ಪಿಲ್ಲವೆಂದು ಅರ್ಜಿ ವಿಲೇವಾರಿ ಮಾಡಿದ್ದಾರೆ. ಇನ್ನು ಯಾರಿಗೂ ನಾನು ಲೈಂಗಿಕ ಕಿರುಕುಳ ಕೊಟ್ಟಿಲ್ಲ, ಯಾರಿಂದಲೂ ಹಣವನ್ನು ಕೊಟ್ಟಿಲ್ಲವೆಂದು ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ನಾನು ಕಳೆದ ವರ್ಷ 2025ರ ಮೇ ತಿಂಗಳಲ್ಲಿ ನಾನು ಈ ಸ್ಏಷನ್‌ಗೆ ಬಂದಾಗ ಇಲ್ಲಿ ಗಲಾಟೆ ನಡೆಯುತ್ತಿರುತ್ತದೆ. ಆಗ ಹೆಡ್ ಕಾನ್‌ಸ್ಟೇಬಲ್ ರವೀಂದ್ರ ಅವರನ್ನು ಕೇಳಿದಾಗ ಸರ್ ಅದು ಗಂಡ ಹೆಂಡತಿ ಗಲಾಟೆ ಎಂದು ಹೇಳುತ್ತಾರೆ. ಈ ಮಹಿಳೆ ಗಂಡನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ, ಈಗ ಇಲ್ಲಿ ಬಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಾರೆ. ಸುಮ್ಮನೆ ಬಂದು ಇಲ್ಲಿ ಬೊಬ್ಬೆ ಹೊಡೆಯುತ್ತಿದ್ದಾಳೆ, ಯಾರು ಎಂದು ಇನ್ಸ್‌ಪೆಕ್ಟರ್ ಸಂದೇಶ್ ಅವರು ಕೇಳಿದಾಗ ಅವರ ಅಕ್ಕ ಬಂದು ಸರ್ ಇವಳು ವೇಶ್ಯಾವಾಟಿಕೆ ಧಂದೆಯವಳು, ನನ್ನ ಮತ್ತು ನನ್ನ ಗಂಡನ ನಡುವಿನ ಕೇಸಿಗೆ ಸಂಬಂಧಪಟ್ಟಂತೆ ಇಲ್ಲಿ ಬಂದು ಬೊಬ್ಬೆ ಹಾಕುತ್ತಿದ್ದಾಳೆ ಎಂದು ಹೇಳುತ್ತಾರೆ. ನೀನು ಗಂಡ ಹೆಂಡತಿ ನಡುವೆ ಏಕೆ ಬರುತ್ತೀಯಾ ಎಂದು ಹೇಳಿದಾಗ, ನನ್ನ ಅಕ್ಕನ ಗಂಡನನ್ನ ನಾನು ನೋಡಿಕೊಳ್ತೇನೆ ಎಂದು ಹೇಳುತ್ತಾರೆ. ಇದೆಲ್ಲವೂ ಸರಿಯಲ್ಲ ಎಂದು ಗದರಿಸಿ ಹೇಳಿ ಕಳಿಸುತ್ತೇನೆ ಎಂದು ಇನ್ಸ್‌ಪೆಕ್ಟರ್ ಸಂದೇಶ್ ಹೇಳುತ್ತಾರೆ.

ಕಿಡ್ನಿ ಟ್ರಾನ್ಸ್‌ಪ್ಲೆಂಟ್ ವಿಚಾರಕ್ಕೆ ಸುಳ್ಳು ದೂರು

ಇದಾದ ನಂತರ ನಿನ್ನೆ ದೂರು ನೀಡಿದ ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಅವರ ಗಂಡನ ಮೇಲೆ ಕಿಡ್ನಿ ವಿಚಾರದಲ್ಲಿ ಒಂದು ಕೇಸ್ ಆಗಿದೆ. ತಾಕೋಡೆ ಚರ್ಚ್‌ನಲ್ಲಿ ಕಿಡ್ನಿ ಟ್ರಾನ್ಸ್‌ಪ್ಲೆಂಟ್ ಮಾಡುವುದಕ್ಕೆ ಲೆಟರ್ ಕೊಟ್ಟಿರುತ್ತಾರೆ. ಆಗ ಹಣವನ್ನು ಕೊಟ್ಟಿದ್ದಾಗ ಮಹಿಳೆಯ ಗಂಡ ಫೋಕಸ್‌ ಫ್ರೋಸ್ ಮಾಡಿ ಮಹಿಳೆಯ ಅಕೌಂಟ್‌ ನಂಬರ್ ಹಾಕಿರುತ್ತಾರೆ. ಅವರ ಮೇಲೆ ಕೇಸ್ ಹಾಕಿದಾಗ ಅವರನ್ನು ಸ್ಟೇಷನ್‌ಗೆ ಕರೆದುಕೊಂಡು ಬರುತ್ತೇವೆ. ರಾತ್ರಿ ಅವರನ್ನು ಕರೆಸಿ ಮಾತನಾಡಿದ ಸಿಸಿಟಿವಿ ಫೂಟೇಜ್ ಕೂಡ ನಮ್ಮ ಬಳಿ ಇದೆ. ಅವರು ಹೇಳುವಂತೆ ಅವರೇನು ಶೆಡ್ ಹತ್ತಿರ ಬಂದು ಮಾತನಾಡಿಲ್ಲ. ಅವರ ಲಾಯರ್, ಸಂಬಂಧದವರು ಬಂದು ಮಾತನಾಡುತ್ತಾರೆ, ನಂತರ ಅವರನ್ನ ಕಳಿಸುತ್ತೇವೆ. ಆದರೆ, ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿಲ್ಲ, ಅವರ ಬಳಿ ಯಾವುದೇ ಹಣವನ್ನೂ ನಾನು ಕೇಳಿಲ್ಲ, ಇದು ಸತ್ಯಕ್ಕೆ ದೂರವಾದ ವಿಷಯ ಅದು. ಇನ್ನು ಆಡಿಯೋ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡ್ತಾರೆ ಎಂದರು.

ಕಾಂಪೌಂಡ್ ಹಾರಿದ್ದು ನಿಜ, ಅದು ನನ್ನ ಸಂಬಂಧಿಕರ ಮನೆ

ಇನ್ನು ನಿನ್ನೆ ನನ್ನಮೇಲೆ ಆರೋಪ ಮಾಡಿರುವ ಮಹಿಳೆಗೆ ಸಂಬಂಧಿಸಿದಂತೆ ನಾನು ಕಾಂಪೌಂಡ್ ಹಾರಿರುವುದು ನಿಜ, ಅದು ನನ್ನ ಸಂಬಂಧದವರ ಮನೆ. ಆ ಮನೆಯಲ್ಲಿ ಗಂಡ-ಹೆಂಡತಿ ಜಗಳ ಆಗಿರುತ್ತದೆ. ಆಗ ಅವರ ಗಂಡ ನನಗೆ ಕರೆ ಮಾಡಿ ಹೆಂಡತಿ ಫೋನ್ ತೆಗೆಯುತ್ತಿಲ್ಲ ಎಂದು ಹೇಳುತ್ತಾರೆ. ಆಗ ನಾನು ಸಾವಿನ ನಿರ್ಧಾರ ಏನಾದರೂ ಮಾಡಿದ್ದಾರೋ ಎಂಬ ಆತಂಕದಿಂದ ಕಾಂಪೌಂಡ್ ಹಾಕಿ ಮನೆಯೊಳಗಿನ ದೃಶ್ಯವನ್ನು ನೋಡುವ ಪ್ರಯತ್ನ ಮಾಡಿದ್ದೇನೆ. ಇನ್ನು ಮನೆಯೊಳಗೆ ಹೋಗಿ ಅವರಿಗೆ ಏನೂ ಅಗಿಲ್ಲವೆಂಬ ನಿರಾಳತೆಯಿಂದ ಅದೇ ಮಹಿಳೆಯೊಂದಿಗೆ ಡ್ಯಾನ್ಸ್ ಮಾಡಿದ್ದೇನೆ. ಕ್ರಿಶ್ಚಿಯನ್ ಕಮ್ಯೂನಿಟಿಯಲ್ಲಿ ಡ್ಯಾನ್ಸ್ ಮಾಡುವುದು ಸಾಮಾನ್ಯ. ಅವರೊಂದಿಗೆ ನಾವು ಆತ್ಮೀಯವಾಗಿಯೇ ಇದ್ದೇವೆ ಎಂದು ಹೇಳಿದರು.

ದೂರುದಾರರ ಮೇಲೆಯೇ ಆರೋಪ

ಇದೀಗ ಬಂದಿರುವ ದೂರುಗಳ ಕುರಿತಾಗಿ ತನಿಖೆ ನಡೆಯುತ್ತದೆ. ಆದರೆ, ನಾನು ಯಾವುದೇ ತಪ್ಪನ್ನ ಮಾಡಿಲ್ಲ. ಈಗಾಗಲೇ ಮೇಲಧಿಕಾರಿಗಳು ಒಮ್ಮೆ ತನಿಖೆ ಮಾಡಿ, ಕ್ಲೀನ್ ಚಿಟ್ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಮೇಲಿಂದ ಮೇಲೆ ನನ್ನ ಮೇಲೆ ದೂರು ಕೊಡುವ ಅರ್ಜಿ ಹಾಕುತ್ತಿದ್ದಾರೆ ಎಂದು ದೂರುದಾರರ ವಿರುದ್ಧವೇ ಆರೋಪ ಮಾಡಿದರು.



Source link

Leave a Reply

Your email address will not be published. Required fields are marked *