
ಚೆನ್ನೈ, ಮಾರ್ಚ್ 17: ಕಾಲಿವುಡ್ ಸ್ಟಾರ್ ಪತಿ ವಿಜಯ್ ಕಟ್ಟಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಜೊತೆ ಎಂಡಿಎ ಮೈತ್ರಿ ಮಾಡಿಕೊಳ್ಳಬಹುದು ಎಂದು ಹಲವು ದಿನಗಳ ಕಾಲ ಹರಿದಾಡಿದ್ದ ಸುದ್ದಿ, ಜೊತೆಗೆ, ತಣ್ಣಗಾಗಿ ಹೋಗಿದೆ. ಯಾಕೆ ಈ ಮೈತ್ರಿಯ ಸಾಧ್ಯತೆಯ ಸುದ್ದಿ ನಿಂತು ಕುತೂಹಲದ ಸಂಗತಿ ಎನಿಸಿದೆ. ವರದಿಗಳ ಪ್ರಕಾರ, ಟಿವಿ ಪಕ್ಷದ ಮುಖಂಡರ ಸೂಪರ್ಸ್ಟಾರ್ ರನೀಕಾಂತ್ ವಿಚಾರದಲ್ಲಿ ಆಡಿದ ಒಂದು ಮಾತು ಎನ್ಡಿಎ ಪಾಳಯಕ್ಕೆ ಅಸಮಾಧಾನ ತಂದಿತು.
ರಜನೀಕಾಂತ್ ಬಗ್ಗೆ ಟಿವಿ ಮುಖಂಡ ಹೇಳಿದ್ದು…
ಕೆಲವು ದಿನಗಳ ಹಿಂದೆ ಟಿವಿ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರು ರಜನೀಕಾಂತ್ ರಾಜಕೀಯ ಪ್ರಯತ್ನವನ್ನು ಲೇವಡಿ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಡಿಎಂಕೆ ಬಲಿಷ್ಠರಿಂದ ಬೆದರಿಕೆ ಬಂದಿದ್ದರಿಂದ ರಜನೀಕಾಂತ್ ಅವರು ರಾಜಕೀಯ ಪ್ರವೇಶದ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು ಎಂದು ಟಿವಿ ಮುಖಂಡ ಹೇಳಿದರು. ಡಿಎಂಕೆಯ ಬೆದರಿಕೆಗೆ ರಜನೀಕಾಂತ್ ಬಗ್ಗಿದರೂ, ತಮ್ಮ ನಾಯಕ ದಳಪತಿ ವಿಜಯ್ ಬಗ್ಗಿಲ್ಲ ಎಂಬ ಹೇಳಿಕೆ ಬಿಂಬಿತವಾಗಿತ್ತು.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಹಾರ, ಒಡಿಶಾದಲ್ಲಿ ಎನ್ಡಿಎಗೆ ಭರ್ಜರಿ ಗೆಲುವು; ಕಾಂಗ್ರೆಸ್ಗೆ ಮುಖಭಂಗ
ದಳಪತಿ ವಿಜಯ್ ಅವರನ್ನು ಹೊಗಳುವ ಭರದಲ್ಲಿ ರಜನೀಕಾಂತ್ ಗೆ ಅವಹೇಳನ ಮಾಡಿರುವುದು ಎನ್ ಡಿಎ ಮೈತ್ರಿಕೂಟದ ಬಿಜೆಪಿ ಹಾಗೂ ಎಐಎಡಿಎಂ ಪಕ್ಷದ ಮುಖಂಡರ ಅಸಮಾಧಾನ. ‘ರಜನೀಕಾಂತ್ ಬಹಳ ಗೌರವ ಪಡೆದಿರುವ ವ್ಯಕ್ತಿ. ಅವರ ಘನತೆಗೆ ಕುಂದು ತರುವ ರೀತಿಯಲ್ಲಿ ಮಾತನಾಡುವುದನ್ನು ಸ್ವೀಕರಿಸಲು ಆಗುವುದಿಲ್ಲ. ರಾಜಕೀಯ ಪ್ರವೇಶಿಸುವುದು ಒಬ್ಬ ವ್ಯಕ್ತಿಯ ಹಕ್ಕು. ರಾಜಕೀಯ ಪ್ರವೇಶ ಮಾಡದಿರುವುದು ಕೂಡ ಅವರ ಹಕ್ಕೇ. ಅವರ ನಿರ್ಧಾರದ ಹಿಂದಿನ ಕಾರಣಗಳು. ಅದನ್ನು ಗೌರವಿಸಬೇಕು’ ಎಂದು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ.
ಬಿಜೆಪಿ ನಾಯಕ ಕೆ ಅಣ್ಣಾಮಲೈ ಕೂಡ ಟಿವಿಕೆ ಮುಖಂಡನ ಹೇಳಿಕೆಯನ್ನು ಖಂಡಿಸಿದ್ದಾರೆ. ಒಬ್ಬ ಸೂಪರ್ ಸ್ಟಾರ್ 50 ವರ್ಷಕ್ಕಿಂತ ಹೆಚ್ಚು ವರ್ಷ ತನ್ನ ಸ್ಟಾರ್ ಪಟ್ಟವನ್ನು ಉಳಿಸಿಕೊಳ್ಳಲು ಆತನ ಮಾನಸಿಕ ಸ್ಥೈರ್ಯವನ್ನು ತೋರಿಸಲಾಗಿದೆ ಎಂದು ಅಣ್ಣಾಮಲೈನಿನಲ್ಲಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಿಂದ ಗುಜರಾತ್ಗೆ ಬಂದ ಭಾರತದ ಎರಡನೇ ಎಲ್ಪಿಜಿ ಟ್ಯಾಂಕರ್ ನಂದಾದೇವಿ
ರಜನೀಕಾಂತ್ ಅವರು ಕೆಲವು ವರ್ಷಗಳ ಹಿಂದೆ ಸಕ್ರಿಯ ರಾಜಕಾರಣ ಪ್ರವೇಶ ಮಾಡಲು ಯೋಚಿಸುತ್ತಿದ್ದರು. ಆದರೆ, ಕೆಲವು ದಿನಗಳ ನಂತರ ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ