
ಬೆಂಗಳೂರು, (ಮಾರ್ಚ್ 17): ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮೊಟ್ಟೆ ವ್ಯಾಪಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಯುದ್ಧದ ಪರಿಣಾಮ, ಗ್ಯಾಸ್ ದರ ಏರಿಕೆ, ಹಾಗೂ ರಂಜಾನ್ ಸಮಯದಲ್ಲಿ ಹೋಟೆಲ್‌ಗಳ ಕಾರ್ಯಾಚರಣೆ ಕಡಿಮೆಯಾಗಿರುವುದು ಮೊಟ್ಟೆ ಮಾರುಕಟ್ಟೆಗೆ ನೇರ ಹೊಡೆತ ನೀಡಿದೆ. ಇದರಿಂದ ಮೊಟ್ಟೆಯ ಬೇಡಿಕೆ ಕುಸಿದಿದ್ದು, ಮೊಟ್ಟೆಯ ದರ ಕುಸಿತವಾಗಿದೆ. ಇದರಿಂದ ವ್ಯಾಪಾರಸ್ಥರು ಆತಂಕದಲ್ಲಿ ಮುಳುಗಿದ್ದಾರೆ. ಇನ್ನು ಈ ಬಗ್ಗೆ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ್ ಅವರು ಟಿವಿ9 ಜೊತೆ ಮಾತನಾಡಿ, ಕೋಳಿ ಮೊಟ್ಟೆ ರೈತರಿಗೆ ಆಗುವ ತೊಂದರೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.