Headlines

ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು: ಹಠಮಾರಿ ಎಮ್ಮೆ ಕರುವಿಗೆ ಬಾಲಕಿಯ ಸವಾಲು: ವೀಡಿಯೋ ವೈರಲ್ | Buffalo Calf And Little Girl Video Goes Viral

ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು: ಹಠಮಾರಿ ಎಮ್ಮೆ ಕರುವಿಗೆ ಬಾಲಕಿಯ ಸವಾಲು: ವೀಡಿಯೋ ವೈರಲ್ | Buffalo Calf And Little Girl Video Goes Viral



ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು: ಹಠಮಾರಿ ಎಮ್ಮೆ ಕರುವಿಗೆ ಬಾಲಕಿಯ ಸವಾಲು: ವೀಡಿಯೋ ವೈರಲ್ | Buffalo Calf And Little Girl Video Goes Viral

ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳ ವೀಡಿಯೋ ವೈರಲ್ ಆಗಿದ್ದು, ಹೊಲಕ್ಕೆ ಹೋಗಲು ಹಠ ಮಾಡುವ ಎಮ್ಮೆ ಕರುವಿಗೆ ಬಾಲಕಿ ಸವಾಲು ಹಾಕಿದ್ದು, ಆಕೆಯ ಮಾತು ನೆಟ್ಟಿಗರ ಮನಗೆದ್ದಿದೆ. ಹಳ್ಳಿಯ ಮುಗ್ಧ ಜೀವನದ ಚಿತ್ರಣವನ್ನು ಕಟ್ಟಿಕೊಡುವ ಈ ವಿಡಿಯೋಗೆ ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಹಳ್ಳಿಯಲ್ಲಿ ಕಳೆಯುವ ಬಾಲ್ಯವೇ ಒಂದು ಚೆಂದ

ಹಳ್ಳಿಯ ಜೀವನವೇ ಒಂದು ರೀತಿ ಚಂದ, ಸುತ್ತಲೂ ಮರ ಗಿಡಗಳು, ಮನುಷ್ಯರ ಜೊತೆ ಜೊತೆಗೆ ಜೀವನ ಮಾಡುವ ಸಾಕುಪ್ರಾಣಿಗಳು ಇವುಗಳ ಜೊತೆ ಕಾಲ ಕಳೆಯುವುದೇ ಒಂದು ರೀತಿಯ ನೆಮ್ಮದಿ, ನಗರದ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಬರುವಂತೆ ತಿಂಗಳಾಂತ್ಯಕ್ಕೆ ಇವುಗಳಿಂದ ವೇತನ ಬರದೇ ಹೋದರು ನೆಮ್ಮದಿಗೆ ಮಾತ್ರ ಯಾವುದೇ ಕೊರತೆ ಇರಲ್ಲ, ಹಳ್ಳಿಯ ಪುಟ್ಟ ಮಕ್ಕಳು ಕೂಡ ಇವುಗಳೊಂದಿಗೆ ಬೆರೆತು ಬದುಕುತ್ತಾರೆ. ಹಸು ಕರುಗಳು, ಎಮ್ಮೆಗಳು, ಆಡು ಮೇಕೆ, ಕೋಳಿ, ನಾಯಿ ಬೆಕ್ಕುಗಳು ಬದುಕಿನ ಜೀವನಾಡಿಯಾಗಿದ್ದು, ಮನೆಯ ಸದಸ್ಯರಂತಿರುವ ಅವುಗಳ ಕೆಲಸ ಮಾಡುತ್ತಲೇ ದಿನದ ಬಹುಪಾಲು ಕಳೆದು ಹೋಗುತ್ತದೆ. ಮನೆಯಲ್ಲೊಂದು ಹಸುವೋ ಎಮ್ಮೆಯೋ ಇದ್ದಾರೆ ಮನೆಯಲ್ಲಿ ಸಮೃದ್ದಿ, ಅದು ನೀಡುವ ಹಾಲು ಕುಡಿದೇ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಹೀಗಿರುವಾಗ ಪುಟ್ಟ ಬಾಲಕಿಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹಠ ಮಾಡುವ ಎಮ್ಮೆ ಕರುವಿಗೆ ಬಾಲಕಿಯ ಸವಾಲು

ಹಳ್ಳಿಯ ಜೀವನ ಗೊತ್ತಿದ್ದವರಿಗೆ ಈ ವೀಡಿಯೋದಲ್ಲಿ ಅಂತಹ ಹೊಸದೇನಿದೆ ಎಂದು ಅನಿಸದೇ ಇರದು. ಏಕೆಂದರೆ ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿದೆ. ಮುಂಜಾನೆ ಎದ್ದು ಹಸು ಕರುಗಳನ್ನು ಹೊಲದಲ್ಲಿ ಕಟ್ಟಲಾಗುತ್ತದೆ. ದೊಡ್ಡವರು ಹಸುಗಳ ಹೊಡೆದು ಕೊಂಡು ಹೋದರೆ ಪುಟ್ಟ ಮಕ್ಕಳು ಕರುಗಳನ್ನು ಹಗ್ಗದಲ್ಲಿ ಹಿಡಿದುಕೊಂಡು ಹೋಗುತ್ತಾರೆ. ಈ ವೇಳೆ ಕರುಗಳು ಹಠ ಮಾಡುತ್ತಾ ಎಳೆದರೂ ಕೂಡ ಬರದೇ ಅಲ್ಲೇ ಹಠ ಹಿಡಿದು ನಿಲ್ಲುತ್ತವೆ. ದೂರ ನಡೆದು ಹೋಗುವುದಕ್ಕೆ ಸೋಮಾರಿತನವಾಗಿ ಈ ಕರುಗಳು ನಿಂತಲ್ಲೇ ನಿಲ್ಲುತ್ತವೆ. ಅದೇ ರೀತಿ ಇಲ್ಲಿ ಪುಟ್ಟ ಬಾಲಕಿ ಕರುವನ್ನು ಹೊಲಕ್ಕೆ ಕಟ್ಟಲು ಕೊಂಡೊಯ್ಯುತ್ತಿದ್ದರೆ ಕರು ಆಕೆಯ ಜೊತೆಗ ಹೋಗುವುದಕ್ಕೆ ಒಪ್ಪದೇ ಹಠ ಮಾಡಿ ಗಟ್ಟಿಯಾಗಿ ನಿಂತಿದೆ. ಈ ವೇಳೆ ಸಿಟ್ಟಿಗೆದ್ದ ಬಾಲಕಿ ಮೈನೇ ಬೀ ತೆರಿ ಮಾ ಕಾ ದೂದ್ ಪಿಯಾ ಹೈ ಎಂದು ಹೇಳುತ್ತಾಳೆ. ಅಂದರೆ ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದಿರೋದು ಎಂದು ಹಠ ಮಾಡಿದ ಎಮ್ಮೆ ಕರುವಿಗೆ ಬಾಲಕಿ ಹೇಳುವುದನ್ನು ಕೇಳಬಹುದು.

ಇದನ್ನೂ ಓದಿ: ನಗುನಗುತ್ತಲ್ಲೇ ಕೊನೆಯುಸಿರೆಳೆದ ಮಹಿಳೆ: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ದುರಂತ: ವೀಡಿಯೋ

ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ನೋಡುಗರು ಹಲವು ಕಾಮೆಂಟ್ ಮಾಡಿದ್ದಾರೆ. ಬಾಲಕಿ ಮಾತಿಗೆ ಎಮ್ಮೆ ಕರು ಹಾಗಿದ್ರೆ ಯಾರು ಹೆಚ್ಚು ಹಾಲು ಕುಡಿದಿದ್ದಾರೆ ನೋಡೋಣ ಅಂತ ಹೇಳಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಂಗಿಂತ ಹೆಚ್ಚು ನಾನೇ ಕುಡಿದಿದ್ದೇನೆ ಎಂದು ಕರು ಹೇಳ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಸೋದರ ಸೋದರಿಯ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಬ್ಬರಿಗೂ ಹಠವೇ ಆದರೂ ಆ ಬಾಲಕಿಯ ಡೈಲಾಗ್ ಮಾತ್ರ ಬೆಂಕಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪುಟಾಣಿ ಒಬ್ಬಳು ದೇಸಿ ಹುಡುಗಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲೆ ಹಲ್ಲೆ ಆರೋಪಿಸಿ RSS ಹಾಗೂ RAW ನಿಷೇಧಕ್ಕೆ ಶಿಫಾರಸು ಮಾಡಿದ ಅಮೆರಿಕಾ ಆಯೋಗಕ್ಕೆ ಭಾರತ ತಿರುಗೇಟು



Source link

Leave a Reply

Your email address will not be published. Required fields are marked *