Headlines

ಹಾರ್ಮುಜ್ ಜಲಸಂಧಿಯಿಂದ ಗುಜರಾತ್​ಗೆ ಬಂದ ಭಾರತದ ಎರಡನೇ ಎಲ್​ಪಿಜಿ ಟ್ಯಾಂಕರ್ ನಂದಾದೇವಿ

ಹಾರ್ಮುಜ್ ಜಲಸಂಧಿಯಿಂದ ಗುಜರಾತ್​ಗೆ ಬಂದ ಭಾರತದ ಎರಡನೇ ಎಲ್​ಪಿಜಿ ಟ್ಯಾಂಕರ್ ನಂದಾದೇವಿ


ಹಾರ್ಮುಜ್ ಜಲಸಂಧಿಯಿಂದ ಗುಜರಾತ್ಗೆ ಬಂದ ಭಾರತದ ಎರಡನೇ ಎಲ್ಪಿಜಿ ಟ್ಯಾಂಕರ್ ನಂದಾದೇವಿ

ಜನವರಿ, ಮಾರ್ಚ್ 17: ಹಾರ್ಮುಜ್ ಜಲಸಂಧಿಯಿಂದ ಎಲ್ ಪಿಜಿ ಗ್ಯಾಸ್ ಹೊತ್ತ ಎರಡನೇ ಹಡಗೊಂದು ಭಾರತವನ್ನು ತಲುಪಿದೆ. 45,000 ಮೆಟ್ರಿಕ್ಟನ್ ಎಲ್ಪಿಜಿ ನಂದಾದೇವಿ ಎಂಬ ಹಡಗು ಇಂದು ಗುರುವಾರ ಹೊಂದಿರುವ ಗುಜರಾತ್ ವಡಿನಾರ್ ಬಂದರನ್ನು ತಲುಪಿದೆ. ಮೂಲ ಯೋಜನೆ ಪ್ರಕಾರ ಈ ಹಡಗು ಕಾಂಡ್ಲಾ ಪೋರ್ಟ್ ತಲುಪಬೇಕಿತ್ತು. ಆದರೆ, ಕಾರಣಾಂತರದಿಂದ ವಡಿನಾರ್ ಕಡೆಗೆ ತಿರುಗಿಸಲಾಯಿತು.

ಇರಾನ್ ಯುದ್ಧ ಶುರುವಾದಾಗಿನಿಂದ ಹಾರ್ಮುಜ್ ಜಲಸಂಧಿಗೆ ತಡೆಯಾಗಿದೆ. ಆದರೆ, ಭಾರತ ನಡೆಸಿದ ಮಾತುಕತೆಯ ಫಲವಾಗಿ ಇರಾನ್ ದೇಶವು ಹಾರ್ಮುಜ್ ಜಲಸಂಧಿಯಿಂದ ಈವರೆಗೆ ಮೂರು ಭಾರತೀಯ ಟ್ಯಾಂಕರ್‌ಗಳಿಗೆ ಸಾಗಲು ಒಪ್ಪಿಗೆ ನೀಡಲಾಗಿದೆ. ಶಿವಾಲಿಕ್ ಹಡಗು ನಿನ್ನೆ ಗುಜರಾತ್ ನ ಮುಂದ್ರಾ ಪೋರ್ಟ್ ತಲುಪಿದೆ. ಅಲ್ಲಿ ಸುಮಾರು 45,000 ಟನ್ ಎಲ್ ಪಿಜಿ ಗ್ಯಾಸ್ ಹೊತ್ತು ಬಂದಿದೆ. ಇವತ್ತು ನಂದಾದೇವಿ ಹಡಗು ಆಗಮಿಸಿದೆ. ಇಲ್ಲಿಗೆ ಎರಡು ಹಡಗುಗಳು ಭಾರತದ ತೀರವನ್ನು ತಲುಪಿ. ಇನ್ನೊಂದು ಹಡಗು ದಿನದಲ್ಲಿ ತಲುಪುವ ನಿರೀಕ್ಷೆ ಇದೆ. ಜಗ್ ಲಾಡ್ಕಿ ಎಂಬ ಈ ಹಡಗು ಕೂಡ ಮುಂದ್ರಾ ಪೋರ್ಟ್‌ಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಹಾರ್ಮುಜ್ ಜಲಸಂಧಿಯಲ್ಲಿ ಈ 22 ಭಾರತೀಯ ಹಡಗುಗಳು ಅನುಮತಿಗಾಗಿ ಕಾದು ನಿಂತಿವೆ. ಈ 22 ಹಡಗುಗಳಲ್ಲಿ 611 ಭಾರತೀಯ ನಾವಿಕರಾಗಿದ್ದಾರೆ ಎಂದು ಸರ್ಕಾರದ ದತ್ತಾಂಶ ಹೇಳುತ್ತಿದೆ. ಈಗ ಒಂದೊಂದೇ ಹಡಗನ್ನು ಹೊರತರಿಸಲು ಭಾರತ ಪ್ರಯತ್ನಿಸುತ್ತಿದೆ. ಆ ಪ್ರಯತ್ನ ಇರಾನ್‌ನ ಮನವೊಲಿಸುವಾಗುತ್ತಿವೆ.

ಎಲ್ ಪಿಜಿ ಬಿಕ್ಕಟ್ಟಿನಲ್ಲಿ ಭಾರತ

ಹಾರ್ಮುಜ್ ಜಲಸಂಧಿ ನಿರ್ಬಂಧಿತವಾಗಿರುವುದರಿಂದ ಜಾಗತಿಕವಾಗಿ ತೈಲ ಮತ್ತು ಅನಿಲಗಳ ಬೆಲೆ ಗಗನಕ್ಕೇರಿದೆ. ಎರಡೂ ಪೂರೈಕೆಗಳಿಗೆ ವ್ಯತ್ಯಯ ಆಗಿದೆ. ಭಾರತಕ್ಕೆ ಪೆಟ್ರೋಲ್, ಡೀಸಲ್ಗಿಂತ ಎಲ್ಪಿಜಿ ಬಿಕ್ಕಟ್ಟು ಹೆಚ್ಚು ತೀವ್ರತೆಯಲ್ಲಿದೆ. ಭಾರತ ಆಮದು ಮಾಡಿಕೊಳ್ಳುವ ಎಲ್ಪಿಜಿಯಲ್ಲಿ ಬಹುತೇಕ ಭಾಗವು ಹಾರ್ಮುಜ್ ಜಲಸಂಧಿ ಸಾಗಣೆ ಆಗುತ್ತದೆ. ಹೀಗಾಗಿ, ಎಲ್ಪಿಜಿ ಬಿಕ್ಕಟ್ಟು.

ಇದನ್ನೂ ನೋಡಿ: ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್‌ನ ಬಂದರು ತಲುಪಿದ ಭಾರತದ ಎಲ್‌ಪಿಜಿ ಟ್ಯಾಂಕರ್

ಭಾರತವು ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ನೈಸರ್ಗಿಕ ಅನಿಲದಲ್ಲಿ ಅರ್ಧದಷ್ಟನ್ನು ದೇಶೀಯವಾಗಿ ಬಳಸಲಾಗುತ್ತಿದೆ. ಉಳಿದ ಅರ್ಧವನ್ನು ಬೇರೆ ಬೇರೆ ಭಾಗಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಎಲ್ಪಿಜಿ ಗ್ಯಾಸ್ ಗೆ ಗಲ್ಫ್ ಮೇಲೆ ಅವಲಂಬನೆ ಹೆಚ್ಚಿರುವುದು ಭಾರತಕ್ಕೆ ಸ್ವಲ್ಪ ಇಕ್ಕಟ್ಟಿನ ಸ್ಥಿತಿ ತಂದಿರುವುದು ಹೌದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *